ಪ್ರಸಿದ್ಧ ನ್ಯಾಯವಾದಿ ಹಾಗೂ ವಿಶ್ವ ಹಿಂದು ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷ ಶ್ರೀ ಅಲೋಕ್ ಕುಮಾರ್ ಅವರಿಗೆ ಶ್ರೀ ಪೇಜಾವರ ಮಠ ಸಂಸ್ಥಾನದ ವತಿಯಿಂದ ಧರ್ಮಭೂಷಣ ಎಂಬ ಅಭಿದಾನದೊಂದಿಗೆ ವಿಶೇಷ ಪುರಸ್ಕಾರವನ್ನು ಘೋಷಿಸಲಾಗಿದೆ.
ನವದೆಹಲಿಯಲ್ಲಿ ನಡೆಯುತ್ತಿರುವ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ 39 ನೇ ಚಾತುರ್ಮಾಸ್ಯ ವ್ರತ ಸತ್ರದ ಅಂಗವಾಗಿ ಇದೇ ಬರುವ ಸಪ್ಟಂಬರ್ 2 ರಂದು ಸಂಜೆ ವಸಂತ್ ಕುಂಜ್ ನಲ್ಲಿರುವ ವೇದವ್ಯಾಸ ಗುರುಕುಲದಲ್ಲಿ ನಡೆಯಲಿರುವ "ಸಂತ ಸಂಗಮ " ಎಂಬ ಶೀರ್ಷಿಕೆಯಲ್ಲಿ ನಡೆಯುವ ಸಾಧು ಸಂತರ ಸಮಾವೇಶದಲ್ಲಿ ಈ ಪುರಸ್ಕಾರವನ್ನು ಪ್ರದಾನಿಸಲಾಗುವುದು.
ಅನೇಕ ವರ್ಷಗಳಿಂದ ದೇಶ ವಿದೇಶಗಳಲ್ಲಿ ಸನಾತನ ಧರ್ಮ ರಕ್ಷಣೆಗೆ ಸಲ್ಲಿಸುತ್ತಿರುವ ಮಹತ್ವಪೂರ್ಣ ಕೈಂಕರ್ಯ ಮತ್ತು ಮಾರ್ಗದರ್ಶನಕ್ಕಾಗಿ ಈ ಪುರಸ್ಕಾರ ನೀಡಲಾಗುತ್ತಿದೆ ಎಂದು ಪೇಜಾವರ ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
