Header Ads Widget

ಉಡುಪಿ: ಟ್ರಕ್ ನಿಂದ ಉರುಳಿದ ಟ್ಯಾಂಕ್; ರಸ್ತೆ ಸಂಚಾರ ಅಸ್ತವ್ಯಸ್ತ!

ಉಡುಪಿ: ಟ್ರಕ್ ನಿಂದ ಟ್ಯಾಂಕ್ ವೊಂದು ರಸ್ತೆಗೆ ಉರುಳಿದ ಘಟನೆ ಜೂ.5ರ ಗುರುವಾರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದ್ದು, ಇದರಿಂದಾಗಿ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಸಮಸ್ಯೆ ಉಂಟಾಯಿತು.

ಉಡುಪಿ ನಗರದಿಂದ ಹೊರಗಿರುವ ಕಿನ್ನಿಮೂಲ್ಕಿ ಜಂಕ್ಷನ್ ಸಮೀಪ ಈ ಘಟನೆ ಸಂಭವಿಸಿದೆ.

ಹೆದ್ದಾರಿ ಪಕ್ಕದಲ್ಲಿ ಹಾಕುವ ರಸ್ತೆ ಸೂಚನಾ ಫಲಕ ಅಡ್ಡ ಬಂದ ಕಾರಣ ಟ್ರಕ್ ಗೆ ಮುಂದೆ ಸಾಗಲು ಸಾಧ್ಯವಾಗಿರಲಿಲ್ಲ. ಎರಡು ದಿನ ಅಲ್ಲೇ ನಿಲ್ಲಿಸಿದ್ದ ಚಾಲಕ, ಟ್ರಕ್ ಅನ್ನು ರಿವರ್ಸ್ ತೆಗೆದು ಬೇರೆ ರಸ್ತೆಯಲ್ಲಿ ಹೋಗಲು ಪ್ರಯತ್ನ ಮಾಡಿದ್ದಾನೆ.

ಈ ಸಂದರ್ಭ ಭಾರಿ ಗಾತ್ರದ ಟ್ಯಾಂಕ್ ರಸ್ತೆಗೆ ಉರುಳಿದೆ. ಉಡುಪಿ ಟ್ರಾಫಿಕ್ ಪೊಲೀಸರು ಟ್ರಕ್ ಚಾಲಕನಿಗೆ ಕೂಡಲೇ ತೆರವು ಮಾಡುವಂತೆ ಸೂಚನೆ ನೀಡಿದ್ದಾರೆ. ಇದರಿಂದಾಗಿ ಕೆಲಹೊತ್ತು ಟ್ರಾಫಿಕ್ ಜಾಮ್ ಉಂಟಾಯಿತು.