BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ರಾಜ್ಯ

ಅಂಚೆ ಮುದ್ರೆಯಲ್ಲಿ ವಿಜೃಂಭಿಸಲಿದೆ ಚಿಕ್ಕಮಗಳೂರಿನ ಕಾಫಿ ತೋಟಗಳು

ಚಿಕ್ಕಮಗಳೂರಿನ ಕಾಫಿ ತೋಟಗಳ ಚಿತ್ರವನ್ನು ಹೊಂದಿರುವ ಶಾಶ್ವತ ಚಿತ್ರ ಸಹಿತ ಅಂಚೆ ಮೊಹರು ಇಂದು ಚಿಕ್ಕಮಗಳೂರಿನ ಪ್ರಧಾನ ಅಂಚೆ ಕಚೇರಿಯಲ್ಲಿ ಬಿಡುಗಡೆಗೊಂಡಿತು. ಚಿಕ್ಕಮಗಳೂರು ವಿಭಾಗದ ಅಂಚೆ ಅಧೀಕ್ಷಕರಾದ ಶ್ರೀ ಶ್ರೀನಾಥ್ ಎನ್.ಬಿ. ಅವರು ಈ ವಿಶೇಷ ಮೊಹರನ್ನು ಬಿಡುಗಡೆಗೊಳಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಇಂದಿನಿಂದ ಈ ಮೊಹರು ಇಲ್ಲಿನ ಪ್ರಧಾನ ಅಂಚೆ ಕಚೇರಿಯಲ್ಲಿ ಲಭ್ಯವಿದೆ. ಗ್ರಾಹಕರು, ಅಂಚೆ ಚೀಟಿ ಸಂಗ್ರಾಹಕರು ತಮ್ಮ ಪತ್ರಗಳ ಮೇಲೆ ಈ ವಿಶೇಷ ಅಂಚೆ ಮುದ್ರೆಯನ್ನು ಪಡೆಯಬಹುದಾಗಿದೆ ಅಥವಾ ಈ ಮುದ್ರೆಯನ್ನು ಹೊಂದುವ ಪತ್ರಗಳನ್ನು ರವಾನಿಸಬಹುದಾಗಿದೆ.  

ಕಾಫಿ ಬೋರ್ಡಿನ ಡೆಪ್ಯುಟಿ ಡೈರೆಕ್ಟರ್ ಆಗಿರುವ ಶ್ರೀ ವೆಂಕಟ ರೆಡ್ಡಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾಫಿ ನಾಡು ತನ್ನದೇ ಆದ ವಿಶೇಷ ಅಂಚೆ ಮೊಹರನ್ನು ಹೊಂದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. 

ಪ್ರಧಾನ ಅಂಚೆ ಪಾಲಕರಾದ ಶ್ರೀ ಸುನಿಲ್ ವಾಸ್ ಅವರು ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಅಂಚೆ ಪಾಲಕರಾದ ಶ್ರೀ ಮುರಳಿಧರ್ ಎ. ಎಸ್. ಅವರು ಮಾತನಾಡಿ ಈ ಚಿತ್ರ ಸಹಿತ ಅಂಚೆ ಮೊಹರು ಬಿಡುಗಡೆಗೊಂಡಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದರು. ಶ್ರೀಮತಿ ಶಶಿರೇಖ ರವರು ಪ್ರಾರ್ಥನೆ ಮಾಡಿದರು. ಶ್ರೀ. ಬಿ ಎನ್ ಪ್ರದೀಪ ರವರು ಕಾರ್ಯಕ್ರಮ ನಿರ್ವಹಿಸಿದರು. ಶ್ರೀಮತಿ ಕಾವ್ಯಶ್ರೀ ರವರು ಧನ್ಯವಾದ ಸಮರ್ಪಿಸಿದರು. ಚಿಕ್ಕಮಗಳೂರು ಉಪ ವಿಭಾಗದ ಅಂಚೆ ನಿರೀಕ್ಷಕರಾದ ಶ್ರೀ ಡಿ. ಎನ್. ಗಂಗಾಧರಪ್ಪ ಅವರು ಕೂಡ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮೂಡಿಗೆರೆ ಅಂಚೆ ನಿರೀಕ್ಷಕರಾದ ಶ್ರೀ ಷಣ್ಮುಖ ಹೆಚ್ ಚವಾಣ್, ಕೊಪ್ಪ ಅಂಚೆ ನಿರೀಕ್ಷಕರಾದ ಶ್ರೀ ಹರಿಪ್ರಸಾದ್ ರಾವ್, ಅಂಚೆ ಜೀವ ವಿಮಾ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಗಣೇಶ್ ನಾಯಕ್, ಅಂಚೆ ಮಾರುಕಟ್ಟೆ ಅಧಿಕಾರಿಗಳಾದ ಶ್ರೀ ದೊಡ್ದೇಶ್ ಹಾಗೂ ಅಂಚೆ ಸಿಬ್ಬಂದಿಗಳು ಮತ್ತು ಗ್ರಾಹಕರು ಉಪಸ್ಥಿತರಿದ್ದರು.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!