BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಅಂತರಾಷ್ಟ್ರೀಯ

ಸಿಂಗಾಪುರ ಡೈರಿ ~ಉಮೇಶ ಕುಳಿಯಾಡಿ

ಮೇ ಮೊದಲ ವಾರ ಸಿಂಗಾಪುರ ಪ್ರವಾಸದಲ್ಲಿದ್ದೆ ಕಾಕತಾಳೀಯ ಎಂಬಂತೆ ಇದು ಸಾರ್ವತ್ರಿಕ ಚುನಾವಣೆ ಸಮಯ. ಮೇ ೩ ರಂದು ನೆಡೆದ ಚುನಾವಣೆಯಲ್ಲಿ ಆಡಳಿತಾರೂಢ ಪೀಪಲ್ ಆಕ್ಷನ್ ಪಾರ್ಟಿ ನಿರಂತರ ೧೬ ನೇ ಬಾರಿ ಜಯಭೇರಿ ಬಾರಿಸಿದೆ. 

ಒಟ್ಟು ೯೭ ಸಂಸತ್ ಕ್ಷೇತ್ರ ಗಳಿಗೆ ನೆಡೆದ ಈ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ಲೌರೆನ್ಸ್ ವಾಂಗ್ ನೇತೃತ್ವದಲ್ಲಿ ನೆಡೆದ ಆಡಳಿತಾರೂಢ ಪಕ್ಷ ಒಟ್ಟು ೮೭ ಕ್ಷೇತ್ರ ವನ್ನು ಗೆಲ್ಲುವ ಮೂಲಕ ಈ ಐತಿಹಾಸಿಕ ಸಾಧನೆ ಮಾಡಿದೆ.೨೬ ಲಕ್ಷ ಅರ್ಹ ಮತದಾರರಿದ್ದು ಶೇಖಡಾ ೯೨ ಪ್ರತಿಶತ ಮತದಾನ ವಾಗಿದ್ದುPAP ಪಾರ್ಟಿ ೬೫ % ಮತ ಪಡೆದಿದ್ದು ಕಳೆದ ಬಾರಿಗಿಂತ 3% ಹೆಚ್ಚುpapular ಮತ ವನ್ನು ಪಡೆದಿದೆ . ಇನ್ನು ವಿರೋಧ ಪಕ್ಷವಾದ ವರ್ಕರ್ಸ್ ಪಾರ್ಟಿ ಕೇವಲ ೧೦ ಕ್ಷೇತ್ರಕ್ಕೆ ತೃಪ್ತಿ ಪಡಬೇಕಾಯಿತು. ಕೇವಲ ಒಂದು ವರ್ಷದ ಹಿಂದಷ್ಟೇ ಲೀ ಲೂನ್ಗ್ ರಿಂದ ತೆರವಾಗಿದ್ದ ಪ್ರಧಾನಮಂತ್ರಿ ಸ್ಥಾನವನ್ನು ಅಮೇರಿಕಾ ದಲ್ಲಿ ಅರ್ಥಶಾತ್ತ್ರ ಪರಿಣಿತ ವಾಂಗ್ ವಹಿಸಿಕೊಂಡಿದ್ದರು. ಆರ್ಥಿಕ ಸ್ಥಿರತೆ, ಪರಿಣಾಮಕಾರಿ ಆಡಳಿತ ಹಾಗು ಜಾಗತಿಕ ಆರ್ಥಿಕ ಅನಿಶ್ಚಿತತೆ ಮುಂತಾದ ವಿಷಯಗಳ ಬಗ್ಗೆ ಪರಿಣಾಮಕಾರಿ ಯಾಗಿ ತಮ್ಮ ಯೋಜನೆಗಳನ್ನು ಜನರ ಮುಂದಿಟ್ಟು ಮತದಾರರ ಮನ ಗೆಲ್ಲಿವಲ್ಲಿ ಯಶಸ್ವಿಯಾದರು. 

ಇಲ್ಲಿ ಯಾವುದೇ ಅಭಿವೃದ್ಸಿ ಗೆ ಕೊರತೆಯೆಲ್ಲ. ಸುಸಜ್ಜಿತವಾದ ಮೆಟ್ರೋ (MRT -Mass Rapid Transit), ವಿಶಾಲವಾದ ರಸ್ತೆಗಳು. ಶಿಸ್ತುಬದ್ಧ ಹಾಗೆ ಸುಗಮ ವಾಹನ ಸಂಚಾರ ಯಾವುದೇ ಐರೋಪ್ಯ ರಾಷ್ಟ್ರ ಗಳನ್ನೂ ಮೀರಿಸುವ ಸಾಮರ್ಥ್ಯ ವನ್ನು ಹೊಂದಿದೆ . ಆದರೂ ಇಲ್ಲಿನ ರಾಜಕಾರಣಿಗಳು ಮತ್ತಷ್ಟು ಅಭಿವೃದ್ಧಿಯ ಶಿಖರಕ್ಕೆ ಸಿಂಗಾಪುರವನ್ನು ಕೊಂಡೊಯ್ಯುವ ತವಕದಲ್ಲಿದ್ದಾರೆ .

ಇನ್ನು ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಹೇಳುವುದಾದರೆ, ಈ ದೇಶ ಪ್ರವಾಸಿಗಳ ಸ್ವರ್ಗ. ನೋಡಲೇಬೇಕಾದ ಸ್ಥಳಗಳೆಂದರೆ, ಯೂನಿವರ್ಸಲ್ ಸ್ಟುಡಿಯೋ, ಸಂಟೋಸ ದ್ವೀಪ, ಗಾರ್ಡನ್ ಬೈ ದಿ ಬೇ, ರಾತ್ರಿ ಸಫಾರಿ, ಮೆರ್ಲಿಯೊನ್ ಪಾರ್ಕ್, ಲಿಟಲ್ ಇಂಡಿಯಾ ಹಾಗು ಚೈನಾ ಟೌನ್. 

ಯೂನಿವರ್ಸಲ್ ಸ್ಟುಡಿಯೋ ಒಂದು ಸುಂದರ ಅನುಭವ, ಇಲ್ಲಿ ಸಾಕಷ್ಟು ರೋಮಾಂಚನಕಾರಿ ರೈಡ್ ಗಳಿವೆ. ೮೫ ಸಿಂಗಾಪುರ್ ಡಾಲರ್ ಪ್ರವೇಶ ದರ ಇದ್ದು ಒಂದು ದಿನ ಪೂರ್ತಿ ಸುತ್ತಾಡಬಹುದು. ಸಂಟೋಸ ದ್ವೀಪ ದಲ್ಲಿ ಕೇಬಲ್ ಕಾರ್ ರೈಡ್ ಚನ್ನಾಗಿದೆ. ಗಾರ್ಡನ್ ಬೈ ದಿ ಬೇ ಇನ್ನೊಂದು ಸುಂದರ ಪ್ರದೇಶ. ಇಲ್ಲಿ ಫ್ಲವರ್ ಡೋಮ್, ಕ್ಲೌಡ್ ಫಾರೆಸ್ಚ್, SuperTree ಗ್ರೋವ್ ಹಾಗು ಲೈಟ್ ಶೋ ಇದೆ. 

ಹೆಸರೇ ಹೇಳುವಹಾಗೆ ಲಿಟಲ್ ಇಂಡಿಯಾ ಸಂಪೂರ್ಣ ಭಾರತೀಯ (ತಮಿಳು ) ವಾತಾವರಣ. ವೈವಿಧ್ಯಮಯ ಆಹಾರ, ದೇವಸ್ಥಾನಗಳು, ಶಾಪಿಂಗ್ ಗೆ ಇಲ್ಲಿ ಭೇಟಿ ಕೊಡಬಹುದು. 

ಸಿಂಗಪುರದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ತುಂಬಾ ಉತ್ತಮವಾಗಿದೆ. ಸಂಪೂರ್ಣ ನಗರ ಭೂಗತ ಮೆಟ್ರೋ ರೈಲ್ (MRT ) ಸಂಪರ್ಕವನ್ನು ಹೊಂದಿದೆ. ಪ್ರತಿ ಪ್ರೇಕ್ಷಣೀಯ ಸ್ಥಳವು ಮೆಟ್ರೋ ಸ್ಟೇಷನ್ ನಿಂದ ಕಾಲನೆಡಿಗೆ ದೂರದಲ್ಲಿದೆ. ಇಲ್ಲಿನ ಕ್ಯಾಬ್ ಪ್ರಯಾಣ ತುಂಬಾ ಧುಬಾರಿ. ಹಾಗಾಗಿ ಬೆಂಗಳೂರು ಮೆಟ್ರೋದಲ್ಲಿ ಓಡಾಡಿ ಅನುಭವ ಇರುವವರು MRT ಯನ್ನು ಸುಲಭವಾಗಿ ಉಪಯೋಗಿಸಬಹುದು. 

ಸಾಮಾನ್ಯವಾಗಿ ಸಿಂಗಾಪುರವು ವರ್ಷವಿಡೀ ಒಂದೇ ತರನಾದ ಉಷ್ಣ ವಾತಾವರಣವನ್ನು ಹೊಂದಿದ್ದು ತೇವಾಂಶ ಹೆಚ್ಚಿರುತ್ತದೆ. ವಾರಕ್ಕೆ ೧ ಅಥವಾ ೨ ಮಳೆಯಾಗುತಿರುತ್ತದೆ. ವರ್ಷದಾದ್ಯಂತ ತಾಪಮಾನವು ಸಾಕಷ್ಟು ಸ್ಥಿರವಾಗಿರುತ್ತದೆ.

ಬೆಂಗಳೂರಿನಿಂದ ೪ ಗಂಟೆ ಪ್ರಯಾಣ, ಸಿಂಗಪುರದ ಎಲ್ಲ ಸ್ಥಳಗಳನ್ನು ನೋಡಲು ಸುಮಾರು ೪ ರಿಂದ ೫ ದಿನಗಳು ಬೇಕಾಗುತ್ತದೆ. ಇದರೊಂದಿಗೆ ಕೌಲ ಲಂಪುರ್ (ಮಲೇಷ್ಯಾ ) ಜೋಡಿಸಿಕೊಂಡರೆ ಮರೆಯಲಾಗದ ಒಂದು ಅದ್ಬುತ ಪ್ರವಾಸದ ಅನುಭವ ಹೊಂದಬಹುದು. 

--- ಉಮೇಶ ಕುಳಿಯಾಡಿ


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!