ಗ್ರಾಸ್ಲಾಂಡ್ಸ್ ಇವರ ಸಹಯೋಗದಲ್ಲಿ ಮಣಿಪಾಲದ ಹೃದಯ ಭಾಗದಲ್ಲಿರುವ ಮಧುವನದಲ್ಲಿ ಕಲಾವಿದ ಶ್ರೀನಾಥ್ ಮಣಿಪಲ್ ಅವರು ರಚಿಸಿದ ಗಣೇಶನ ಕಲಾಕೃತಿಯನ್ನು ಕಲಾಪೋಷಕ ದಾಮೋದರ ಅವರು ಅನಾವರಣಗೊಳಿಸಿದರು.
ಗಣೇಶ ಹಬ್ಬದ ಸಂದರ್ಭದಲ್ಲಿ ಈ ಗಣೇಶನ ಕಲಾಕೃತಿಯ ಸಾವಿರಾರು ಜನರನ್ನು ತನ್ನತ್ತ ಸೆಳೆಯುತ್ತಿದೆ. ಈ ಕಲಾಕೃತಿಯನ್ನು ರಚಿಸಲು ಕಲಾವಿದರು ಸುಮಾರು ನಾಲ್ಕರಿಂದ ಐದು ಕೆಜಿ ಹವಳ ಮುತ್ತಿನ ಮಣಿಗಳನ್ನು ಬಳಸಿದ್ದಾರೆ ಕಲಾಕೃತಿಯು ಸುಮಾರು ಐದು ಅಡಿ ಎತ್ತರವಿದೆ. ಕಲಾವಿದ ರವಿ ಹೀರಬೆಟ್ಟ ಅವರು ಈ ಕಲಾಕೃತಿಯನ್ನು ರಚಿಸಲು ಸಹಯೋಗ ನೀಡಿದ್ದಾರೆ ಚೌತಿಯ ಸಂದರ್ಭದಲ್ಲಿ ಈ ಕಲಾಕೃತಿಯು ಮೂರು ದಿನಗಳ ಕಾಲ ಪ್ರದರ್ಶನದಲ್ಲಿರುತ್ತದೆ.
