ಸಂಸ್ಕಾರ ಭಾರತೀ ಕರ್ನಾಟಕ (ನೋಂ) ದಕ್ಷಿಣ ಪ್ರಾಂತದ ಕಲೆ ಮತ್ತು ಸಾಹಿತ್ಯಕ್ಕೆ ಸಮರ್ಪಿತವಾದ ರಾಷ್ಟ್ರೀಯ ಸಂಘಟನೆಯ ಈ ವರ್ಷದ ಮೊದಲ ಕಾರ್ಯಕ್ರಮ ಉಡುಪಿ ಕ್ಷೇತ್ರಾಧಿಪತಿ ಅನಂತೇಶ್ವರ ದೇವರ ಹಾಗೂ ರಾಮನ ಸನ್ನಿಧಿಯಲ್ಲಿ ಮಾರ್ಚ್ 22ನೇ ತಾರೀಕಿನಂದು ನಡೆಯಿತು. ಸಮಯಕ್ಕೆ ಸರಿಯಾಗಿ 1-45 ಕ್ಕೆ ಕಲಾವಿದರನ್ನು ಸ್ವಾಗತಿಸಿ, ಧ್ಯೇಯ ಗೀತೆಯನ್ನು ಸಮೂಹವಾಗಿ ಹಾಡಲಾಯಿತು.
ಸಂಸ್ಕಾರ ಭಾರತೀ ಸಂಘಟನೆಯ ಉದ್ದೇಶ ತಿಳಿಸಿ, ಮತ್ತೊಮ್ಮೆ ಎಲ್ಲಾ ಕಲಾವಿದರಿಗೂ ಶಾಲು ಹಾಕಿ ಪರಿಚಯಿಸಿ 2 ಗಂಟೆಗೆ ಪ್ರಸಂಗ ಪ್ರಾರಂಭವಾಯಿತು.
“ಸೀತಾರಾಮರ ಪಂಚವಟಿ ಪಾವನಲೀಲೆ” ಎಂಬ ಅದ್ಭುತ ಯಕ್ಷಗಾನ ತಾಳಮದ್ದಳೆ ಕೂಟದಲ್ಲಿ ಭಾಗವಹಿಸಿ, ಯಕ್ಷಗಾನ ಪ್ರಿಯರಿಗೆ ರಸದೌತಣವನ್ನು ಉಣಬಡಿಸಿದ ಎಲ್ಲಾ ಕಲಾವಿದರಿಗೂ ನಮ್ಮ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಅಭಿವಂದನೆಗಳು.
ಭಾಗವತರಾಗಿ ಶ್ರೀಯುತ ದೇವಿ ಪ್ರಸಾದ್ ಕಟೀಲ್ ಅವರು ತಮ್ಮ ಗಾನಮಾಧುರ್ಯದಿಂದ ಕಥೆಗೆ ಜೀವ ತುಂಬಿದರು.
ಮೃದಂಗ ಮತ್ತು ಚಂಡೆಯಲ್ಲಿ ಶ್ರೀಯುತ ಮುರಳಿಧರ್ ಕಟೀಲ್ ಹಾಗೂ ಶ್ರೀಯುತ ಗಣೇಶ್ ಭಟ್ ಅವರು ತಾಳಲಯದ ಸೊಗಸಿನಿಂದ ಪ್ರದರ್ಶನವನ್ನು ಮೆರಗುಗೊಳಿಸಿದರು.
ಚಕ್ರತಾಳದಲ್ಲಿ ಶ್ರೀಯುತ ಜಯಕರ್ ಬೈಲೂರು ಅವರು ಲಯಬದ್ಧತೆಯನ್ನು ಅಲಂಕರಿಸಿದರು.
ರಾಮನಾಗಿ ಶ್ರೀಯುತ ಡಾ. ಶಿವಕುಮಾರ್ ಅಳಗೊಡ್ ಅವರು ಧೈರ್ಯ, ಶಾಂತಸ್ವಭಾವ ಮತ್ತು ಗಂಭೀರತೆಯನ್ನು ಅದ್ಭುತವಾಗಿ ಮೂಡಿಸಿದರು.
ಲಕ್ಷ್ಮಣನಾಗಿ ಶ್ರೀಯುತ ಮಹಿಂದ್ರ ಆಚಾರ್ ಅವರು ಸಹೋದರ ಪ್ರೀತಿಯನ್ನು ಮನಮುಟ್ಟುವಂತೆ ಪ್ರದರ್ಶಿಸಿದರು. ಮತ್ತು ಶೂರ್ಪನಖಿಯ ಜೊತೆ ಮಾತಾಡುವ ಶೈಲಿ ಅವರ ಮಾತುಗಳು ತುಂಬಾ ಸೊಗಸಾಗಿ ಮೂಡಿಬಂತು.
ಸೀತೆಯಾಗಿ ಶ್ರೀಮತಿ ಅಮಿತ ಕ್ರಮಧಾರಿ ಅವರು ಪಾವಿತ್ರ್ಯ, ಸೌಮ್ಯತೆ ಮತ್ತು ಭಾವನಾತ್ಮಕತೆಯನ್ನು ಸುಂದರವಾಗಿ ವ್ಯಕ್ತಪಡಿಸಿದರು.
ಋಷಿಗಳಾಗಿ ಶ್ರೀಯುತ ಡಾ. ಹರೀಶ್ ಜೋಶಿ ಅವರು ಶಾಂತ ಮತ್ತು ಗಂಭೀರ ವ್ಯಕ್ತಿತ್ವವನ್ನು, ಋಷಿಗಳ ನಿಜವಾದ ನಡೆಯನ್ನು ಚೆನ್ನಾಗಿ ಪ್ರತಿಬಿಂಬಿಸಿದರು.
ಶೂರ್ಪನಖಿಯಾಗಿ ಶ್ರೀಯುತ ರಮಣ ಆಚಾರ್ ಅವರು ಪಾತ್ರದ ಉಗ್ರತೆ ಮತ್ತು ನಾಟಕೀಯತೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ತೋರಿಸಿದರು. ಸದಾ ನೆನಪಿನಲ್ಲಿ ಇರುವಂತೆ ಮಾತುಗಳನ್ನಾಡಿ ಜನ - ಮನ ರಂಜಿಸಿದರು.
ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ಯಕ್ಷಗಾನ ಪರಂಪರೆಯನ್ನು ಉಳಿಸಿ ಬೆಳೆಸುವ ಅಮೂಲ್ಯ ಪ್ರಯತ್ನಗಳಾಗಿವೆ.
ಮತ್ತೊಮ್ಮೆ, ಈ ಅದ್ಭುತ ಪ್ರದರ್ಶನವನ್ನು ನೀಡಿದ ಎಲ್ಲಾ ಕಲಾವಿದರಿಗೂ,
ಸಂಸ್ಕಾರ ಭಾರತೀಯ ಎಲ್ಲಾ ಪದಾಧಿಕಾರಿಗಳಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಹಾಗೂ ಧನ್ಯವಾದಗಳನ್ನು ಸಂಸ್ಕಾರ ಭಾರತೀಯ ಪರವಾಗಿ ಸಲ್ಲಿಸಲಾಯಿತು.

0 ಕಾಮೆಂಟ್‌ಗಳು