BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಸುದ್ದಿ

"ಕಲರವ" ಮಕ್ಕಳ ಕಲಾಶಿಬಿರ

ಕಲ್ಯಾಣಿ ಕಲಾಕೇಂದ್ರ (ರಿ)ಸುಬ್ರಹ್ಮಣ್ಯನಗರ, ಉಡುಪಿ ಮತ್ತು ಅರಿತೋಡು ಶ್ರೀ ಜನಾರ್ದನ ಸುಬ್ರಹ್ಮಣ್ಯ ದೇವಸ್ಥಾನ (ಶ್ರೀ ಸೋದೆ ವಾದಿರಾಜ ಮಠ, ಉಡುಪಿ) ಇದರ ಸಂಯುಕ್ತ ಆಶ್ರಯದಲ್ಲಿ ಮೇ 24 ಮತ್ತು 25 ರಂದು "*ಕಲರವ*" ಮಕ್ಕಳ ಕಲಾ ಶಿಬಿರ ದೇವಸ್ಥಾದ ಸಭಾಂಗಣದಲ್ಲಿ ನಡೆಯಿತು. ಶ್ರೀ ನಾರಾಯಣ ಹೆಬ್ಬಾರ್ ರವರು ದೀಪ ಬೆಳಗಿ ಶಿಬಿರವನ್ನು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಬಂದಿದ್ದ ಸುದರ್ಶನ್ ಆಚಾರ್ಯ ರಿಂದ ಮಿಮಿಕ್ರಿ, ವಸಂತ ಪಾಲನ್ ರಿಂದ ಓರಿಗಾಮಿ, ದಾಮೋದರ್ ಆಚಾರ್ಯ ರಿಂದ ಕ್ರಾಫ್ಟ್, ಶ್ರೀಮತಿ ಸುನೀತಾ ಮತ್ತು ತಂಡದವರಿಂದ ಯೋಗ, ದಿವಾಕರ್ ಕಟೀಲು ಇವರಿಂದ ರಂಗಚಟುವಟಿಕೆ, ರಂಗಗೀತೆ, ವೆಂಕಟಕೃಷ್ಣ ಭಟ್ ರಿಂದ ರಸಪ್ರಶ್ನೆ, ನಿರಂಜನ್ ಭಟ್ ರಿಂದ ಮಕ್ಕಳ ಚರ್ಚೆ ಮತ್ತು ಡಾ. ಶ್ರೀಧರ ಬಾಯರಿ ಇವರಿಂದ ಆರೋಗ್ಯ ಮಾಹಿತಿಗಳನ್ನು ನೀಡಲಾಯಿತು. ಸಮಾರೋಪ ಸಮಾರಂಭದ ಅತಿಥಿಗಳಾದ ವಿದ್ವಾನ್ ಶ್ರೀ ಗೋಪಾಲಕೃಷ್ಣ ಉಪಾಧ್ಯರವರು ಶಿಬಿರದಲ್ಲಿ ಕಲಿತ ವಿದ್ಯೆಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಹೇಳಿ ಮಕ್ಕಳಿಗೆ ಶುಭ ಹಾರೈಸಿದರು. ಇನ್ನೋರ್ವ ಅತಿಥಿಗಳಾದ ಶ್ರೀಮತಿ ಹೆಚ್ ತಾರಾದೇವಿ ಇವರು ಮಕ್ಕಳಿಗೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿ ರಜಾಕಾಲದ ಶಿಬಿರಗಳ ಉದ್ದೇಶಗಳ ಬಗ್ಗೆ ಮಾತಾಡಿ ಮಕ್ಕಳ ಚಟುವಟಿಗಳಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ರಂಗ ಕಲಾವಿದ ದಿವಾಕರ ಕಟೀಲು ಇವರು ಮಾತನಾಡಿ ಇಂತಹ ಶಿಬಿರಗಳು ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಬೆಳೆಸಲು ಸೂಕ್ತ ವೇದಿಕೆಯಾಗಿದ್ದು ಆಯೋಜನೆಗೆ ಅಭಿನಂದನೆ ಸಲ್ಲಿಸಿದರು. ಕಲಾಕೇಂದ್ರದ ಅಧ್ಯಕ್ಷ ಶ್ರೀ ನಿರಂಜನ್ ಭಟ್, ಉಪಾಧ್ಯಕ್ಪ ಶ್ರೀ ವೆಂಕಟಕೃಷ್ಣ ಭಟ್ ಮತ್ತು ಕಾರ್ಯದರ್ಶಿ ಶ್ರೀ ಸುಬ್ರಹ್ಮಣ್ಯ ಜೋಶಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಲಾಕೇಂದ್ರದ ಕೋಶಾಧಿಕಾರಿ ಕುಮಾರಿ ಆದ್ಯತಾ ಭಟ್ ಶಿಬಿರವನ್ನು ಸಂಯೋಜಿಸಿ, ಶಿಬಿರಗೀತೆ, ಗೀಗೀ ಹಾಡು, ಕಲಿಕಾ ಚಟುವಟಿಕೆ ಮತ್ತು ಮನರಂಜನಾ ಆಟಗಳನ್ನು ಆಡಿಸಿದರು. ಶ್ರೀಮತಿ ಶ್ರೀವಿದ್ಯಾ ಕೇದ್ಲಾಯ ಸ್ವಾಗತಿಸಿ ಶ್ರೀ ವಸಂತ ಪಾಲನ್ ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷೀಯ ಭಾಷಣದೊಂದಿಗೆ ಶಿಬಿರ ನಡೆಸಲು ಸ್ಥಳಾವಕಾಶ, ಊಟೋಪಹಾರ ನೀಡಿ ಸಹಕರಿಸಿದ ಶ್ರೀ ಗೋಪಾಲಕೃಷ್ಣ ಉಪಾಧ್ಯ ಮತ್ತು ಶ್ರೀ ಶ್ರೀಕಾಂತ ಉಪಾಧ್ಯ ಮತ್ತು ಶಿಬಿರದ ಯಶಸ್ಸಿಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!