Header Ads Widget

ಬೆಳಗಾವಿ: ಅಪ್ರಾಪ್ತೆ ಮೇಲೆ ಅತ್ಯಾಚಾರ! ಸ್ವಾಮೀಜಿ ಅರೆಸ್ಟ್!

ಅಪ್ರಾಪ್ತೆ ಮೇಲೆ ಕಾಮುಕ ಸ್ವಾಮೀಜಿ ನಿರಂತರ ಅತ್ಯಾಚಾರ ಮಾಡಿರುವ ಆರೋಪದ ಮೇಲೆ ಸ್ವಾಮೀಜಿಯನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆ, ರಾಯಭಾಗ ತಾಲೂಕಿನ ಮೆಖಳಿ ಗ್ರಾಮದ ಮಠದ ಲೋಕೇಶ್ವರ ಸ್ವಾಮಿಯ ಕರ್ಮಕಾಂಡ ಬಯಲಾಗಿದ್ದು ಮೂಡಲಗಿ ತಾಲೂಕಿನ ಬಾಲಕಿಯ ಮೇಲೆ ಕಾಮುಕ ಸ್ವಾಮೀಜಿ ಅತ್ಯಾಚಾರ ವೆಸಗಿರುವ ಆರೋಪದಡಿ ಪ್ರಕರಣ ದಾಖಲಾಗಿದೆ.

ಮನೆಗೆ ಹೊರಟ ಬಾಲಕಿಯನ್ನು ಕುಟುಂಬ ಪರಿಚಯಸ್ತ ಸ್ವಾಮೀಜಿ ಎಂದು ಮನೆಗೆ ಬಿಡುವುದಾಗಿ ಕಾರಲ್ಲಿ ಕೂರಿಸಿಕೊಂಡು ಮನೆ ಬಂದರು ಗಾಡಿ ನಿಲ್ಲಿಸದೆ ಬಾಗಲಕೋಟೆ ಮೂಲಕ ರಾಯಚೂರಿನತ್ತ ಪ್ರಯಾಣ ಬೆಳೆಸಿ ಲಾಡ್ಜ್ ಒಂದರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ವೆಸಗಿ ಅಲ್ಲಿಂದ ಮಹಾಲಿಂಗಾಪುರದ ಬಸ್ ನಿಲ್ದಾಣದಲ್ಲಿ ಬಾಲಕಿಯನ್ನ ಬಿಟ್ಟು "ಮನೆಯಲ್ಲಿ ವಿಷಯ ಹೇಳಿದರೆ ಜೀವ ಸಹಿತ ಬಿಡಲ್ಲ" ಎಂದು ಧಮ್ಕಿ ಹಾಕಿದನಂತೆ. ನೊಂದ ಬಾಲಕಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾಳೆ ಈ ಸಂಬಂಧ ರಾಯಭಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಸ್ವಾಮೀಜಿಯನ್ನ ಬಂಧಿಸಿದ್ದಾರೆ.