BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ರಾಜ್ಯ

ತಾಳಿ ಕಟ್ಟುವ ವೇಳೆ ಮದುವೆ ಮಂಟಪದಲ್ಲಿ ಹೈ ಡ್ರಾಮಾ! ಪ್ರಿಯಕರನ ಕರೆಗೆ ಓಡಿದ ವಧು; ಸೋತುಬಿಟ್ಟ ವರ!

ವರ ತಾಳಿ ಕಟ್ಟುವ ವೇಳೆ ವಧು “ನನಗೆ ಮದುವೆ ಬೇಡ’ ಎಂದು ಹಠ ಹಿಡಿದಿದ್ದರಿಂದ ಮದುವೆ ಮುರಿದು ಬಿದ್ದ ಪ್ರಸಂಗ ಹಾಸನದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದಿದೆ.

ಹಾಸನದ ಬೂವನಹಳ್ಳಿ ಬಡಾವಣೆ ನಿವಾಸಿ, ಸ್ನಾತಕೋತ್ತರ ಪದವೀಧರೆ ಪಲ್ಲವಿ ಹಾಗೂ ಆಲೂರು ತಾಲೂಕಿನ ತಿಮ್ಮನಹಳ್ಳಿಯ ಜಿ. ತಿಮ್ಮನಹಳ್ಳಿಯ ನಿವಾಸಿ, ಸರಕಾರಿ ಶಾಲಾ ಶಿಕ್ಷಕ ವೇಣುಗೋಪಾಲ್‌ ಅವರ ಮದುವೆ 3 ತಿಂಗಳ ಹಿಂದೆ ನಿಶ್ಚಿಯವಾಗಿತ್ತು. ಇದರಂತೆ ಶುಕ್ರವಾರ ನಡೆಯಲಿತ್ತು. ಮಂಟಪದಲ್ಲಿ ವರ ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ವಧು ಮದುವೆ ಬೇಡ ಎಂದು ನಿರಾಕರಿಸಿದಳು.

ಪಲ್ಲವಿ ಕೆಲವು ವರ್ಷಗಳಿಂದ ಹಾಸನ ತಾಲೂಕಿನ ಗೊರೂರು ಸಮೀಪದ ಬನವಾಸೆ ಗ್ರಾಮದ ಯುವಕನ‌ನ್ನು ಪ್ರೀತಿಸುತ್ತಿದ್ದಳು. ಮಂಟಪಕ್ಕೆ ಹೋಗುತ್ತಿದ್ದಾಗ ಪ್ರಿಯಕರನಿಂದ ದೂರವಾಣಿ ಕರೆ ಬಂದಿದ್ದು, ಬಳಿಕ ತಾನು ಆತನನ್ನೇ ಮದುವೆ ಆಗುವೆ ಎಂದು ಹೇಳಿದ್ದರಿಂದ ಮದುವೆ ಮುರಿದು ಬಿತ್ತು.

ಈ ನಡುವೆ ರಘುವ‌ನ್ನು ಕರೆಸಿದ ಪಲ್ಲವಿ ಮನೆಯವರು ಆದಿಚುಂಚನ ಗಿರಿ ಮಠದ ಆವರಣದಲ್ಲಿರುವ ಗಣಪತಿ ದೇಗುಲದಲ್ಲಿ ಶುಕ್ರವಾರ ಸಂಜೆ ಪಲ್ಲವಿ – ರಘು ಮದುವೆಯನ್ನು ನೆರವೇರಿಸಿದರು.

ವಧು ಪಲ್ಲವಿ ಹಠದಿಂದ ಮದುವೆ ಮುರಿದು ಬಿದ್ದು ಬೇಸರಗೊಂಡಿದ್ದ ವರ ವೇಣುಗೋಪಾಲ್‌ ಕುಟುಂಬದವರಿಗೆ ಪಲ್ಲವಿ ಕುಟುಂಬದವರು ಪೊಲೀಸರ ಸಮ್ಮುಖದಲ್ಲಿ 1.75 ಲಕ್ಷ ರೂ. ಖರ್ಚು ಪರಿಹಾರ ನೀಡಿದ್ದಾರೆ.



Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!