ಉಡುಪಿಯ ಶ್ರೀಮನ್ಮಧ್ವಸಿದ್ಧಾಂತಪ್ರಬೋಧಿನೀ ಸಂಸ್ಕೃತಮಹಾಪಾಠಶಾಲೆಯಲ್ಲಿ ಹಳೆವಿದ್ಯಾರ್ಥಿಸಂಘದ ವತಿಯಿಂದ "ಸಂವಿಧಾನ ಅಂದು ಹಾಗೂ ಇಂದು" ಎಂಬ ಉಪನ್ಯಾಸ ಕಾರ್ಯಕ್ರಮವು ನಡೆಯಿತು. ಪ್ರಸಿದ್ಧ ಅಂಕಣ ಬರಹಗಾರರೂ ವಾಗ್ಮಿಗಳೂ ಆಗಿರುವ ಶ್ರೀಯುತ ರೋಹಿತ್ ಚಕ್ರತೀರ್ಥ ಇವರು ಉಪನ್ಯಾಸಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಪ್ರಾಚೀನಕಾಲದಲ್ಲಿ ಇದ್ದಂತಹ ಶಾಸ್ತ್ರಿಯ ಸಂವಿಧಾನದ ಜೊತೆಗೆ ಅರ್ವಾಚೀನ ಸಂವಿಧಾನದ ವಿಚಾರಗಳನ್ನು ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ಎಸ್ ಎಂ ಎಸ್ ಪಿ ಸಭೆಯ ಕಾರ್ಯದರ್ಶಿಗಳಾದ ವಿ.ಗೋಪಾಲಜೋಯಿಸರು, ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ಡಿ.ಎಸ್ ಅಮೃತೇಶಾಚಾರ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾಯೋಜಕರೂ ಹಳೆವಿದ್ಯಾರ್ಥಿಸಂಘದ ಕಾರ್ಯದರ್ಶಿಗಳಾದ ವಿ. ಹರ್ಗ ಹರಿಪ್ರಸಾದ ಭಟ್ ಇವರು ಸ್ವಾಗತಪೂರ್ವಕವಾಗಿ ಕಾರ್ಯಕ್ರಮವನ್ನು ನಿರೂಪಿಸಿದರು. ಕೋಶಾಧಿಕಾರಿಗಳಾದ ಡಾ. ರಾಧಾಕೃಷ್ಣ ಬಿ ಇವರು ಧನ್ಯವಾದಗಳನ್ನು ಸಮರ್ಪಿಸಿದರು.
