BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಶಿಕ್ಷಣ

​​ ಉಡುಪಿ:~ ಹಿಂಸೆ ನಿಲ್ಲಿಸಿ : ಯುವ ಕಲಾವಿದರ ಮೂರು ಸಾವಿರ ಕಿ.ಮೀ ಬೈಕ್ ಜಾಥಾ



ಉಡುಪಿ:  ಹಿಂಸೆ ನಿಲ್ಲಿಸಿ ಎನ್ನುವ ಸ್ಲೋಗನ್ ನೊಂದಿಗೆ ಉಡುಪಿಯ ವಿದ್ಯಾರ್ಥಿ ಯುವ ಕಲಾವಿದರಿಬ್ಬರು ಮೋಟಾರು ಬೈಕಿನಲ್ಲಿ ಮೂರು ಸಾವಿರ ಕಿಲೋಮೀಟರ್ ಸುತ್ತಿ ಜಾಗೃತಿ ಮೂಡಿಸುವ ಮಹತ್ತರ ಕಾರ್ಯಕ್ಕೆ ಕೈಹಾಕಿದ್ದಾರೆ. ಮೇ 25ರಿಂದ ಆರಂಭಿಸಲಿರುವ ಈ ಜಾಗೃತಿ ಪಯಣ ನಿರಂತರ 12 ದಿನಗಳ ಬಳಿಕ ಜೂನ್ 5ರಂದು ಉಡುಪಿಯಲ್ಲಿ ಸಮಾಗಮ ಗೊಳ್ಳಲಿದೆ.

ರಂಗನಿರ್ದೇಶಕ, ಚಿತ್ರ ನಟ, ಬಾಸುಮ ಕೊಡಗು, ಸಂಗೀತ ಕಲಾವಿದೆ ಕಾವ್ಯವಾಣಿ ದಂಪತಿಗಳ ಪುತ್ರ, ರಂಗಭೂಮಿ – ಚಲನಚಿತ್ರ ನಟ, ಸಂಗೀತ ಸಂಯೋಜಕ, ಮಣಿಪಾಲದ ಮಾಹೆಯ ಮೀಡಿಯಾ ಕಮ್ಯುನಿಕೇಷನ್ ವಿದ್ಯಾರ್ಥಿ ದೃಶಾ ಕೊಡಗು ಮತ್ತು ಉಡುಪಿಯ ಇಂದ್ರಾಳಿಯ ಆರತಿ ಎಂಬುವರ ಪುತ್ರ ಹೊಟೆಲ್ ಮ್ಯಾನೇ ಜ್ಮೆಂಟ್ ವಿದ್ಯಾರ್ಥಿ  ಉಜ್ವಲ್ ಕಾಮತ್  ಜೊತೆಯಾಗಿ ಕರ್ನಾಟಕ, ಗೋವಾ ಹಾಗೂ ಮಹರಾಷ್ಟ್ರ ಸೇರಿದಂತೆ ಮೂರು ರಾಜ್ಯಗಳಲ್ಲಿ ಮೂರು ಸಾವಿರ ಕಿಲೋಮೀಟರ್ ಬೈಕ್ ಮೂಲಕ ಈ ಸಂದೇಶ ಜಾಥಾವನ್ನು ಕೈಗೊಳ್ಳಲಿದ್ದಾರೆ. 
ಸುದ್ಧಿಗಾರರೊಂದಿಗೆ ಮಾತನಾಡಿದ ವನಸುಮ ಟ್ರಸ್ಟ್ ಅಧ್ಯಕ್ಷರಾದ ಬಾಸುಮ ಕೊಡಗು, ಜೇಸಿಐ ಉಡುಪಿ ಸಿಟಿ ಮತ್ತು ಜೇಸೀಐ ಕಟಪಾಡಿ ಈ ರ್ಯಾಲಿಯ ಸಂಘಟನೆಯಲ್ಲಿ ಮುಖ್ಯ ಪಾತ್ರ ವಹಿಸುತ್ತಿದ್ದು, ಹಿರಿಯ ಜೇಸಿ ಬಾಸುಮ ಕೊಡಗು ಮಾರ್ಗದರ್ಶನ ದಲ್ಲಿ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ 50 ಕ್ಕೂ ಹೆಚ್ಚು ಜೇಸೀ ಘಟಕಗಳು ಇದರಲ್ಲಿ ಭಾಗಿಯಾಗುತ್ತಿದ್ದಾರೆ. 

ಕೌಟುಂಬಿಕ ಹಾಗೂ ಸಾಮಾಜಿಕ ಹಿಂಸೆ ಮತ್ತು ದೌರ್ಜನ್ಯದ ವಿರುದ್ಧ ಜನರನ್ನು ಎಚ್ಚರಿ ಸುವುದಕ್ಕಾಗಿ, 12 ದಿನಗಳ ಬೈಕ್ ರ್ಯಾಲಿಯನ್ನು ವನಸುಮ ಟ್ರಸ್ಟ್ ಕಟಪಾಡಿ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.  


ಹಿಂಸೆಯು ಹಾನಿಯನ್ನುಂಟುಮಾಡುತ್ತದೆ, ಸಂಬಂಧಗಳನ್ನು ಹಾನಿಗೊಳಿಸುತ್ತದೆ, ಸಮು ದಾಯಗಳನ್ನು ಅಸ್ಥಿರಗೊಳಿಸುತ್ತದೆ ಮತ್ತು ಆಕ್ರಮಣಶೀಲತೆಯ ಚಕ್ರಗಳನ್ನು ಶಾಶ್ವತ ಗೊಳಿಸುತ್ತದೆ. ಇದು ನ್ಯಾಯವನ್ನು ದುರ್ಬಲಗೊಳಿಸುತ್ತದೆ ಮತ್ತು ಕಾನೂನು ಮತ್ತು ನೈತಿಕ ಪರಿಣಾಮಗಳಿಗೆ ಕಾರಣವಾಗುತ್ತದೆ. 


ಸಂಭಾಷಣೆ, ಸಹಾನುಭೂತಿ ಮತ್ತು ಮಧ್ಯಸ್ಥಿಕೆಯಂತಹ ರಚನಾತ್ಮಕ ಪರ್ಯಾಯಗಳು ಸಂಘರ್ಷವನ್ನು ಪರಿಹರಿಸಲು ಹೆಚ್ಚು ಪರಿಣಾಮಕಾರಿ ಮಾರ್ಗಗಳ ಬಗಗ್ಎ ಜಾಗೃತಿ ಮೂಡಿಸುತ್ತೇವೆ ಎಂದು ದೃಶಾ ಕೊಡಗು ಹೇಳಿದ್ದಾರೆ. 


ವನಸುಮ ಟ್ರಸ್ಟ್ ಕಾವ್ಯವಾಣಿ ಕೊಡಗು, ಭಾಸ್ಕ‌ರ್ ಉದ್ಯಾವರ ಮತ್ತಿತರರು ಉಪಸ್ಥಿತ ರಿದ್ದರು.  ​ಮೇ 25 ರಂದು ಬೆಳಿಗ್ಗೆ 7.30 ಕ್ಕೆ ಕಾಪು ಹೊಸ ಮಾರಿಗುಡಿ ಆವರಣದಲ್ಲಿ ದೇವ ಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಮಾಜಿ ಶಾಸಕರಾದ ವಿನಯಕುಮಾ‌ರ್ ಸೊರಕೆ, ಲಾಲಾಜಿ ಮೆಂಡನ್, ಯೋಗೀಶ್ ಶೆಟ್ಟಿ ಹಾಗೂ ಕಾಪು ಪೋಲಿಸ್ ಸಬ್ ಇನ್ಸೆಕ್ಟರ್ ತೇಜಸ್ವಿ ಇವರುಗಳು ಉಪಸ್ಥಿತಿಯಲ್ಲಿ ಜಾಗೃತಿ ಯಾತ್ರೆಗೆ ಚಾಲನೆ ನೀಡಲಾಗುತ್ತದೆ​


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!