BREAKING
ಸುದ್ದಿ

ಪಟ್ಲ ಯು.ಎಸ್. ನಾಯಕ್ ಪ್ರೌಢ ಶಾಲೆ ಇಂಟರಾಕ್ಟ ಪದಗ್ರಹಣ ಸಮಾರಂಭ

ಪಟ್ಲ: ರೂರಲ್ ಎಜುಕೇಶನ್ ಸೊಸೈಟಿಯ ಆಶ್ರಿತ ವಿದ್ಯಾ ಸಂಸ್ಥೆಯಾದ ಯು ಎಸ್ ನಾಯಕ್ ಪ್ರೌಢಶಾಲೆಯಲ್ಲಿ ಪ್ರಸಕ್ತ ವರ್ಷದ ಶಾಲಾ ಇಂಟರಾಕ್ಟ ಕ್ಲಬ್ ನ ಪದ ಪ್ರಧಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಮಲ್ಲಿಕಾ ಶೆಟ್ಟಿ ಜಗತ್ತಿನ ಅತ್ಯಂತ ಶ್ರೇಷ್ಠ ಮೌಲ್ಯವೆಂದರೆ 'ನಿಸ್ವಾರ್ಥ ಸೇವೆ' ಈ ಮೌಲ್ಯಗಳನ್ನು ಬೆಳಸುತ್ತಿರುವ ಉಡುಪಿ ರೋಟರಿಯ ಕಾರ್ಯ ಶ್ಲಾಘನೀಯ, ವಿದ್ಯಾರ್ಥಿಗಳಲ್ಲಿ ಈ ಮನೋಭಾವ ಬೆಳೆಸುವಲ್ಲಿ ಇಂಟರಾಕ್ಟ್ ಕ್ಲಬ್ ಸಹಾಯಕವಾಗಿದೆ.. ಇದರ ಪ್ರಯೋಜನವನ್ನು ಎಲ್ಲ ಮಕ್ಕಳು ಪಡೆದುಕೊಳ್ಳಬೇಕು ಎಂದು ಹೇಳಿದರು. ಉಡುಪಿ ರೋಟರಿಯ ಅಧ್ಯಕ್ಷ ರೊಟೆರಿಯನ್ ಜೆ ಗೋಪಾಲಕೃಷ್ಣ ಪ್ರಭು ಇಂಟರಾಕ್ಟ್ ಪದ ಪ್ರಧಾನ ಮಾಡಿ ಶುಭ ಕೋರಿದರು. ಉಡುಪಿ ರೊಟರಿಯ ಇಂಟರಾಕ್ಟ್ ಚೇರ್ಮನ್ ರೋಟೆರಿಯನ್ ಶುಭಲಕ್ಷ್ಮೀ ಇಂಟರಾಕ್ಟ್ ಕ್ಲಬ್ ಮಾಡಬೇಕಾದ ಕಾರ್ಯ ಚಟುವಟಿಕೆಗಳ ಮಾರ್ಗದರ್ಶನ ಮಾಡಿ ನೂತನ ತಂಡಕ್ಕೆ ಶುಭ ಕೋರಿದರು. ರೊಟೇರಿಯನ್ ಡಾ. ಕೆ ಸುರೇಶ್ ಶೆಣೈ ರಸ್ತೆ ಸುರಕ್ಷೆ ಮತ್ತು ಪ್ರಥಮ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು. ನಿಕಟ ಪೂರ್ವ ಶಾಲಾ ಇಂಟರಾಕ್ಟ್ ಅಧ್ಯಕ್ಷ ಪ್ರದ್ಯುಮ್ನ ಸ್ವಾಗತಿಸಿ ಕಾರ್ಯದರ್ಶಿ ರೇಖಾ ಗತ ವರ್ಷದ ವರದಿ ಮಂಡಿಸಿದರು. ಮುಖ್ಯ ಶಿಕ್ಷಕ ಶಾಂತಪ್ಪ ಮೂಲಂಗಿ ವಂದಿಸಿದರು. ವಿದ್ಯಾರ್ಥಿನಿ ಸಾನ್ವಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಇಂಟರಾಕ್ಟ್ ಕೋ ಆರ್ಡಿನೇಟರ್ ಶ್ರೀಮತಿ ದೀಪಾ ಕಾರ್ಯಕ್ರಮ ಸಂಯೋಜನೆ ಮಾಡಿದ್ದರು ಶಾಲೆಯ ಗುರೂಜಿ -ಮಾತಾಜಿಯವರು ಉಡುಪಿ ರೋಟರಿಯ ಸದಸ್ಯರು ಉಪಸ್ಥಿತರಿದ್ದರು.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!