ಮಾನ್ಯ PRL SR.CIVIL JUDGE &CJM ನ್ಯಾಯಾಲಯ ಉಡುಪಿಯ CC No.1869/2024 ( ಮಲ್ಪೆ ಠಾಣಾ ಅಪರಾಧ ಕ್ರಮಾಂಕ: 65/2003 ಕಲಂ.143,147,148,323,326,R/W 149 IPC) ರಲ್ಲಿ (ABSCONDING CHARGESHEET) 23 ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರೆಂಟ್ ಆಸಾಮಿ ಎಂ. ಬಾಬು ಪ್ರಾಯ:52 ವರ್ಷ ತಂದೆ: ಮಹಮ್ಮದ್ ವಾಸ : ಮನೆ ನಂಬ್ರ : 29/33,2 ನೇ ಅಡ್ಡರಸ್ತೆ, 7 ಮೈನ್, ಶಿವನಗರ, ಬೆಂಗಳೂರು, ಈತನ ಪತ್ತೆಯ ಬಗ್ಗೆ ಪೊಲೀಸ್ ಉಪಾಧೀಕ್ಷಕರು ಉಡುಪಿ ಉಪವಿಭಾಗ ಮತ್ತು ಪೊಲೀಸ್ ವೃತ್ತ ನಿರೀಕ್ಷಕರು ಮಲ್ಪೆರವರ ಮಾರ್ಗದರ್ಶನದಲ್ಲಿ, ಮಲ್ಪೆ ಪೊಲೀಸ್ ಠಾಣಾ ಉಪನಿರೀಕ್ಷಕರು (ಕಾ&ಸು) ಅನೀಲ್ ಕುಮಾರ್ ಡಿ ರವರ ನೇತೃತ್ವದಲ್ಲಿ ಕಳೆದ 5 ತಿಂಗಳಿನಿಂದ ಪ್ರಯತ್ನಿಸಿ, ಮಾಹಿತಿ ಕಲೆ ಹಾಕಿ, ಖಚಿತ ಮಾಹಿತಿ ಮೇರೆಗೆ ಠಾಣಾ ಸಿಬ್ಬಂದಿಗಳಾದ HC ಸುರೇಶ್ ಕುಮಾರ್ ಮತ್ತು HC ವಿಶ್ವನಾಥ್ ಎಚ್. ರವರು ದಿನಾಂಕ 12-04-2026 ರಂದು ಬೆಂಗಳೂರಿಗೆ ಹೋಗಿ ದಿನಾಂಕ: 14-04-2026 ರಂದು ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಪತ್ತೆ ಹಚ್ಚಿ ದಸ್ತಗಿರಿ ಮಾಡಿ ಈ ದಿನ 15-04-2026 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ . ಮಾನ್ಯ ನ್ಯಾಯಾಲಯವು ದಿ. 28.04.26ರ ವರೆಗೆ ನ್ಯಾಯಾಂಗ ಬಂಧನ ವಿಧಿಸುತ್ತಾರೆ.

0 ಕಾಮೆಂಟ್‌ಗಳು