ಕಾರ್ಕಳ: ಜ್ಞಾನಸುಧಾ ಪ್ರೌಢಶಾಲೆಯ ಸಾಚಿ ಶೆಟ್ಟಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 623 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ 3 ನೇ ರ್‍ಯಾಂಕ್ ಪಡೆದಿದ್ದಾರೆ.
ಎಂಟನೇ ರ್‍ಯಾಂಕ್ ಪಡೆದಿದ್ದ ಸಾಚಿಗೆ, ಪುನರ್ ಮೌಲ್ಯಮಾಪನದ ಬಳಿಕ ಮೂರನೆಯ ರ್‍ಯಾಂಕ್ ಲಭಿಸಿದೆ.
ಇವರು ಎಸ್‌ಕೆಎಸ್ ಇನ್ಫಾಪ್ರಾಜೆಕ್ಟ್ ನ ವ್ಯವಸ್ಥಾಪಕ ನಿರ್ದೇಶಕ ಸುಜಯ್ ಕುಮಾರ್ ಶೆಟ್ಟಿ, ಅಮೃತಾ ಶೆಟ್ಟಿ ದಂಪತಿ ಪುತ್ರಿ.