BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಸುದ್ದಿ

ಉಡುಪಿಯಲ್ಲಿ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ (PMFME) ಸ್ವಯಂ ಉದ್ಯೋಗ ಯೋಜನೆಯ ಅರ್ಜಿ ಆಹ್ವಾನ- ಮಾಹಿತಿ.


ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣ ಘಟಕ ಯೋಜನೆಯ  (PMFME) ಮೂಲಕ 50% ಸಹಾಯಧನ ಪಡೆದು ಸ್ವಯಂ ಉದ್ಯೋಗ ಸೃಷ್ಟಿಸಿಕೊಳ್ಳುವ ಬಗ್ಗೆ 2025-26 ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯಲ್ಲಿ 250 ಹೊಸ ಮತ್ತು ಚಾಲ್ತಿಯಲ್ಲಿರುವ ಆಹಾರ ಸಂಸ್ಕರಣಾ ಘಟಕಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. 


ಈ ಯೋಜನೆಯಡಿ ಬಾಡಿಗೆ/ಲೀಸ್‌ಗೆ ಮತ್ತು ಸ್ವಂತ ಕಟ್ಟಡ ಅಂಗಡಿ ಕೋಣೆಗಳಲ್ಲಿ ಕಿರು ಉದ್ಯಮವನ್ನು ಸ್ಥಾಪಿಸಬಹುದಾಗಿದೆ. 18 ವರ್ಷ ಮೇಲ್ಪಟ್ಟ ಮಹಿಳೆಯರು, ಪುರುಷರು ಹಾಗೂ ಸ್ವ-ಸಹಾಯ ಸಂಘಗಳು, ರೈತ ಉತ್ಪಾದಕ ಸಂಸ್ಥೆಗಳು ಕೋ-ಆಪರೇಟಿವ್ ಸೊಸೈಟಿಗಳು, ಖಾಸಗಿ ಮಾಲಿಕತ್ವದ ಸಂಸ್ಥೆಗಳು ಮತ್ತು ಸರಕಾರೇತರ ಸಂಸ್ಥೆಗಳು ಈ ಯೋಜನೆಯ ಸೌಲಭ್ಯ ಪಡೆಯಬಹುದಾಗಿದೆ.

 
PMFME ಯೋಜನೆಯ ವಿಶಿಷ್ಟತೆಯೆಂದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಶೇ. 50 ರಷ್ಟು ಸಹಾಯಧನ ೧೫ ಲಕ್ಷ ಗರಿಷ್ಠ ಮಿತಿಯೊಂದಿಗೆ ಸಹಾಯಧನ ನೀಡಲಾಗುವುದು. ಹಿಂದೆ ಇತರ ಯೋಜನೆಯಡಿಯಲ್ಲಿ ಸಬ್ಸಿಡಿ ಸಹಾಯಧನ ಪಡೆದವರೂ ಈ ಯೋಜನೆ ಯಲ್ಲಿ ಪಡೆಯಲು ಅವಕಾಶವಿದೆ. ಈಗಾಗಲೇ ಈ ಕಾರ್ಯಕ್ರಮದಡಿ 2024-25ನೇ ಸಾಲಿ ನಲ್ಲಿ 340ಕ್ಕೂ ಹೆಚ್ಚು ಕಿರು ಘಟಕಗಳು ಉಡುಪಿ ಜಿಲ್ಲೆಯಲ್ಲಿ ಸ್ಥಾಪನೆಯಾಗಿದ್ದು, ಹಾಲಿ ವರ್ಷ ಅಂದರೆ 2025026ರಲ್ಲಿ 250ಘಟಕಗಳನ್ನು ಆರಂಭಿಸಲು ಯೋಜಿಸಲಾಗಿದೆ.
 
PMFME ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ: ಆಹಾರ ಸಂಸ್ಕರಣ ಘಟಕದ ಸಹಾಯಧನ ಪಡೆಯಲು ಸರ್ಕಾರದ ಯಾವುದೇ ಇಲಾಖೆಗಳಿಗೆ ಅರ್ಜಿ ಹಾಕಲು ಅಲೆದಾಡಬೇಕಾದ ಅವಶ್ಯಕತೆ ಇಲ್ಲ. ಈ ಯೋಜನೆಗೆ ಉಡುಪಿ ಜಿಲ್ಲೆ ಮಾಹಿತಿಗಾಗಿ ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ ಇಲಾಖೆಯಿಂದ ಸೂರಜ್ ಶೆಟ್ಟಿಯವರನ್ನು ನೇಮಿಸಿದೆ. ಸೂರಜ್ ಶೆಟ್ಟಿಯವರ ದೂರವಾಣಿ ಸಂಖ್ಯೆ: ೯೦೧೯೦೭೫೦೫೧ ಇವರಿಗೆ ಕರೆ ಮಾಡಿ, ದಾಖಲಾತಿಗಳನ್ನು ನೀಡಿ, ಇವರ ಮಾರ್ಗದರ್ಶನದಲ್ಲಿ ಬ್ಯಾಂಕ್ ಸಾಲ ಪಡೆದು ಈ ಯೋಜನೆಯಂತೆ ಸಬ್ಸಿಡಿ ಸಹಾಯಧನ ಪಡೆಯಬಹುದಾಗಿದೆ.

 
ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣೆ ಯೋಜನೆ ಅಡಿಯಲ್ಲಿ ಬರುವ ಸಂಸ್ಕರಿಸಬಹುದಾದ0ತಹ ಮತ್ತು ಮೌಲ್ಯವರ್ಧನೆ ಮಾಡಬಹುದಾದಂತಹ ಆಹಾರ ಘಟಕಗಳು ಇಂತಿವೆ.
* ಮೀನಿನ ಮೌಲ್ಯವಧಿತ ಪದಾರ್ಥಗಳು
* ಹಿಟ್ಟಿನ ಗಿರಣಿಗಳು ಮತ್ತು ಪ್ಯಾಕಿಂಗ್ ಮೆಶಿನ್
* ಎಣ್ಣೆ ಗಾಣಗಳು
* ಬೇಕರಿ ಉತ್ಪನ್ನ
* ಅರಿಶಿಣ ಸಂಸ್ಕರಣೆ
* ಹಪ್ಪಳ, ಸಂಡಿಗೆ, ಉಪ್ಪಿನಕಾಯಿ ತಯಾರಿಕೆ. ನಿಪ್ಪಟ್ಟು, ಪಾನಿಪುರಿ, ಕೋಡುಬಳೆ, ಮಿಕ್ಸರ್, ಚಿಪ್ಸ್ ತಯಾರಿಕೆ ಸಂಸ್ಕರಿಸಿದ ಚಪಾತಿ, ಪರೋಟ, ಪೂರಿ, ಹೋಳಿಗೆ ಉತ್ಪನ್ನಗಳ ತಯಾರಿಕೆ.
* ಮಸಾಲ ಪದಾರ್ಥಗಳು/ ಸಾಂಬಾರ್ ಉತ್ಪನ್ನಗಳ ತಯಾರಿಕೆ.
* ಹಾಲಿನ ಉತ್ಪನ್ನಗಳ ತಯಾರಿಕೆ
* ಸಿಹಿ ತಿಂಡಿ, ಖಾರ ತಿಂಡಿಗಳ ತಯಾರಿಕೆ
* ಬೆಲ್ಲ ಮತ್ತು ಮಿಠಾಯಿ ತಯಾರಿಕೆ ಘಟಕ
* ಕಾಫಿ ಪುಡಿ, ಟೀ ಪುಡಿ ಸಂಸ್ಕರಣಾ ಘಟಕ
* ಚಾಕ್ಲೇಟ್ ತಯಾರಿಕೆ ಘಟಕ
* ಜೇನು ಸಂಸ್ಕರಣಾ ಘಟಕ
* ಸಿರಿಧಾನ್ಯಗಳಿಂದ ಉಪ ಉತ್ಪನ್ನಗಳ ತಯಾರಿಕೆ
* ಡ್ರೈ ಫೂಟ್ಸ್ ಸಂಸ್ಕರಣೆ ಮತ್ತು ಐಸ್ ಕ್ರೀಂ ತಯಾರಿಕೆ
* ಹಸಿಮೆಣಸಿನಕಾಯಿ ಮತ್ತು ಟೋಮೆಟೋ ಪೇಸ್ಟ್ ಮತ್ತು ಸಾಸ್ ತಯಾರಿಕೆ
* ಶಾವಿಗೆ, ರವಾ ನೂಡಲ್ಸ್ ತಯಾರಿಕೆ
* ಕೋಳಿ ಮತ್ತು ಕೋಳಿ ಮಾಂಸ ಸಂಸ್ಕರಣಾ ಘಟಕ
* ಪಶು ಮತ್ತು ಮೀನಿನ ಆಹಾರ
* ಮನುಷ್ಯರು ಮತ್ತು ಪ್ರಾಣಿಗಳು ಸೇವಿಸುವ ಹಾಗೂ ಸಂಸ್ಕರಿಸಬಹುದಾದ ಎಲ್ಲಾ ಆಹಾರ ಪದಾರ್ಥಗಳು ಈ ಯೋಜನೆಯಲ್ಲಿ ಅರ್ಹರು

ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಇರುವವರು, ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡವರು ಉಡುಪಿ ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾದ ಸೂರಜ್ ಶೆಟ್ಟಿಯವರನ್ನು ದೂರವಾಣಿ ಸಂಖ್ಯೆ: ೯೦೧೯೦೭೫೦೫೧ ಮೂಲಕ ಸಂಪರ್ಕಿಸಬಹುದೆ೦ದು ಸಂಸದರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!