BREAKING
ಸುದ್ದಿ

ಸಾಲಿಗ್ರಾಮ ಶ್ರೀ ಗುರು ನರಸಿಂಹನ ಸನ್ನಿಧಿಯಲ್ಲಿ ದ್ವಿತೀಯ ಶ್ರಾವಣ ಶನಿವಾರದ ಸಂಭ್ರಮ

ಆಗಸ್ಟ್ 22ರಂದು 2ನೇ ಶ್ರಾವಣ ಮಾಸದ ಶನಿವಾರದ ಅಂಗವಾಗಿ ಬೆಳಗ್ಗಿನಿಂದ ಸಂಜೆಯವರೆಗೆ ಸುಮಾರು 20 ಸಾವಿರಕ್ಕೂ ಮಿಕ್ಕಿ ಜನರು ಶ್ರೀ ಗುರುನರಸಿಂಹ ಮತ್ತು ಶ್ರೀ ಆಂಜನೇಯ ದೇವರ ದರ್ಶನ ಮಾಡಿ ಸೇವೆ ಸಲ್ಲಿಸಿದರು ಮಧ್ಯಾಹ್ನ ಸುಮಾರು ಐದು ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ಬೋಜನ ಪ್ರಸಾದವನ್ನು ಸ್ವೀಕರಿಸಿದರು

ಬೆಳಿಗ್ಗೆ 10-3 0ರಿಂದ ಯಕ್ಷ ಮಂಜುಳಾ ಮಹಿಳಾ ಬಳಗ ಕದ್ರಿ ಮಂಗಳೂರು ಇವರಿಂದ ಮಂಡೋದರಿ ಪರಿಣಯ ಮತ್ತು ಗಣೇಶ ಮಹಿಮೆ ಎನ್ನುವ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು ಮಧ್ಯಾಹ್ನ 1:30 ರಿಂದ ಶ್ರೀ ಮಹಿಷಮರ್ಧಿನಿ ವಿಪ್ರ ಮಹಿಳಾ ಬಳಗ ನೀಲಾವರ ಇವರಿಂದ ಭಜನೆ ಕಾರ್ಯಕ್ರಮ ನಡೆಯಿತು 

ಮಧುರ ಧ್ವನಿ ಉಡುಪಿ ಛಾಯಾತರಂಗಿಣಿ ಸಂಗೀತ ಶಾಲೆ ಕೋಟ ಇವರ ಸಂಯೋಜನೆಯಲ್ಲಿ ವಿದುಷಿ ಶರ್ಮಿಳಾ ರಾವ್ ಹಾಗೂ ಶಿಷ್ಯವೃಂದದವರಿಂದ ವಯಲಿನ್ ವಾದನ ಕಾರ್ಯಕ್ರಮ ನಡೆಯಿತು

ಸಂಜೆ 5:30 ರಿಂದ ಶ್ರೀದೇವಳದಲ್ಲಿ ಸೇವೆ ಸಲ್ಲಿಸಿದ ಸೇವಾಕರ್ತರನ್ನು ಸನ್ಮಾನಿಸಲಾಯಿತು

ಭಜನಾ ಸಂಘಗಳಲ್ಲಿ ದೇವಸ್ಥಾನಗಳಲ್ಲಿ ಧಾರ್ಮಿಕ ಸೇವೆಯನ್ನು ಮಾಡುತ್ತಾ ಬಂದಿರುವ ಹಾಗೂ ಬಡ ವಿದ್ಯಾರ್ಥಿಗಳಿಗೆ ಮತ್ತು ಬಡವರಿಗೆ ಆರ್ಥಿಕ ನೆರವನ್ನ ನೀಡುತ್ತಾ ಬಂದಿರುವ ಸಮಾಜ ಸೇವಕ ಶ್ರೀ ಪಾರಂಪಳ್ಳಿ ಸದಾಶಿವ ಮದ್ಯಸ್ಥರಿಗೆ ವಿದ್ಯಾಸಂಸ್ಥೆ ಮತ್ತು ವಿವಿಧ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ ಮತ್ತು ಶ್ರೀ ಗುರುರಸಿಂಹ ದೇವಳದಲ್ಲಿ ನಿತ್ಯ ಪೂಜಾ ವಿಧಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀ ಚಿತ್ರಪಾಡಿ ಜಗದೀಶ ಉಪಾಧ್ಯಾಯ ಆಂಜನೇಯ ದೇವಳದಲ್ಲಿ 20 ವರ್ಷಗಳಿಗಿಂತಲೂ ಹೆಚ್ಚು ಸ್ವಚ್ಛತೆ ಮತ್ತು ಸೇವೆಯನ್ನು ಮಾಡುತ್ತ ಬಂದಿರುವ ಶ್ರೀ ರಾಮಚಂದ್ರ ಆಚಾರ್ ಮತ್ತು ಕರ್ಣ ಅವರಿಗೂ ಶ್ರೀದೇವಳದಲ್ಲಿ ಅಡಿಪು ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಗಿರಿಜಾ ದೇವಾಡಿಗ ಮತ್ತು 30ವರ್ಷಕ್ಕಿಂತ ಹೆಚ್ಚು ಶ್ರೀದೇವಳದ ವಿಶೇಷ ದಿನಗಳಲ್ಲಿ ಸ್ವಚ್ಛತೆ ಕೆಲಸವನ್ನು ತನ್ನ ಸಹ ಸಿಬ್ಬಂದಿಗಳೊಂದಿಗೆ ನಿಭಾಯಿಸುತ್ತಿರುವ ಪಾರಂಪಳ್ಳಿ ರಾಧಾ ಇವರನ್ನು ಸನ್ಮಾನಿಸಲಾಯಿತು ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ ಕಾರಂತರು ಇವರನ್ನೆಲ್ಲ ಅಭಿನಂದಿಸಿ ಇವರೆಲ್ಲರ ಸೇವೆಯನ್ನು ಶ್ಲಾಘಿಸುತ್ತಾ ದೇವಸ್ಥಾನವಿರಲಿ ಯಾವುದೇ ಸಂಘ ಸಂಸ್ಥೆಗಳಿರಲಿ ಪ್ರತಿಯೊಬ್ಬರ ಸೇವಾ ಕಾರ್ಯ ಬಹಳ ಮುಖ್ಯವಾಗಿದೆ ಹಾಗೂ ಅವರ ಸೇವಕಾರ್ಯವನ್ನು ಗುರುತಿಸಿ ಗೌರವಿಸಿದಾಗ ಉಳಿದವರಿಗೂ ಕೂಡ ಪ್ರೇರಣಾದಾಯಕವಾಗಿರುತ್ತದೆ ಎಂದು ತಿಳಿಸಿದರು

ಉಪಾಧ್ಯಕ್ಷರಾದ ಚಂದ್ರಶೇಖರ ಉಪಾಧ್ಯಾಯರು ಕಾರ್ಯದರ್ಶಿ ಶ್ರೀ ಪರಶುರಾಮ ಭಟ್ಟರು, ಕೋಶಾಧಿಕಾರಿ ಶ್ರೀ ಲಕ್ಷ್ಮೀನಾರಾಯಣ ಹೊಳ್ಳರು ಸದಸ್ಯರಾದ ಶ್ರೀ ಕೆ.ತಾರಾನಾಥ ಹೊಳ್ಳರು, ಶ್ರೀ ಪ್ರಸನ್ನ ತುಂಗರು ಮತ್ತು ವ್ಯವಸ್ಥಾಪಕರಾದ ಗಣೇಶ ಭಟ್ಟರು ಉಪಸ್ಥಿತರಿದ್ದರು ಶ್ರೀಮತಿ ನಾಗರತ್ನ ಹೇರಳೆಯವರು ಕಾರ್ಯಕ್ರವನ್ನು ನಿರೂಪಿಸಿದರು

ನಂತರ ಶ್ರೀ ಮಹಾಲಿಂಗೇಶ್ವರ ಕಲಾರಂಗ ವಡ್ಡರ್ಸೆ (ರಿ) ಇವರಿಂದ. ಯಕ್ಷಗಾನ ಸುಧನ್ವಾರ್ಜುನ ಪ್ರಸಂಗವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!