BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಸುದ್ದಿ

ಕೋಟ ಶಿವರಾಮ ಕಾರಂತರ ಶಾಶ್ವತ ಚಿತ್ರ ಸಹಿತ ಅಂಚೆ ಮೊಹರು

ಭಾರತೀಯ ಅಂಚೆ ಇಲಾಖೆಯ ಉಡುಪಿ ಅಂಚೆ ವಿಭಾಗದ ಕೋಟ ಉಪ ಅಂಚೆ ಕಚೇರಿಯಲ್ಲಿ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಕೋಟ ಶಿವರಾಮ ಕಾರಂತರ ಶಾಶ್ವತ ಚಿತ್ರ ಸಹಿತ ಅಂಚೆ ಮೊಹರು ದಿನಾಂಕ 30.05.2025 ರಂದು ಬಿಡುಗಡೆಗೊಂಡಿತು. ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ರಮೇಶ್ ಪ್ರಭು ರವರು ಇದನ್ನು ಬಿಡುಗಡೆಗೊಳಿಸಿ ನಾಡು ಕಂಡ ಶ್ರೇಷ್ಠ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಲೋಕದ ವಿಸ್ಮಯ, ಕಡಲ ತೀರದ ಭಾರ್ಗವ ಕೋಟ ಶಿವರಾಮ ಕಾರಂತರ ವಿಶೇಷತೆ ಜನ ಮಾನಸದಲ್ಲಿ ಹಸಿರಾಗಿರಲು ಹಾಗೂ ಅವರ ವ್ಯಕ್ತಿತ್ವ ಸದಾ ನೆನಪಿನಲ್ಲಿರಲು ಭಾರತೀಯ ಅಂಚೆ ಇಲಾಖೆ ಪರ್ಮನೆಂಟ್ ಪಿಕ್ಟೋರಿಯಲ್ ಕ್ಯಾನ್ಸಲೇಷನ್ ( ಶಾಶ್ವತ ಚಿತ್ರ ಸಹಿತ ಅಂಚೆ ಮೊಹರು )ನ ಮೂಲಕ ಗೌರವ ಸಲ್ಲಿಸುತ್ತಿದೆ ಎಂದರು. ಯಾವುದೇ ಅಂಚೆ ಪರಿಕರಗಳ ಮೇಲೆ ಉಚಿತವಾಗಿ ಈ ಪರ್ಮನೆಂಟ್ ಪಿಕ್ಟೋರಿಯಲ್ ಕ್ಯಾನ್ಸಲೇಷನ್ ಬಳಸಬಹುದಾಗಿದ್ದು ಜನ ಸಾಮಾನ್ಯರು, ಕಾರಂತರ ಅಭಿಮಾನಿಗಳು ಹಾಗೂ ಅಂಚೆ ಸಂಗ್ರಹಣಾಕಾರರು ಹೆಚ್ಚಿನ ಸಂಖ್ಯೆ ಯಲ್ಲಿ ಇದನ್ನು ಕವರ್, ಕಾರ್ಡ್, ಇನ್ ಲ್ಯಾಂಡ್ ಲೆಟರ್ ಹೀಗೆ ಎಲ್ಲಾ ಅಂಚೆ ಪರಿಕರಗಳ ಮೇಲೆ ಮುದ್ರಿಸಿಕೊಂಡು ಅವರ ಹೆಸರು ಹಾಗೂ ಕೋಟ ಊರಿನ ಹೆಸರನ್ನು ಇನ್ನಷ್ಟು ಪ್ರಚುರ ಪಡಿಸಬಹುದು ಎಂದರು. ಹಿರಿಯ ಅಂಚೆ ಚೀಟಿ ಸಂಗ್ರಾಹಕ ಎಮ್ ಕೃಷ್ಣಯ್ಯ ಹಾಗೂ ಕೋಟ ಅಂಚೆ ಕಚೇರಿಯ ಉಪ ಅಂಚೆ ಪಾಲಕ ಜಯಪ್ರಕಾಶ್ ಶುಭ ಹಾರೈಸಿದರು. ಮಹೇಶ್ ಪ್ರಾರ್ಥಿಸಿದರು. ಉಡುಪಿ ಅಂಚೆ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ದಯಾನಂದ ದೇವಾಡಿಗ ಸ್ವಾಗತಿಸಿ ಉಪ ಅಂಚೆ ನಿರೀಕ್ಷಕ ಶಂಕರ್ ಲಮಣಿ ಧನ್ಯವಾದವಿತ್ತರು. ಉಡುಪಿ ಪ್ರಧಾನ ಅಂಚೆ ಕಚೇರಿಯ ಪೂರ್ಣಿಮಾ ಜನಾರ್ದನ್ ನಿರೂಪಿಸಿ, ಉಡುಪಿ ಅಂಚೆ ವಿಭಾಗೀಯ ಕಚೇರಿಯ ಪ್ರಜ್ವಲ್ ಸಹಕರಿಸಿದರು.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!