BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಸುದ್ದಿ

ಮಾಹೆ, ಮಣಿಪಾಲದಲ್ಲಿ ‘ಸೆಕೆಂಡರಿ ಕೃಷಿ ಮತ್ತು ಅಪ್ಸೈಕಲ್ ಫುಡ್ಸ್’ ಕಾರ್ಯಾಗಾರ

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಮಣಿಪಾಲ ಸ್ಕೂಲ್ ಆಫ್ ಕಾಮರ್ಸ್ ಅಂಡ್ ಇಕಾನಾಮಿಕ್ಸ್ (MSCE) ಮತ್ತು ಉಡುಪಿ ಜಿಲ್ಲಾ ಕೃಷಿ ಇಲಾಖೆ ಜೊತೆಯಾಗಿ ಮೇ ೨೯ ರಂದು " ಸೆಕೆಂಡರಿ ಕೃಷಿ ಮತ್ತು ಅಪ್‌ಸೈಕಲ್ ಫುಡ್ಸ್ " ಎಂಬ ವಿಷಯದ ಕಾರ್ಯಾಗಾರವನ್ನು ಯಶಸ್ವಿಯಾಗಿ ಆಯೋಜಿಸಿತು.

ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು ೪೫ ರೈತರು, ೧೫ ಪ್ರಗತಿಪರ ಕೃಷಿಕರು ಮತ್ತು ೨೦ಕ್ಕೂ ಹೆಚ್ಚು ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಕೃಷಿಯಲ್ಲಿ ಮೌಲ್ಯವರ್ಧನೆ ಮತ್ತು ಆಹಾರದ ನಷ್ಟವನ್ನು ತಡೆಯುವ ಹೊಸ ಮಾರ್ಗಗಳ ಬಗ್ಗೆ ತಿಳಿಸುವುದು ಕಾರ್ಯಾಗಾರದ ಉದ್ದೇಶವಾಗಿತ್ತು.

ಕಾರ್ಯಕ್ರಮದ ಉದ್ಘಾಟನೆಯಲ್ಲಿ ಜಂಟಿ ಕೃಷಿ ನಿರ್ದೇಶಕಿ ಶ್ರೀಮತಿ. ಪೂರ್ಣಿಮಾ, ಉಪನಿರ್ದೇಶಕರಾದ ಡಾ. ರೆಡ್ಡಪ್ಪ (ಪಶುಸಂಗೋಪನೆ) ಮತ್ತು ಶ್ರೀ ಚಂದ್ರಶೇಖರ ನಾಯ್ಕ (ಕೃಷಿ) ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಸಂಯೋಜಕರಾದ ಡಾ. ಪ್ರವೀಣ್ ಕುಮಾರ್ ಅವರು ಯೋಜನೆಯ ಮಹತ್ವವನ್ನು ವಿವರಿಸಿದರು. ಮುಖ್ಯ ಭಾಷಣವನ್ನು ಸೌ. ಪೂರ್ಣಿಮಾ ನೀಡಿದರು ಮತ್ತು ಅಧ್ಯಕ್ಷೀಯ ಭಾಷಣವನ್ನು MSCE ನಿರ್ದೇಶಕರಾದ ಡಾ. ಸಂದೀಪ್ ಶೆಣೈ ನೀಡಿದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಸೌ. ಪೂಜಾ ಅವರು ಸೆಕೆಂಡರಿ ಕೃಷಿಯ ಬಗ್ಗೆ ಪ್ರಸ್ತುತಪಡಿಸಿದರು. ತೋಟಗಾರಿಕೆ ಇಲಾಖೆಯ ಸಹಾಯಕ ಅಧಿಕಾರಿ ಶ್ರೀರಾಮ ಹೆಗ್ಡೆ ಅವರು ನೈಸರ್ಗಿಕ ಕೃಷಿಯ ಬಗ್ಗೆ ಮಾಹಿತಿ ನೀಡಿದರು.

ಅಪ್‌ಸೈಕಲ್ ಫುಡ್ಸ್ ಕುರಿತು ವಿಶೇಷ ಉಪನ್ಯಾಸವನ್ನು ಡಾ. ಭಾಗ್ಯಜ್ಯೋತಿ ಸಿ.ಕೆ. ನೀಡಿದರು. ಅವರು ಆಹಾರದ ಉಳಿದ ಭಾಗಗಳಿಂದ ಹೇಗೆ ಮೌಲ್ಯವರ್ಧಿತ ಪದಾರ್ಥಗಳನ್ನು ತಯಾರಿಸಬಹುದು ಎಂಬುದನ್ನು ವಿವರಿಸಿದರು.

ಕಾರ್ಯಾಗಾರದ ಅಂತ್ಯದಲ್ಲಿ ರೈತರು ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ನಡೆಯಿತು. ಈ ಸಂವಾದವನ್ನು ಡಾ. ರೋಹಿತ್ ಭಾಗವತ್ ಮತ್ತು ಡಾ. ಸತೀಶ್ ಕುಮಾರ್ ಅವರು ಮುನ್ನಡೆಸಿದರು.

ಈ ಕಾರ್ಯಕ್ರಮವು ರೈತರು, ಅಧಿಕಾರಿಗಳು ಹಾಗೂ ಕಾಲೇಜು ಅಧ್ಯಾಪಕರ ನಡುವೆ ಜ್ಞಾನದ ವಿನಿಮಯಕ್ಕೆ ಹಾಗೂ ಭವಿಷ್ಯದ ಸಹಕಾರಕ್ಕೆ ಒಳ್ಳೆಯ ವೇದಿಕೆಯಾಯಿತು.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!