BREAKING
ಅಂತರಾಷ್ಟ್ರೀಯ

ಡಲ್ಲಾಸ್ ನಲ್ಲಿ ಕೊನೆಗೊಂಡ ಕಳೆದ 75 ದಿನಗಳಿಂದ ಉತ್ತರ ಅಮೇರಿಕಾದಲ್ಲಿ ನಡೆದ ಯಕ್ಷಗಾನದ ಸವಿರುಚಿ

ಕಳೆದ 75 ದಿನಗಳಿಂದ ಉತ್ತರ ಅಮೇರಿಕಾದ ಮೂಲೆ ಮೂಲೆಗೂ ಯಕ್ಷಗಾನದ ಸವಿರುಚಿಯನ್ನು ಇಲ್ಲಿನ ಪ್ರೇಕ್ಷಕರಿಗೆ ಉಣಬಡಿಸುವುದರ ಜೊತೆಗೆ, ಯಕ್ಷಗಾನದ ಕಂಪನ್ನು ಎಲ್ಲೆಡೆ ಪಸರಿಸಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ತಂಡದ ಕಲಾವಿದರು ತಮ್ಮ ಈ ತಿರುಗಾಟದ ಕೊನೆಯ ಪ್ರದರ್ಶನವನ್ನು ಟೆಕ್ಸಾಸ್ ಡಲ್ಲಾಸ್ ನಲ್ಲಿ ಸೆಪ್ಟೆಂಬರ್ 22ರಂದು ಯಶಸ್ವಿಯಾಗಿ ಮುಗಿಸಿ, ಸೆಪ್ಟೆಂಬರ್ 23ರ ಬೆಳಿಗ್ಗೆ ಭಾರತಕ್ಕೆ ವಿಮಾನವನ್ನು ಏರುವುದರ ಮೂಲಕ ತಮ್ಮ ತಿರುಗಾಟವನ್ನು ಮುಗಿಸಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಯು.ಎಸ್.ಎ. ಸಂಘಟನೆಯ ನೇತೃತ್ವದಲ್ಲಿ ಈ ಬಾರಿ ಸುಮಾರು 21 ಕಡೆಗಳಲ್ಲಿ ಸಮರೋಪಾದಿಯಲ್ಲಿ ಯಕ್ಷಗಾನ ಪ್ರದರ್ಶನ ನಡೆದದ್ದು ಒಂದು ದಾಖಲೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಇದಕ್ಕೆ ಪ್ರಮುಖ ಕಾರಣ ಯಕ್ಷಧ್ರುವ ಪಟ್ಲ ಫೌಂಡೇಶನ್ ಯು.ಎಸ್.ಎ. ಅಧ್ಯಕ್ಷರಾದ ಡಾ.ಅರವಿಂದ ಉಪಾಧ್ಯಾಯರು. ಯಕ್ಷಗಾನ ತಂಡದ ಪ್ರಯಾಣ, ಪ್ರದರ್ಶನವನ್ನು ಏರ್ಪಡಿಸಲು ಆಯಾಯ ರಾಜ್ಯದ ಸಂಘಟಕರನ್ನು ಸಂಪರ್ಕಿಸುವುದು, ಸೂಕ್ತ ಸಮಯದಲ್ಲಿ ಮಾಹಿತಿಯನ್ನು ಒದಗಿಸಿವುದು ಹೀಗೆ ಹಲವಾರು ಕೆಲಸಗಳನ್ನು ಬಹಳ ತಾಳ್ಮೆಯಿಂದ ಮಾಡಿದ ಶ್ರೀಯುತರಿಗೆ ಧನ್ಯವಾದ ಹೇಳಿದರು ಕಡಿಮೆಯೇ. ಹಾಗೆಯೇ ಫೌಂಡೇಶನ್ ನ ಇನ್ನಿತರ ಪಧಾದಿಕಾರಿಗಳಿಗೂ ನನ್ನ ಧನ್ಯವಾದಗಳು. 

"ಯಕ್ಷಧ್ರುವ ಪಟ್ಲ ಫೌಂಡೇಶನ್" ನ ಪರೋಪಕಾರಿ ಸೇವಾ ಚಟುವಟಿಕೆಗಳನ್ನು ಗಮನಿಸಿ ಫೀನಿಕ್ಸ್ ನಗರದ ಮೇಯರ್ ಜುಲೈ 27ನ್ನು ಹಾಗೂ ವಿಸ್ಕಾನ್ಸಿನ್ ನಗರದ ಮೇಯರ್ ಆಗಸ್ಟ್ 18ನ್ನು ಯಕ್ಷಧ್ರುವ ಪಟ್ಲ ಫೌಂಡೇಶನ್ ಡೇ ಎಂದು ಘೋಷಿಸಿದ್ದು ಯಕ್ಷಧ್ರುವ ಪಟ್ಲ ಫೌಂಡೇಶನ್ ಯು.ಎಸ್.ಎ. ಇದರ ಸಾಧನೆಯ ಹಿರಿಮೆಯಲ್ಲಿ ಮತ್ತೊಂದು ಗರಿ. ಈ ವರ್ಷದ ಪ್ರಮುಖ ಪ್ರಸಂಗ "ಶಾಂಭವಿ ವಿಜಯ", ಸುಮಾರು ಹನ್ನೆರಡು ಕಡೆಗಳಲ್ಲಿ ಪ್ರದರ್ಶನಗೊಂಡಿದ್ದು ಕೂಡ ಒಂದು ದಾಖಲೆಯೇ. ಹಲವಾರು ಕಡೆಯಲ್ಲಿ ನಮ್ಮೂರಿನ ಪ್ರೇಕ್ಷಕರಲ್ಲದೇ ಕನ್ನಡ ಗೊತ್ತಿಲ್ಲದ ಬಹಳ ಮಂದಿಯ ಜೊತೆಗೆ ಅಮೇರಿಕಾದವರು ಕೂಡ ಯಕ್ಷಗಾನವನ್ನು ನೋಡಿ ಪ್ರಶಂಶಿಸಿದ್ದು ವಿಶೇಷವೇ. ಶ್ರೀಯುತ ಸತೀಶ್ ಪಟ್ಲರ ಸಾರಥ್ಯದಲ್ಲಿ ಒಟ್ಟಾರೆಯಾಗಿ ಈ ಬಾರಿಯ ಅಮೇರಿಕಾದ ತಿರುಗಾಟ ಹಲವಾರು ಸಾಧನೆಯನ್ನು ಮಾಡಿದ್ದೂ ಎಲ್ಲ ಕಲಾವಿದರಿಗೂ, ಫೌಂಡೇಶನ್ ನ ಪಧಾದಿಕಾರಿಗಳಿಗೂ, ಸಂಘಟಕರಿಗೂ ಮುಖ್ಯವಾಗಿ ನಮ್ಮೂರಿನ ಶ್ರೀಮಂತ ಕಲೆಯಾದ ಯಕ್ಷಗಾನಕ್ಕೆ ಸಂದ ಜಯವಲ್ಲದೇ ಮತ್ತೇನೂ. ಮುಂಬರುವ ವರ್ಷಗಳಲ್ಲಿ ಇನ್ನೂ ಹಲವಾರು ಗರಿಮೆಗಳನ್ನು ಯಕ್ಷಧ್ರುವ ಪಟ್ಲ ಫೌಂಡೇಶನ್ ತಂಡವು ಗಳಿಸಲಿ ಎಂದು ಆಶಿಸುತ್ತಾ, , ಶ್ರೀಯುತ ಪಟ್ಲರಿಂದ ಹಲವಾರು ಉತ್ತಮ ಕಾರ್ಯಗಳನ್ನು ನಡೆಸುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತ ನನ್ನ ಬರಹಕ್ಕೆ ವಿರಾಮವನ್ನಿಡುತ್ತಿದ್ದೇನೆ.


✍ ಪ್ರಶಾಂತ ಕುಮಾರ್ ಮಟ್ಟು


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!