BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಶಿಕ್ಷಣ

ವಿದ್ಯಾರ್ಥಿ ಜೀವನದಲ್ಲಿ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ -ಸಿ ಎ ಪ್ರಶಾಂತ್ ಹೊಳ್ಳ

ಪೂರ್ಣಪ್ರಜ್ಞ ಕಾಲೇಜು  a (ಸ್ವಾಯತ್ತ), ಹಾಗೂ ಸ್ನಾತಕೋತ್ತರ ಕೇಂದ್ರ, ಉಡುಪಿ ಇಲ್ಲಿ ನಡೆದ ಪ್ರಜ್ಞಾ ಉದ್ಯೋಗ ಮೇಳ -2025 ಇದರ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟಕರಾಗಿ ಭಾಗವಹಿಸಿದ್ದ ಪೂರ್ಣಪ್ರಜ್ಞ ಕಾಲೇಜು ಉಡುಪಿ ಆಡಳಿತ ಮಂಡಳಿಯ ಗೌರವ ಕೋಶಾಧಿಕಾರಿ ಸಿಎ ಪ್ರಶಾಂತ್ ಹೊಳ್ಳ ಇವರು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗ ಮಾರುಕಟ್ಟೆ ಎನ್ನುವುದು ಸುಲಭದ ಮಾತಲ್ಲ, ಇಂತಹ ಉದ್ಯೋಗ ಮೇಳಗಳಲ್ಲಿ ಭಾಗವಹಿಸಿ ಉದ್ಯೋಗವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗ ಬೇಕು, ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಉದ್ಯೋಗಾಕಾಂಕ್ಷಿಗಳಿಗೆ ಕರೆ ಕೊಟ್ಟರು.


ಪ್ರಜ್ಞಾ ಉದ್ಯೋಗ ಮೇಳದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ ರಾಮು ಎಲ್ ಇವರು ಇಂತಹ ಉದ್ಯೋಗ ಮೇಳವನ್ನು ಪ್ರತಿ ವರ್ಷ ನಮ್ಮ ಕಾಲೇಜಿನಲ್ಲಿ ಆಯೋಜಿಸಲಾಗುತ್ತಿದ್ದು,  ಹಲ ವಾರು ಜನರು ಇದರ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ಇಂತಹ ಅವಕಾಶಗಳನ್ನು ಕಲ್ಪಿಸುವುದು ನಮ್ಮ ವಿದ್ಯಾಸಂಸ್ಥೆಯ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ಎಲ್ಲಾ ಉದ್ಯೋಗಾಕಾಂಕ್ಷಿಗಳಿಗೆ ಶುಭ ಹಾರೈಸಿದರು.


ಕುಂದಾಪುರದ ಸೃಷ್ಟಿ  ಇನ್ಫೋಟೆಕ್ ನ ಮ್ಯಾನೇಜಿಂಗ್ ಡೈರೆಕ್ಟರ್  ಹರ್ಷವರ್ಧನ್ ಶೆಟ್ಟಿ ಹಾಗೂ ಕೇಂದ್ರ ಸರಕಾರದ ಕೌಶಲ್ಯ ಅಭಿವೃದ್ಧಿ ಯೋಜನೆಯ ಜಿಲ್ಲಾ ಪ್ರಾಜೆಕ್ಟ್ ಮ್ಯಾನೇಜರ್ ಶ್ರೀಮತಿ ಸಂಧ್ಯಾ ರಾಣಿ ಇವರು ಉದ್ಯೋಗ ಮೇಳ ಮೇಳ ದ ಯಶಸ್ಸಿಗೆ ಸಹಕರಿಸಿದ್ದರು. 


ಉದ್ಯೋಗ ಮೇಳದಲ್ಲಿ 18 ಕಂಪನಿಗಳು ಭಾಗವಹಿಸಿದ್ದು ಸುಮಾರು 600ಕ್ಕೂ ಹೆಚ್ಚು ಅಭ್ಯರ್ಥಿಗಳು  ಆನ್ ಲೈನ್ ನಲ್ಲಿ ನೋಂದಾಯಿಸಿದ್ದರು. 350ಕ್ಕೂ ಹೆಚ್ಚು ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದರು. ವಿವಿಧ ಕಂಪನಿಗಳಲ್ಲಿ ಸುಮಾರು 269 ವಿದ್ಯಾರ್ಥಿಗಳು ಮುಂದಿನ ಸುತ್ತಿಗೆ ಆಯ್ಕೆ ಯಾದರು. 148 ವಿದ್ಯಾರ್ಥಿಗಳು ಅಂತಿಮವಾಗಿ ಆಯ್ಕೆಗೊಂಡಿದ್ದಾರೆ.


ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನ ಅಧಿಕಾರಿ ಡಾ ರಮೇಶ್ ಟಿಎಸ್, ಅಂತರಿಕ ಗುಣಮಟ್ಟ ಖಾತರಿ ಘಟಕದ ಸಂಯೋಜಕ ಡಾ ವಿನಯ್ ಕುಮಾರ್, ಉದ್ಯೋಗ ಮಾರ್ಗದರ್ಶನ  ಘಟಕದ  ಸಂಯೋಜಕ ಡಾ ಆನಂದ ಆಚಾರ್ಯ,  ಪ್ಲೇಸ್ ಮೆಂಟ್ ಆಫೀಸರ್ ಜಯಲಕ್ಷ್ಮಿ ಕಾರ್ಯಕ್ರಮದಲ್ಲಿ ಉಪ ಸ್ಥಿತರಿದ್ದರು.  ಉಪನ್ಯಾಸಕಿ  ಪ್ರತಿಭಾ ಭಟ್ ನಿರ್ವಹಿಸಿ, ಶ್ರೀಮತಿ ಶ್ರೀರಕ್ಷಾ ಸ್ವಾಗತಿಸಿ,  ಸುಮಲತಾ ವಂದಿಸಿದರು.



Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!