ಪಣಿಯಾಡಿ ಪ್ರಶಸ್ತಿಗೆ ಬರಹಗಾರರಿಂದ ತುಳು ಕಾದಂಬರಿ ಹಸ್ತಪ್ರತಿ ಆಹ್ವಾನ

ಉಡುಪಿ: ಉಡುಪಿ ತುಳುಕೂಟದ ಆಶ್ರಯದಲ್ಲಿ ನಡೆಯುವ ಎಸ್.ಯು. ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ ಆಯ್ಕೆಗಾಗಿ ಬರಹಗಾರರಿಂದ ತುಳು ಕಾದಂಬರಿಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ.

ತುಳು ಚಳವಳಿಯ ಪ್ರವರ್ತಕರಾಗಿದ್ದ ದಿ.ಎಸ್.ಯು.ಪಣಿಯಾಡಿ ಅವರ ಸ್ಮರಣಾರ್ಥ ನೀಡಲಾಗುವ ಈ ಪ್ರಶಸ್ತಿಗೆ ಈವರೆಗೆ ಯಾವುದೇ ಬಹುಮಾನಕ್ಕೆ ಆಯ್ಕೆಯಾಗಿರದ ಮತ್ತು ಮುದ್ರಣಗೊಳ್ಳದ ತುಳು ಕಾದಂಬರಿಗಳ ಹಸ್ತಪ್ರತಿಗಳನ್ನು ಆಸಕ್ತ ಬರಹಗಾರರು ಕಳುಹಿಸಿಕೊಡಬಹುದಾಗಿದೆ. ಅನುವಾದಿತ ಕೃತಿಗಳಿಗೆ ಅವಕಾಶವಿರುವುದಿಲ್ಲ. 

ಕಾದಂಬರಿಯ ಹಸ್ತಪ್ರತಿಯು ಪ್ರಶಸ್ತಿಗೆ ಆಯ್ಕೆಯಾದಲ್ಲಿ ಬರಹಗಾರರು ಡೆಮಿ ೧/೮ ಆಕಾರದಲ್ಲಿ ೧೨೦ ಪುಟಗಳಿಗೆ ಮೀರದಂತೆ ತುಳುಕೂಟದ ಮಾರ್ಗದರ್ಶನದಂತೆ ಮುದ್ರಿಸತಕ್ಕದ್ದು. ಕಾದಂಬರಿಯು ತುಳುನಾಡಿನ ಭೌಗೋಳಿಕ ಚಿತ್ರಣ, ತುಳುನಾಡ ಸಂಸ್ಕೃತಿಯನ್ನು ಬಿಂಬಿಸುವ ಅಂಶಗಳಿAದ ಕೂಡಿದ್ದು, ಪೌರಾಣಿಕ, ಐತಿಹಾಸಿಕ, ಜಾನಪದ, ಸಾಮಾಜಿಕ ವಸ್ತುಗಳನ್ನು ಆಧರಿಸಿರಬಹುದು. ಕಾದಂಬರಿ ಪ್ರಶಸ್ತಿಯು ೮ಸಾವಿರ ರೂ. ನಗದು ಹಾಗೂ ಪ್ರಶಸ್ತಿಪತ್ರ, ಫಲಕಗಳನ್ನು ಒಳಗೊಂಡಿರುತ್ತದೆ. ಕಾದಂಬರಿ ಹಸ್ತಪ್ರತಿಯನ್ನು ಪ್ರಕಾಶ ಸುವರ್ಣ ಕಟಪಾಡಿ (ಪಣಿಯಾಡಿ ಕಾದಂಬರಿ ಸ್ಪರ್ಧೆ ಸಂಚಾಲಕರು) ಯಶಸ್, ಕೋಟೆ ಬೀಡಿನ ಬಳಿ ಕೋಟೆ ಗ್ರಾಮ ಕಟಪಾಡಿ ಅಂಚೆ, ಉಡುಪಿ ಜಿಲ್ಲೆ-೫೭೪೧೦೫ ಇವರಿಗೆ ಏ.೩೦ರೊಳಗೆ ಕಳುಹಿಸಿಕೊಡಬಹುದು. ಹೆಚ್ಚಿನ ಮಾಹಿತಿಗಳಿಗೆ ಮೊಬೈಲ್: ೯೯೬೪೦೧೯೨೨೯ ಸಂಪರ್ಕಿಸಬಹುದು ಎಂದು ಉಡುಪಿ ತುಳುಕೂಟದ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ, ಪ್ರಧಾನ ಕಾರ್ಯದರ್ಶಿ ಗಂಗಾಧರ್ ಕಿದಿಯೂರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು