ಅದಮಾರು: ಹಳೆ ವಿದ್ಯಾರ್ಥಿಗಳ ಸಮಾಗಮ


ಅದಮಾರು ಶ್ರೀ ಪೂರ್ಣ ಪ್ರಜ್ಞ ಪದವಿ ಪೂರ್ವ ಕಾಲೇಜಿನ 1995ರ ವಿಜ್ಞಾನ ವಿಭಾಗದ ಹಳೆ ವಿದ್ಯಾರ್ಥಿ ಗಳಿಂದ  ಆದಿತ್ಯವಾರ ಕಾಲೇಜಿನಲ್ಲಿ ಗುರು ನಮನ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿತ್ತು. ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿಯವರು ದೀಪ ಬೆಳಗಿಸಿ ಉದ್ಘಾ ಟಿಸಿ, ಆಶೀರ್ವದಿಸಿದರು.


 ಸಭೆಯ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಂಶುಪಾಲರಾದ ಶ್ರೀ ನಾಗರತ್ನ ರಾವ್ ವಹಿಸಿ, ಮುಖ್ಯ ಅತಿಥಿಗಳಾಗಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉದಯ ಶೆಟ್ಟಿ, ಕಾಲೇಜು ವಿಭಾಗದ ನಿವೃತ್ತ ಉಪ ನ್ಯಾಸಕರು ಹಾಗೂ ಹೈಸ್ಕೂಲ್ ವಿಭಾಗದ ಶಿಕ್ಷಕರು ಭಾಗವಹಿಸಿದ್ದರು. 

ಅವರನ್ನು ಹಳೆ ವಿದ್ಯಾರ್ಥಿಗಳಿಂದ ಸನ್ಮಾನಿಸಲಾಯಿತು. 25ನೇ ವಾರ್ಷಿಕೋತ್ಸವದ ಸಂದ ರ್ಭದಲ್ಲಿ (ಕೊರೊನ) ಹಳೆ ವಿದ್ಯಾರ್ಥಿಗಳಿಂದ ಶಾಲೆಯ ವಿದ್ಯಾ ನಿಧಿಗೆ ಸುಮಾರು 1.7 ಲಕ್ಷ ರೂಪಾಯಿ ದೇಣಿಗೆ ನೀಡಲಾಗಿತ್ತು.  ಪ್ರಾಧ್ಯಾಪಕರು ಹಿತನುಡಿಗಳೊಂದಿಗೆ ಹಳೆ ವಿದ್ಯಾರ್ಥಿ ಗಳನ್ನು ಹಾರೈಸಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು