BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಸುದ್ದಿ

ಉಡುಪಿಯಲ್ಲಿ 'ಪಂಚ ಹಸಿರೆಲೆ ಗಣಪ'

ಉಡುಪಿಯ ಶ್ರೀ ಗಣೇಶೋತ್ಸವ ಸಮಿತಿ ಭಕ್ತವೃಂದ, ಮಾರುತಿ ವೀಥಿಕದ ವತಿಯಿಂದ ಈ ಬಾರಿ 26ನೇ ವರ್ಷದ ಗಣೇಶೋತ್ಸವವನ್ನು ಆಚರಿಸಲಾಗುತ್ತಿದ್ದು, ಪರಿಸರ ಸ್ನೇಹಿ 'ಪಂಚ ಹಸಿರೆಲೆ ಗಣಪ' ವಿಶೇಷ ಆಕರ್ಷಣೆಯಾಗಿದೆ.

ಮಾವಿನ ಎಲೆ, ವೀಳ್ಯದೆಲೆ, ಎಕ್ಕದ ಎಲೆ, ಬಾಳೆ ಎಲೆ ಹಾಗೂ ಹಲಸಿನ ಎಲೆ ಸೇರಿದಂತೆ ಪೂಜಾ ಕಾರ್ಯಗಳಲ್ಲಿ ಬಳಸುವ ಐದು ಬಗೆಯ ಹಸಿರೆಲೆಗಳನ್ನು ಆಧರಿಸಿ ಈ ವಿಶಿಷ್ಟ ಗಣಪತಿ ವಿಗ್ರಹವನ್ನು ರೂಪಿಸಲಾಗಿದೆ.

ಕಿನ್ನಿಮೂಲ್ಕಿಯ ದಿವಂಗತ ಸದಾಶಿವ ಆಚಾರ್ಯ ಅವರ ಪುತ್ರರಾದ ಕಾರ್ತಿಕ್ ಆಚಾರ್ಯ ಹಾಗೂ ಕೌಶಿಕ್ ಆಚಾರ್ಯ ಅವರ ಕೈಚಳಕದಲ್ಲಿ ಪಂಚ ಹಸಿರೆಲೆ ಗಣಪ ಮೂಡಿಬಂದಿದೆ.

ಗುರುರಾಜ್ ಎಂ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಗಣೇಶೋತ್ಸವದಲ್ಲಿ ಬೆಳಗ್ಗೆ 9.30ಕ್ಕೆ ಪ್ರಾಣ ಪ್ರತಿಷ್ಠೆ, 11.30ಕ್ಕೆ ಗಣಹೋಮ ಹಾಗೂ ಮಹಾಪೂಜೆ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ಸಂಗೀತ ಭಕ್ತಿರಸಮಂಜರಿ ಕಾರ್ಯಕ್ರಮ ಜರುಗಲಿದೆ. ಸಂಜೆ 6ಕ್ಕೆ ರಂಗಪೂಜೆ ನಡೆಯಲಿದ್ದು, ರಾತ್ರಿ 7.30ಕ್ಕೆ ಗಣಪತಿ ವಿಗ್ರಹದ ಮೆರವಣಿಗೆ ಆರಂಭವಾಗಲಿದೆ.

ಮೆರವಣಿಗೆಯು ಉಡುಪಿಯ ವಿವಿಧ ಭಾಗಗಳಲ್ಲಿ ಸಂಚರಿಸಿ ಬಳಿಕ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಗ್ರಹದ ಜಲಸ್ತಂಭನ ನಡೆಯಲಿದೆ ಎಂದು ಸಮಿತಿಯ ಕಾರ್ಯಾಧ್ಯಕ್ಷ ಸರಳಬೆಟ್ಟು ಗಣೇಶ್ ರಾಜ್ ತಿಳಿಸಿದ್ದಾರೆ.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!