ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ ಉದ್ಘಾಟನೆ

ಉಡುಪಿ: ಇತ್ತೀಚಿನ ದಿನಗಳಲ್ಲಿ ಮನೆಗಳಲ್ಲಿ ಭಜನೆ ಮಾಡುವ ಸಂಪ್ರದಾಯ ವಿರಳವಾಗುತ್ತಿದ್ದು, ಭಜನಾ ಮಂಡಳಿಗಳಿಂದಾಗಿ ಈ ಪರಂಪರೆ ಉಳಿದಿದೆ. ಸ್ಪರ್ಧೆಗಳ ಮೂಲಕ ಭಜನಾ ತಂಡಗಳಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಕರ್ಣಾಟಕ ಬ್ಯಾಂಕ್ ಡಿಜಿಎಂ ವಾದಿರಾಜ ಭಟ್ ಹೇಳಿದರು. 

ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಆಶ್ರಯದಲ್ಲಿ ಗುಂಡಿಬೈಲು ಬ್ರಾಹ್ಮಿ ಸಭಾಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. 

ಭೀಮ ಜುವೆಲ್ಲರಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಜಿ. ರಾಘವೇಂದ್ರ ಭಟ್, ಪರಿಷತ್ ಅಧ್ಯಕ್ಷ ರಘುಪತಿ ರಾವ್, ಮಾಜಿ ಅಧ್ಯಕ್ಷ ಚಂದ್ರಕಾಂತ್, ಅಮಿತಾ ಕ್ರಮಧಾರಿ, ಉಷಾ ಹೆಬ್ಬಾರ್, ಪರಿಷತ್ ಮಾಜಿ ಅಧ್ಯಕ್ಷ ವಿಷ್ಣು ಪಾಡಿಗಾರ್ ಉಪಸ್ಥಿತರಿದ್ದರು. ಅಕ್ಷತಾ ರಾವ್ ಮತ್ತು ವೆಂಕಟೇಶ್ ರಾವ್ ಸ್ಪರ್ಧೆಯ ತೀರ್ಪುಗಾರರಾಗಿದ್ದರು. 

ಸ್ಪರ್ಧೆಯಲ್ಲಿ 28 ತಂಡಗಳು ಭಾಗವಹಿಸಿದ್ದು, ಪುರುಷ, ಮಹಿಳೆ ಮತ್ತು ಮಕ್ಕಳ ಮೂರು ವಿಭಾಗದಲ್ಲಿ ಪ್ರಥಮ 15,000, ದ್ವೀತಿಯ 10000, ತೃತೀಯ 5 ಸಾವಿರ ಬಹುಮಾನ ನೀಡಿ ಗೌರವಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು