BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಅಪರಾಧ

ಕುಂದಾಪುರ : ಕಳ್ಳರ ಬಂಧನ!

ಕುಂದಾಪುರ ತಾಲೂಕು ಮಚ್ಚಟ್ಟು ಗ್ರಾಮದ ಜಾಂಬೂರು ಜೆಡ್ಡು, ನೆಲ್ಲಿಗದ್ದೆ ಎಂಬಲ್ಲಿ ವಾಸದ ಮನೆಯಲ್ಲಿ ದಿನಾಂಕ: 04-09-2026 ರಂದು ಮನೆಯವರು ಪ್ಯಾಕ್ಟರಿ ಕೆಲಸಕ್ಕೆ ಹೋಗಿರುವ ಸಮಯ 14:30 ಗಂಟೆಯಿಂದ 15:10 ಗಂಟೆಯ ಮದ್ಯಾವಧಿಯಲ್ಲಿ ಮನೆಯ ಎದುರಿನ ಬಾಗಿಲಿನ ಬೀಗವನ್ನು ಮುರಿದು ಒಳಗಿನ ಕೋಣೆಯಲ್ಲಿ ಬಟ್ಟೆ ಗಳನ್ನು ಚಲ್ಲಾಪಿಲ್ಲಿ ಹರಡಿ ಗೋದ್ರೇಜ್ ಬಾಗಿಲು ತೆರೆದಿದ್ದು ಅದರ ಒಳಗೆ ಬಟ್ಟೆಗಳ ಮದ್ಯೆ ಪೇಪರ್ ನಲ್ಲಿ ಸುತ್ತಿ ಇರಿಸಿದ್ದು ಸುಮಾರು 97,000/- ರೂಪಾಯಿ ನಗದು ಹಣವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಅಮಾಸೆಬೈಲು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ : 23/2026 ಕಲಂ: 331(3),305 BNS 2023ರಂತೆ ಪ್ರಕರಣ ದಾಖಲಿಸಿ ಕೊಳ್ಳಲಾಗಿರುತ್ತದೆ ಮತ್ತು ಶಂಕರನಾರಾಯಾಣ ಠಾಣೆ ಅಪರಾಧ ಕ್ರಮಾಂಕ : 59/2026 ಕಲಂ 331(3) 305 BNS 2023ರಂತೆ ದಾಖಲಾಗಿರುವ ಕುಳ್ಳುಂಜೆ ಗ್ರಾಮ ಮುಂಡುಕೋಡು ಶ್ರೀ ಜಲದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿದ್ದ ಕಾಣಿಕೆ ಹುಂಡಿಯನ್ನು ಒಡೆದು ಸುಮಾರು 35.000- 40,000 ಮೊತ್ತ ಹಣವನ್ನು ಕಳವು ಮಾಡಿಕೊಂಡು ಹೋಗಿರು ಅರೋಪಿಗಳ ಪತ್ತೆಯ ಕಾರ್ಯದಲ್ಲಿ ಪೊಲೀಸ್‌ ಉಪಾಧೀಕ್ಷಕರು ಕುಂದಾಪುರ ಉಪವಿಭಾಗ ಹೆಚ್.ಡಿ.ಕುಲಕರ್ಣಿಯವರ ಮಾರ್ಗ ದರ್ಶನದಲ್ಲಿ ಕುಂದಾಪುರ ವೃತ್ತ ನಿರೀಕ್ಷರಾದ ಸಂತೋಷ್‌ ಕಾಯ್ಕಣಿಯವರ ನೇತೃತ್ವದಲ್ಲಿ ಭೀಮಾಶಂಕರ್‌ ಸಿನ್ನೂರ್‌, ಅಮಾಸೆಬೈಲು ಪೊಲೀಸ್‌ ಠಾಣೆ, ಯೂನಸ್‌ ಗಡ್ಕೆಕರ್‌, ಪೊಲೀಸ್‌ ಉಪನಿರೀಕ್ಷಕ(ಕಾ.ಸು) ಶಂಕರನಾರಾಯಾಣ ಪೊಲೀಸ್ ಠಾಣೆ ಮತ್ತು ಸುಧಾರಾಣಿ ಟಿ., ಪಿ.ಎಸ್.ಐ(ತನಿಖೆ), ಅಮಾಸೆಬೈಲು ಠಾಣೆ ರವರನೊಳಗೊಂಡ ಅಪರಾಧ ತಂಡದ ಸಿಬ್ಬಂದಿಯವರಾದ ಚಂದ್ರ ಶೇಖರ ಶೆಟ್ಟಿ ಎಎಸ್ಐ, ರಾಘವೇಂದ್ರ ಹೆಚ್.ಸಿ, ನವೀನ್‌ ಕುಮಾರ್‌ ಸಿ.ಹೆಚ.ಸಿ, ಪಿ.ಸಿ. ಸುಧಾಕರ ಎಚ್.ಸಿ., ದಿನೇಶ ಪಿ.ಸಿ. ಸಚಿನ್‌ ಕುಲಾಲ್‌, ಸಿ.ಹೆಚ್.ಸಿ., ಮಂಜುನಾಥ, ಪಿ.ಸಿ. ಜಯರಾಮ ನಾಯ್ಕ ಪಿಸಿ. ಚೇತನ್‌ ಕುಮಾರ್‌ ಅವರನ್ನು ಒಳಗೊಂಡ ತಂಡ ಶೀಘ್ರ ಕಾರ್ಯಾಚರಣೆ ನಡೆಸಿ ಆರೋಪಿಗಳಾದ 1) ರಾಕೇಶ್‌ ಹೆಚ್. (28) ತಂದೆ: ಹನುಮಂತಪ್ಪ. ವಾಸ: ಎತ್ತಿನಹಳ್ಳಿ ಪುಣೆದಹಳ್ಳಿ ಗ್ರಾಮ ಸಂಡಾ ಅಂಚೆ ಶಿಕಾರಿಪುರ ತಾಲೂಕು ಶಿವಮೊಗ್ಗೆ ಜಿಲ್ಲೆ. 2)ನಂದೀಶ ಎಂ(24) ತಂದೆ: ಮಲ್ಲೇಶಪ್ಪ ವಾಸ: ಕಾಲೇಕೆರೆ, ಜಕ್ಕೆನಹಳ್ಳಿ ಗ್ರಾಮ, ಸಂಡಾ ಅಂಚೆ ಶಿಕಾರಿಪುರ ತಾಲೂಕು ಶಿವಮೊಗ್ಗೆ ಜಿಲ್ಲೆ. ರವರುಗಳನ್ನು ಪತ್ತೆ ಮಾಡಿ ಹುಲಿಕಲ್‌ ಘಾಟ್‌ ಸಮೀಪ ದಸ್ತಗಿರಿ ಮಾಡಿ, ಕಳ್ಳತನ ಮಾಡಿದ ನಗದು ರೂ 1,19,720/-ಅನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!