ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜು ಉಡುಪಿ ಇಲ್ಲಿ ಯೂತ್ ರೆಡ್ ಕ್ರಾಸ್, ಎನ್‌ಎಸ್‌ಎಸ್, ರೋವರ್ಸ್ ಮತ್ತು ರೇಂಜರ್ಸ್ ಹಾಗೂ ಲಯನ್ಸ್ ಕ್ಲಬ್ ಹಿರಿಯಡ್ಕ, ಕೆ. ಎಂ. ಸಿ ರಕ್ತ ನಿಧಿ ಘಟಕದ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ .ವಿವೇಕ್, ವೈದ್ಯಾಧಿಕಾರಿ, ರಕ್ತ ನಿಧಿ ಘಟಕ, ಕೆ.ಎಂ.ಸಿ ಮಣಿಪಾಲ ಇವರು ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಮಾತನಾಡಿ, ರಕ್ತದಾನವುಮಾನವೀಯತೆ ಮತ್ತು ಸಮಾಜ ಸೇವೆಯ ಮಹತ್ವದ ಕಾರ್ಯವಾಗಿದ್ದು, ಯುವಜನತೆ ಈ ರೀತಿಯ ಸೇವಾ ಚಟುವಟಿಕೆಗಳಲ್ಲಿಹೆಚ್ಚು ಭಾಗವಹಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಲಯನ್ಸ್ ಅಧ್ಯಕ್ಷರು ರಘುವೀರ್ ಶೆಟ್ಟಿಗಾರ್ ಲಯನ್ಸ್ ಕ್ಲಬ್ ಹಿರಿಯಡ್ಕ, ಪಿ.ಎಂ.ಜೆ.ಎಫ್ ಲಯನ್ಸ್ ಹರಿಪ್ರಸಾದ ರೈ ಹಾಗೂ ಎಂ .ಜೆ .ಎಫ್. ಯು. ವಾದಿರಾಜ ರಾವ್ ಉಪಸ್ಥಿತರಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ . ದೇವಿದಾಸ್ ಎಸ್ ನಾಯಕ್ ವಹಿಸಿದ್ದರು. ಅವರು ಮಾತನಾಡಿ, ರಕ್ತದಾನ ಶಿಬಿರಗಳಂತಹ ಸಮಾಜಮುಖಿ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವವನ್ನುಬೆಳೆಸುತ್ತವೆ ಎಂದು ತಿಳಿಸಿದರು. ಕಾರ್ಯಕ್ರಮವನ್ನು ಕನ್ನಡ ವಿಭಾಗದ ಉಪನ್ಯಾಸಕಿ ನಿರೂಪಿಸಿದರು. ತೃತೀಯ ಬಿಸಿಎ ಅನನ್ಯ ಪ್ರಾರ್ಥಿಸಿ,ಇಂಗ್ಲೀಷ್ ವಿಭಾಗದ ಉಪನ್ಯಾಸಕ ಸ್ಟಾಲಿನ್ ಡಿಸೋಜಾ ಸ್ವಾಗತಿಸಿ, ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಸನತ್ ಕೋಟ್ಯಾನ್ ವಂದಿಸಿದರು.

0 ಕಾಮೆಂಟ್‌ಗಳು