Header Ads Widget

ಎಸ್.ಎಸ್.ಎಲ್.ಸಿ. ಮರು ಮೌಲ್ಯಮಾಪನ- ತೃಪ್ತಿ ನಾಯಕ್ ರಾಜ್ಯಕ್ಕೆ ತೃತೀಯ

ಕಳೆದ ಎಸ್ಎಸ್ಎಲ್.ಸಿ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ಉಡುಪಿ ಬಾಲಕಿಯರ ಸರಕಾರಿ ಪ ಪೂ ಕಾಲೇಜಿನ ಪ್ರೌಢಶಾಲಾ ವಿಭಾಗದ ಕು ತೃಪ್ತಿ ನಾಯಕ್ ರವರಿಗೆ 5 ಅಂಕ ಹೆಚ್ಚುವರಿಯಾಗಿ ಲಭಿಸಿ 623 ಅಂಕ ಪಡೆದು ರಾಜ್ಯಕ್ಕೆ 3 ನೇ ರಾಂಕ್ ಪಡೆದಿದ್ದಾರೆ. ಮರುಮೌಲ್ಯಮಾಪನಗೊಂಡ ಇಂಗ್ಲೀಷ್ ಪತ್ರಿಕೆಯಲ್ಲಿ 2 ಹಾಗೂ ಸಮಾಜ ವಿಜ್ಞಾನದಲ್ಲಿ 3 ಅಂಕ ಹೆಚ್ಚುವರಿಯಾಗಿ ಲಭಿಸಿದೆ.ಇವರು ಅಲೆವೂರು ರಾಧಾಕೃಷ್ಣ ನಾಯಕ್ ಪುಷ್ಪಾವತಿ ದಂಪತಿಗಳ ಪುತ್ರಿ.