ಉದ್ಯಾವರ : ಡಿವೈಡರ್ ಗೆ ಡಿಕ್ಕಿ ಹೊಡೆದ ಕಾರು; ಮೂವರಿಗೆ ಗಾಯ!

ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿದ ಘಟನೆ ಜೂ.6ರ ಶುಕ್ರವಾರ ಮುಂಜಾನೆ ರಾ.ಹೆ. 66ರ ಉದ್ಯಾವರದಲ್ಲಿ ಕಿಯಾ ಶೋರೂಮ್ ಬಳಿ ನಡೆದಿದೆ.

ಕಾರು ಮಂಗಳೂರಿನಿಂದ ಹರ್ಯಾಣದತ್ತ ತೆರಳುತ್ತಿತ್ತು ಎನ್ನಲಾಗಿದೆ. ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ಡಿವೈಡರ್ ಮೇಲಿನ ಕ್ರಾಶ್ ಗಾರ್ಡ್ ಸಹಿತ ಕಾರು ನಜ್ಜು ಗುಜ್ಜಾಗಿದ್ದು ಹಾನಿ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು