BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಆರೋಗ್ಯ

ಮೆದುಳು ಬೆಳವಣಿಗೆಯ ಸಮಸ್ಯೆ ಹೊಂದಿರುವ ಮಕ್ಕಳು ಮತ್ತು ಅವರ ಪೋಷಕರಿಗೆ "ಪ್ರಗತಿ" ಜಾಗೃತಿ ಮತ್ತು ಶಿಕ್ಷಣ ಕಾರ್ಯಕ್ರಮ

ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮನೋವೈದ್ಯಶಾಸ್ತ್ರ ವಿಭಾಗದ ನ್ಯೂರೋಡೆವಲಪ್ ಮೆಂಟಲ್ ಚಿಕಿತ್ಸಾಲಯವು ಮೆದುಳು ಅಭಿವೃದ್ಧಿ ಸಮಸ್ಯೆ ಹೊಂದಿರುವ ಮಕ್ಕಳಿಗಾಗಿ "ಪ್ರಗತಿ" ಎಂಬ ಕುಟುಂಬ ಕಾರ್ಯಕ್ರಮವನ್ನು ಮೇ 26, 2026 ಮತ್ತು ಮೇ 28, 2026 ರಂದು ಆಯೋಜಿಸಿತ್ತು. ಕೆಎಂಸಿ ಮಣಿಪಾಲದ ಅಸೋಸಿಯೇಟ್ ಡೀನ್ ಡಾ. ಪ್ರಸಾದ್ ಎಸ್.ಎಸ್. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು. ಮಾಹೆ ಬೋಧನಾ ಆಸ್ಪತ್ರೆಗಳ ಸಿಒಒ ಡಾ. ಸುಧಾಕರ್ ಕಂಟಿಪುಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಮತ್ತು ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್‌ನ ಡೀನ್ ಡಾ. ಅರುಣ್ ಜಿ. ಮೈಯ ಅವರು ಗೌರವ ಅತಿಥಿಗಳಾಗಿದ್ದರು. ಮನೋವೈದ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಮತ್ತು ಮುಖ್ಯಸ್ಥೆ ಡಾ. ಸವಿತಾ ಸೋಮನ್ ಮತ್ತು ನ್ಯೂರೋಡೆವಲಪ್ ಮೆಂಟಲ್ ಚಿಕಿತ್ಸಾಲಯದ ಉಸ್ತುವಾರಿ ಡಾ. ಅಮೃತವರ್ಷಿಣಿ ಆರ್. ಅವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಪ್ರಸಾದ್ ಎಸ್.ಎಸ್., ಮೆದುಳು ಬೆಳವಣಿಗೆಯ ಅಸ್ವಸ್ಥತೆ ಹೊಂದಿರುವ ಮಕ್ಕಳ ಆರಂಭಿಕ ಗುರುತಿಸುವಿಕೆ ಮತ್ತು ಬಹು ಆಯಾಮದ ಚಿಕಿತ್ಸಾ ಕ್ರಮದ ಮಹತ್ವವನ್ನು ಹೇಳಿದರು . ಮಕ್ಕಳು ಮತ್ತು ಅವರ ಕುಟುಂಬಗಳಿಗೆ ಜಾಗೃತಿ ಮೂಡಿಸುವಲ್ಲಿ ಮತ್ತು ಸಮಗ್ರ ಬೆಂಬಲವನ್ನು ವಿಸ್ತರಿಸುವಲ್ಲಿ ನ್ಯೂರೋಡೆವಲಪ್ ಮೆಂಟಲ್ ಕ್ಲಿನಿಕ್ ನ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು.

ಬೆಳವಣಿಗೆಯ ಸವಾಲುಗಳನ್ನು ಹೊಂದಿರುವ ಮಕ್ಕಳ ಜೀವನದ ಗುಣಮಟ್ಟವನ್ನು ಸುಧಾರಿಸುವಲ್ಲಿ ಮಕ್ಕಳ ಪುನಸ್ಚೇತನ ಮತ್ತು ಕುಟುಂಬ ಕೇಂದ್ರಿತ ಆರೈಕೆಯ ಪಾತ್ರವನ್ನು ಡಾ. ಅರುಣ್ ಜಿ. ಮೈಯ ಒತ್ತಿ ಹೇಳಿದರು. ಆರೋಗ್ಯ ವೃತ್ತಿಪರರು ಮತ್ತು ಆರೈಕೆದಾರರಿಂದ ಸಂಘಟಿತ ಬೆಂಬಲವು ಮಗುವಿನ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

"ಪ್ರಗತಿ" ಯಂತಹ ಜಾಗೃತಿ ಕಾರ್ಯಕ್ರಮಗಳು ಪೋಷಕರು ಮೆದುಳು ಬೆಳವಣಿಗಯ ಸಮಸ್ಯೆ ಹೊಂದಿರುವ ಮಕ್ಕಳ ಅಗತ್ಯಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ಸಕಾಲಿಕ ಚಿಕಿತ್ಸೆಯ ಮೂಲಕ ಸಮಾಜದ ಸ್ವೀಕಾರವನ್ನು ಪ್ರೋತ್ಸಾಹಿಸಲು ಸಹಾಯ ಮಾಡುತ್ತದೆ ಎಂದು ಡಾ. ಅವಿನಾಶ್ ಶೆಟ್ಟಿ ಹೇಳಿದರು.

ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಡಾ. ಸುಧಾಕರ್ ಕಂಟಿಪುಡಿ ಅವರು, ನ್ಯೂರೋಡೆವಲಪ್ ಮೆಂಟಲ್ ಕ್ಲಿನಿಕ್ ಒದಗಿಸುವ ಸಮರ್ಪಿತ ಸೇವೆಗಳನ್ನು ಶ್ಲಾಘಿಸಿದರು ಮತ್ತು ಸಮಗ್ರ ಮಕ್ಕಳ ಬೆಳವಣಿಗೆಗೆ ಮನೋವೈದ್ಯಶಾಸ್ತ್ರ, ಮಕ್ಕಳ ಚಿಕಿತ್ಸೆ, ಅಲೈಡ್ ಹೆಲ್ತ್ ಪ್ರೊಫೆಷನಲ್ಸ್ ಮತ್ತು ಕುಟುಂಬದ ಭಾಗವಹಿಸುವಿಕೆಯನ್ನು ಒಳಗೊಂಡ ಸಮಗ್ರ ಆರೋಗ್ಯ ರಕ್ಷಣಾ ವಿಧಾನಗಳ ಮಹತ್ವವನ್ನು ಒತ್ತಿ ಹೇಳಿದರು.

ಕಾರ್ಯಕ್ರಮದ ಭಾಗವಾಗಿ, ಮೆದುಳು ಬೆಳವಣಿಗೆಯ ಸಮಸ್ಯೆ ಹೊಂದಿರುವ ಪೋಷಕರು ಮತ್ತು ಮಕ್ಕಳಿಗಾಗಿ ಮೇ 26, 2026 ರಂದು ವಿವಿಧ ವಿನೋದಾವಳಿ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು, ಇದು ಪರಸ್ಪರ ಕ್ರಿಯೆ, ಬಾಂಧವ್ಯ ಮತ್ತು ಭಾಗವಹಿಸುವಿಕೆಯನ್ನು ಉತ್ತೇಜಿಸಿತು. ಮೇ 28, 2026 ರಂದು, ಮೆದುಳು ಬೆಳವಣಿಗೆಯ ಸಮಸ್ಯೆ ಕುರಿತು ಪೋಷಕರಿಗೆ ಜಾಗೃತಿ ಶಿಕ್ಷಣ ಕಾರ್ಯಕ್ರಮ ನಡೆಯಿತು. ಮಕ್ಕಳ ಮನೋವೈದ್ಯಶಾಸ್ತ್ರ, ಮಕ್ಕಳ ವೈದ್ಯಕೀಯಶಾಸ್ತ್ರ, ಕ್ಲಿನಿಕಲ್ ಸೈಕಾಲಜಿ, ಆಕ್ಯುಪೇಷನಲ್ ಥೆರಪಿ, ಫಿಸಿಯೋಥೆರಪಿ ಹಾಗೂ ವಾಕ್ ಮತ್ತು ಶ್ರವಣ ವಿಭಾಗಗಳ ಸಂಪನ್ಮೂಲ ವ್ಯಕ್ತಿಗಳು ಒಳನೋಟವುಳ್ಳ ಅವಶ್ಯ ಜಾಗೃತಿ ಶಿಕ್ಷಣ ನೀಡಿದರು.

ಡಾ. ಅಮೃತವರ್ಷಿಣಿ ಆರ್. ಸ್ವಾಗತಿಸಿ ಕಾರ್ಯಕ್ರಮದ ಅವಲೋಕನವನ್ನು ನೀಡಿದರು. ಡಾ. ಮಹೇಶ್ ಮೋಹನ್ ಧನ್ಯವಾದಗಳನ್ನು ಅರ್ಪಿಸಿದರು. ನ್ಯೂರೋಡೆವಲಪ್ ಮೆಂಟಲ್ ಕ್ಲಿನಿಕ್ ಪ್ರತಿ ಬುಧವಾರ ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 1.00 ರವರೆಗೆ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಆರ್ಟಿ ಫೀಸಿಯಲ್ ಲಿಂಬ್ ಸೆಂಟರ್ ನ (ALC) ನೆಲ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಹೆಚ್ಚಿನ ಮಾಹಿತಿಗೆ ದೂ. ಸಂಖ್ಯೆ 6364074903 ಸಂಪರ್ಕಿಸಬಹುದು.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!