ಬ್ರಹ್ಮಾವರ ತಾಲ್ಲೂಕಿನ, ಕೋಟ ಹೋಬಳಿ ನೂತನ ಪ್ರವಾಸಿ ಮಂದಿರ ಪೂರ್ಣಗೊಂಡಿದ್ದು, ಅದನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ವೀಕ್ಷಿಸಿದರು.
ಹಿಂದಿನ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಯವರ ಸಹಮತದೊಡನೆ 5 ಕೋಟಿ ರೂಪಾಯಿ ಮಂಜೂರಾಗಿದ್ದು, ಪ್ರವಾಸಿ ಮಂದಿರ ಗುಣಮಟ್ಟದ ಕಾಮಗಾರಿಯೊಂದಿಗೆ ಪೂರ್ಣಗೊಂಡಿದೆ.
ಹೊಸ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕೋಟ, ನಮ್ಮೂರಿನಲ್ಲಿ ಇಂತಹ ಸುಸಜ್ಜಿತ ಪ್ರವಾಸಿ ಮಂದಿರ ನಿರ್ಮಾಣವಾದದ್ದು ಖುಷಿ ತಂದಿದೆ ಎಂದು ತಿಳಿಸಿದ್ದಾರೆ.
ಸಂಸದರೊಂದಿಗೆ ಇಲ್ಲಖಾಧಿಕಾರಿಗಳು ಹಾಜರಿದ್ದರು.

0 ಕಾಮೆಂಟ್‌ಗಳು