ದಿನಾಂಕ 18-09-2025 ರಂದು ಪಡುಬಿದ್ರಿ ಠಾಣಾ ವ್ಯಾಪ್ತಿಯ ಬಡಾ ಗ್ರಾಮದ ಉಚ್ಚಿಲ ಪೊಲ್ಯ ಬುಬಲ್ ಮೈದಾನದ ಬಳಿ ಇಬ್ಬರು ಯುವಕರು ಮಾದಕ ವಸ್ತು ಎಂಬಿಎಂಎ ನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯ ಪಿಎಸ್ಐ ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ಪಿಎಸ್ಐ ಸಕ್ತಿವೇಲು ರವರು ಸಿಬ್ಬಂದಿಗಳೊಂದಿಗೆ ಸದರಿ ಸ್ಥಳಕ್ಕೆ ಹೋಗಿ ನೋಡಲಾಗಿ ಅಲ್ಲಿ ಇಬ್ಬರು ಯುವಕರು ಒಂದು ಮೋಟರ್ ಸೈಕಲ್ ನೊಂದಿಗೆ ನಿಂತುಕೊಂಡಿದ್ದು ಅವರನ್ನು ಸಿಬ್ಬಂದಿಯವರ ಸಹಾಯದಿಂದ ದಸ್ತಗಿರಿ ಮಾಡಿ ವಿಚಾರಿಸಿದಲ್ಲಿ ಅವರು ಫರ್ಹನ್, ಫಕೀರನ ಕಟ್ಟೆ ಮಸೀದಿ ಬಳಿ, ಮಲ್ಲಾರು ಗ್ರಾಮ, ಕಾಪು ತಾಲೂಕು ಹಾಗೂ ಮೊಹಮ್ಮದ್ ಹಾಶಿಂ, ಕೊಂಬಗುಡ್ಡೆ, ಮಲ್ಲಾರು, ಮಜೂರು ಗ್ರಾಮ, ಕಾಪು ತಾಲೂಕು ಎಂದು ತಿಳಿಸಿರುತ್ತಾರೆ. ಆರೋಪಿಗಳ ಅಂಗ ಜಪ್ತಿ ಮಾಡಿದಲ್ಲಿ ಅವರ ಪ್ಯಾಂಟಿನ ಕಿಸೆಯಲ್ಲಿದ್ದ 9.30 ಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತುವನ್ನು ಮತ್ತು ಅವರ ಬಳಿ ಇದ್ದ ನಗದು ಹಣ ರೂಪಾಯಿ 5,000/- ಮತ್ತು ರೂಪಾಯಿ 1,80,000/- ಮೌಲ್ಯದ ಮೋಟಾರು ಸೈಕಲ್ ಮತ್ತು ರೂಪಾಯಿ 6,000/- ಮೌಲ್ಯದ 2 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಯಿತು.
ಕಾರ್ಕಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಡಾI ಹರ್ಷ ಪ್ರಿಯಂವಧ IPS ರವರ ಮಾರ್ಗದರ್ಶನದಂತೆ ಕಾಪು ವೃತ್ತ ನಿರೀಕ್ಷಕರಾದ ಜಯಶ್ರೀ ಮಾನೆ ರವರ ನೇತೃತ್ವದಲ್ಲಿ ಪಡುಬಿದ್ರಿ ಪೊಲೀಸ್ ಠಾಣಾ ಪೋಲಿಸ್ ಉಪನಿರೀಕ್ಷಕರಾದ ಸಕ್ತಿವೇಲು ಇ (ಕಾ.ಸು) ಮತ್ತು ಅನಿಲ್ ಕುಮಾರ್(ತನಿಖೆ) ಸಿಬ್ಬಂದಿಗಳಾದ ಎ ಎಸ್ ಐ ರಾಜೇಶ್ ಪಿ, ಎ ಎಸ್ ಐ ಗಿರೀಶ್ ಹೆಡ್ ಕಾನ್ಸ್ಟೇಬಲ್ ಕೃಷ್ಣಪ್ರಸಾದ್, ರಮೇಶ್, ಕಾನ್ಸ್ಟೇಬಲ್ ಸಂದೇಶ, ಮಹಿಳಾ ಕಾನ್ಸ್ಟೇಬಲ್ ರುಕ್ಮಿಣಿ ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ.
0 ಕಾಮೆಂಟ್‌ಗಳು