ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಮಣ್ ಗ್ರಾಮದಲ್ಲಿ ವ್ಯಕ್ತಿ ಒಬ್ಬ ಆನ್ಲೈನ್ ಗೇಮಿಂಗ್ ಆಟ ಆಡುತ್ತ ಇತರರಿಗೆ ಇತರ ಮೊಬೈಲ್ಗಳ ಸಕಲ App/ Site install ಮಾಡಲು ಪ್ರಯತ್ನಿಸುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಕಳ ಗ್ರಾಮಾಂತರ ಠಾಣ ಪಿಎಸ್ಐ ರವರು ನಜೀರ್ (45) ವಾಸ: ಗಂಜಿಮಠ. ಮಂಗಳೂರು ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದು ಆತನ ಮೊಬೈಲ್ ಫೋನನ್ನು ಪರಿಶೀಲಿ ದಾಗ ವೆಬ್ ಸೈಟ್ ಲಿಂಕ್ ಮತ್ತು App ಬಳಸಿ ಆನ್ಲೈನ್ ಬೆಟ್ಟಿಂಗ್ ಆಡುತ್ತಿರುವುದು ಕಂಡುಬಂದಿದ್ದು ಆತನನ್ನು ವಶಕ್ಕೆ ಪಡೆದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 107/2025 U/S 78(i)(iii) KP Act ಮತ್ತು ಕಲಂ 112(1) BNS ರಂತೆ ಪ್ರಕರಣ ದಾಖಲಿಸಿರುವುದಾಗಿದೆ.
ಇದೆ ವೇಳೆ ಆರೋಪಿತನ ಬಳಿ ಇದ್ದ 30,000ಗಳನ್ನು ಮುಂದಿನ ತನಿಖೆಯ ಬಗ್ಗೆ ವಶಪಡಿಸಿಕೊಳ್ಳಲಾಗಿರುತ್ತದೆ.
ಸದರಿ ದಾಳಿಯನ್ನು ಡಾ| ಹರ್ಷ ಪ್ರಿಯಂವದ ಐಪಿಎಸ್, ಎಎಸ್‌ಪಿ ಕಾರ್ಕಳ ರವರ ಮಾರ್ಗದರ್ಶನದಲ್ಲಿ ಕಾರ್ಕಳ ಗ್ರಾಮಾಂತರ ಪಿಎಸ್ ಐ ಪ್ರಸನ್ನ ಎಂ ಎಸ್, ಪಿ ಎಸ್ ಐ ಸುಂದರ, ಎ ಎಸ್ ಐ ಪ್ರಕಾಶ, ಎಎಸ್ಐ ಸುಂದರ ಗೌಡ, ಹೆಚ್ ಸಿ ಪ್ರಶಾಂತ್ ಹೆಚ್ ಸಿ ಚಂದ್ರಶೇಖರ್ ಹೆಚ್ ಸಿ ರುದ್ರೇಶ್ ಮತ್ತು ಮಹಾಂತೇಶ್ ಅವರು ಮಾಡಿರುವುದಾಗಿರುತ್ತದೆ.
0 ಕಾಮೆಂಟ್‌ಗಳು