ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ 4ನೇ ವರ್ಷದ ಉಡುಪಿ ಉಚ್ಚಿಲ ದಸರಾ ಪ್ರಯುಕ್ತ ಮುದ್ದು ಶಾರದೆ ಛದ್ಮವೇಷ ಸ್ಪರ್ಧೆ ಆಯೋಜಿಸಲಾಗಿತ್ತು. 3ರಿಂದ 9 ವರ್ಷದ ವಯೋ ಮಾನದ ಮುದ್ದುಮಕ್ಕಳು ಕಿರೀಟ ತೊಟ್ಟ ಶಾರದೆ, ಮಲ್ಲಿಗೆ ಮುಡಿದ ಶಾರದೆ, ವೀಣಾಪಾಣಿ ಶಾರದೆ ಹೀಗೆ ವೈವಿಧ್ಯಮಯವಾಗಿ ಶಾರದೆಯ ವೇಷ ತೊಟ್ಟು ಸಂಭ್ರಮಿಸಿದರು.
ಉಚ್ಚಿಲ ದಸರಾ ರೂವಾರಿ ನಾಡೋಜ ಡಾ. ಜಿ. ಶಂಕರ್ ಎಲ್ಲ ಮಕ್ಕಳಿಗೂ ಪ್ರೋತ್ಸಾಹಕ ಬಹುಮಾನ ನೀಡಿ ಹುರಿದುಂಬಿಸಿದರು. ಉಡುಪಿ ಉಚ್ಚಿಲ ದಸರಾ ವೈವಿಧ್ಯಮಯಾಗಿ ವಿವಿಧ ಸಾಂಸ್ಕೃತಿಕ, ಸಾಮಾ ಜಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದೆ. ಅನೇಕ ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯಾಗಿದೆ ಎಂದರು.
ಶರನ್ನವರಾತ್ರಿಯ 5ನೇ ದಿನದಂದು ಸ್ಕಂದಮಾತಾ ದೇವಿ ಆರಾಧನೆ ಸಹಿತ ವಿವಿಧ ಧಾರ್ಮಿಕ ಕಾರ್ಯ ಕ್ರಮಗಳು ಕ್ಷೇತ್ರದ ಅರ್ಚಕ ರಾಘವೇಂದ್ರ ಉಪಾಧ್ಯಾಯ ಹಾಗೂ ಉದಯ ತಂತ್ರಿ ಪೌರೋಹಿತ್ಯದಲ್ಲಿ ನಡೆದವು. ಕ್ಷೇತ್ರದ ಅಧಿದೇವತೆ ಮಹಾಲಕ್ಷ್ಮಿ ಹಾಗೂ ಶ್ರೀ ಶಾರದೆಗೆ ವಿಶೇಷ ಅಲಂಕಾರ ಮಾಡಲಾ ಗಿತ್ತು.
ಉದಯಪೂಜೆ, ಚಂಡಿಕಾಹೋಮ, ಮಹಾಪೂಜೆ, ಶಾರದೆ ಸಹಿತ ನವದುರ್ಗೆಯರಿಗೆ ಮಹಾಮಂಗಳಾ ರತಿ, ಅನ್ನಸಂತರ್ಪಣೆ ನಡೆಯಿತು. ಸಂಜೆ ಸಾಮೂಹಿಕ ಕುಂಕುಮಾರ್ಚನೆ, ರಾತ್ರಿ ಪೂಜೆ, ಅಂಬಿಕಾ ಕಲ್ಲೋಕ್ತ ಪೂಜೆ ನಡೆಯಿತು. ಜಯ ಸಿ. ಕೋಟ್ಯಾನ್, ಗಿರಿಧರ್ ಸುವರ್ಣ, ಸುವರ್ಣ, ಉಚ್ಚಿಲ ದಸರಾ ಸಮಿತಿ ಅಧ್ಯಕ್ಷ ವಿನಯ್ ಕರ್ಕೇರ, ಮಹಿಳಾ ಸಂಚಾಲಕಿ ಸಂಧ್ಯಾದೀಪ ಸುನಿಲ್, ದ.ಕ. ಮಹಾಜನ ಸಂಘದ ಉಪಾಧ್ಯಕ್ಷ ಮೋಹನ್ ಬೇಂದ್ರೆ, ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕೋಶಾಧಿ ಕಾರಿ ರತ್ನಾಕರ ಸಾಲ್ಯಾನ್, ಜೊತೆ ಕಾರ್ಯದರ್ಶಿ ಸುಜಿತ್ ಸಾಲ್ಯಾನ್ ಮೂಲ್ಕಿ, ವಾಸುದೇವ ಸಾಲ್ಯಾನ್, ಗುಂಡು ಬಿ. ಅಮೀನ್, ಮನೋಜ್ ಕಾಂಚನ್, ಸುಗುಣ ಕರ್ಕೇರ, ಉಷಾರಾಣಿ, ದೇವಳದ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕೆರೆ ಇದ್ದರು.
0 ಕಾಮೆಂಟ್‌ಗಳು