BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಸುದ್ದಿ

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ.) ಪದ್ಮವಿಭೂಷಣ ಜಾರ್ಜ್ ಫರ್ನಾಂಡಿಸ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ-2025 ಪ್ರದಾನ ಸಮಾರಂಭ,


ಉಡುಪಿ​\ಮುಂಬಯಿ : ತುರ್ತು ಪರಿಸ್ಥಿತಿಯ ಸಮಯದಲ್ಲಿ ನಾನು ಹಲವಾರು ರಾಜ ಕಾರಣಿಗಳ ಪರವಾಗಿ ವಾದ ಮಾಡುತ್ತಿದ್ದು ಜಾರ್ಜ್ ಫರ್ನಾಂಡಿಸ್ ಅವರ ಪರಿಚಯ ನನಗಿತ್ತು. ತುರ್ತು ಪರಿಸ್ಥಿತಿ ಸಮಯದಲ್ಲಿ ನನಗೆ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದೆ. ಇಂದು ನನಗೆ ಜಾರ್ಜ್ ಫರ್ನಾಂಡಿಸ್ ಹೆಸರಲ್ಲಿ ನೀಡಿದ ಪ್ರಶಸ್ತಿ ಹೆಮ್ಮೆ ತಂದಿದೆ ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರು ಸ್ಥಾಪಿಸಿದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಈ ಜಿಲ್ಲೆಯಲ್ಲಿ ಬಹಳ ಅದ್ಭುತ ಕೆಲಸಗಳನ್ನು ಮಾಡುತಿದೆ ಎಂದು ಕರ್ನಾಟಕ ಸರಕಾರದ ಮಾಜಿ ಲೋಕಾಯುಕ್ತರೂ, ಭಾರತದ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾ ಧೀಶರೂ ಆದ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆಯವರು ನುಡಿದರು.
ಜೂ. 8 ರಂದು ಬೆಳಿಗ್ಗೆ ಉಡುಪಿಯ ಹೋಟೆಲ್ ಓಷಿಯನ್ ಪರ್ಲ್, ಟೈಮ್ಸ್ ಸ್ಕ್ವೇರ್ ಕಟ್ಟಡ, ಕಲ್ಸಂಕ, ಇಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ.) ಇದರ ವತಿಯಿಂದ ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಡಿ. ಕೋಟ್ಯಾನ್ ಇವರ ಅಧ್ಯಕ್ಷತೆ ಯಲ್ಲಿ ನಡೆದ ಪದ್ಮವಿಭೂಷಣ ಜಾರ್ಜ್ ಫರ್ನಾಂಡಿಸ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ- 2025 ಪ್ರಶಸ್ತ್ಗಿ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ಸಮಿತಿಯು ಎರಡು ಜಿಲ್ಲೆಗಳ ಅಭಿವೃದ್ಧಿಗಳ ಬಗ್ಗೆ ಮಾಡುತ್ತಿರುವ ಕೆಲಸದ ಬಗ್ಗೆ ನನಗಿಂತಲೂ ನಿಮ್ಮೆಲ್ಲರಿಗೆ ಹೆಚ್ಚಿನ ಮಾಹಿತಿ ಇದೆ. ಸಮಿತಿಗೆ ನನ್ನ ಅಭಿನಂದ ನೆಗಳು. 


ಕರ್ನಾಟಕದ ಲೋಕಾಯುಕ್ತ ಬಂದ ನಂತರ ನನಗೆ ಅನಿಸಿತು, ಅಷ್ಟರ ತನಕ ನಾನು ಕೂಪ ಮಂಡೂಕನಂದಿದ್ದೆ. ನಾನು ಸುಖವಾಗಿದ್ದು ಬಹಳಷ್ಟು ಜನರು ಸುಖವಾಗಿದ್ದಾರೆ ಎಂದು ಎಣಿಸಿಕೊಂಡಿದೆ. ಲೋಕಾಯುಕ್ತ ಬಂದ ನಂತರ ಬಹಳಷ್ಟು ಅನ್ಯಾಯವನ್ನು ಕಂಡೆ. ಶಾಸಕಾಂಗ, ಕಾರ್ಯಾಂಗ ಯಾ ನ್ಯಾಯಾಂಗ ಯವುದೇ ಇರಬಹುದು. ಇದು ವ್ಯಕ್ತಿಗಳ ತಪ್ಪಲ್ಲ, ಇದು ಸಮಾಜದ ತಪ್ಪು. ಇವತ್ತು ಅಂತಹ ಸಮಾಜ ಬದಲಾಗಿದೆ. ಇವತ್ತು ಜೈಲಿಗೆ ಹೋಗಿ ಬಿಡುಗಡೆಯಾಗಿ ಬಂದಂತ ವ್ಯಕ್ತಿಗಳನ್ನು ಹೂ ಹಾರ ಹಾಕಿ ಬರ ಮಾಡಿ ಕೊಳ್ಳುತ್ತಿ ದ್ದಾರೆ. 


ಇವತ್ತು ಸಮಾಜದಲ್ಲಿ ಒಳ್ಳೆಯವರಿಗೆ ಜಾಗ ಸಿಗುತ್ತಿಲ್ಲ ಇದಕ್ಕೆ ದುರಾಸೆ ಕಾರಣ ವಾಗಿದೆ ದುರಾಶೆಗೆ ತೃಪ್ತಿಯೇ ಮದ್ದು. ತೃಪ್ತಿ ಇದ್ದರೆ ದುರಾಸೆ ಬರಲಿಕ್ಕಿಲ್ಲ. ಕಾನೂ ನಿನ ಚೌಕಟ್ಟಿನಲ್ಲಿ ಸಂಪಾದಿಸೋಣ. ಆದರೆ ಇನ್ನೊಬ್ಬನ ಜೇಬಿಗೆ ಕೈ ಹಾಕಿ ಅಲ್ಲ. ಕಾನೂನು ಚೌಕ್ಕಟ್ಟಿನಲ್ಲಿ ಮಾಡಿದ ಸಂಪಾದನೆಯಿಂದ ತೃಪ್ತಿಗೊಳ್ಳಲು ಸಾಧ್ಯ.


ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಯವರು ದಿಕ್ಸೂಚಿ ಭಾಷಣ ಮಾಡಿದರು. ಸಮಿತಿಯ ಜಿಲ್ಲಾ ಕಾರ್ಯಾಧ್ಯಕ್ಷರಾದ ಹರೀಶ್ ಕುಮಾರ್ ಎಂ. ಶೆಟ್ಟಿ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು.


ಸಮಿತಿಯ ಸಲಹೆಗಾರರೂ ಆದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಪದ್ಮವಿಭೂಷಣ ದಿ. ಜಾರ್ಜ್ ಫರ್ನಾಂಡಿಸ್ ಮಾತನಾಡುತ್ತಾ ಜಾರ್ಜ್ ಫರ್ನಾಂಡಿಸ್ ಓರ್ವ ಪ್ರಾಮಾಣಿಕ ಭಾರತೀಯನಾಗಿ ಜಾತಿ ಮತ ಬೇದವಿಲ್ಲದ ಸಮಾಜದ ಬಗ್ಗೆ ಅಪಾರವಾದ ಕಾಳಜಿ ಯಿಟ್ಟು ಕೊಂಡವರು. ಇಂತಹ ಮಹಾನ್ ವ್ಯಕ್ತಿಯ ಸ್ಮರಣಾರ್ಥ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯು ಇಂದು ಸರಿಯಾದ ವ್ಯಕ್ತಿಗೆ ಪ್ರಶಸ್ತಿಯನ್ನು ನೀಡುತ್ತಿರುವುದು ಅಭಿನಂದ ನೀಯ ಎಂದರು.


ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಅಧ್ಯಕ್ಷ ಕಿಶೋರ್ ಆಳ್ವ ಮಾತನಾಡುತ್ತಾ ಹಿರಿಯರ ಹೆಜ್ಜೆಯ ಗುರುತುಗಳನ್ನು ಅನುಸರಿಸಬೇಕಂತ ಹೇಳುತ್ತಾರೆ, ಸಮಾಜಕ್ಕಾಗಿ ಬದುಕಿದ ಜಾರ್ಜ್ ಫರ್ನಾಂಡಿಸ್ ರವರಂತ ವರ ಹೆಜ್ಜೆಯ ಗುರುತನ್ನು ಅನುಸರಿಸುವಂತ ಕಾರ್ಯ ನಡೆದಿದ್ದರೆ ಅದು ಮುಂಬಯಿಯ ನಮ್ಮ ಬಂದುಗಳಿಂದ, ಯಾಕೆಂದರೆ ಮುಂಬಯಿಗರಾದ ನಿಮಗೆ ಈ ಮಣ್ಣಿನ ಬಗ್ಗೆ ಒಂದು ಅವಿನಾಭಾವ ಸಂಬಂಧವಿದೆ. 

ಇಲ್ಲಿನ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಇಂತಹ ಎಲ್ಲಾ ಕಾರ್ಯಕ್ರಮಗಳಿಗೆ ಮುಂಬ ಯಿಗರ ಕೊಡುಗೆ ಬಹಳಷ್ಟಿದೆ. ಕಳೆದ 25 ವರ್ಷಗಳಿಂದ ಕ್ರೀಯಾಶೀಲವಾಗಿರುವ ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಇದೀಗ ಜಾರ್ಜ್ ಫರ್ನಾಂಡಿಸ್ ರವರ ಹೆಸರಲ್ಲಿ ನ್ಯಾಯ ಮೂರ್ತಿ ಎನ್. ಸಂತೋಷ್ ಹೆಗ್ಡೆಯವರಿಗೆ ಪ್ರಶಸ್ತಿಯನ್ನು ಪ್ರದಾನಿಸಿತಿದ್ದು ಸಮಿತಿಯು ಸಮಾಜದ ಮನಸ್ಸನ್ನು ಜೋಡಿಸುವ ಕೆಲಸವನ್ನು ಮಾಡುತ್ತಿದ್ದು ನಾವೆಲ್ಲರೂ ಅವರೊಂ ದಿಗೆ ಕೈಜೋಡಿಸುವ ಎಂದರು.


ವೇದಿಕೆಯಲ್ಲಿ ಗೌರವ ಅತಿಥಿ, ಕರ್ನಾಟಕದ ಎಂ.ಎಲ್.ಸಿ. ಐವನ್ ಡಿ’ಸೋಜಾ,​ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಸಮಿತಿಯ ಗೌರವ ಕೋಶಾಧಿಕಾರಿ​ ಸಮಿತಿಯ ವಕ್ತಾರ ದಯಾಸಾಗರ ಚೌಟ ಸಭಾ ಕಾರ್ಯಕ್ರಮವನ್ನು ನಿರ್ವ ಹಿಸಿದರು.



ಸಮಿತಿಯ ಸಲಹೆಗಾರರಾದ ಬಿ. ರಮಾನಂದ ರಾವ್ ಮತ್ತು ಲಕ್ಷ್ಮಣ್ ಪೂಜಾರಿ, ಸಮಿತಿಯ ಉಪಾಧ್ಯಕ್ಷರುಗಳಾದ ಪಿ. ಧನಂಜಯ ಶೆಟ್ಟಿ, ಡಾ. ಸುರೇಂದ್ರಕುಮಾರ್ ಹೆಗ್ಡೆ, ನ್ಯಾ. ಆರ್. ಎಂ. ಭಂಡಾರಿ, ಶ್ರೀನಿವಾಸ್ ಸಾಪಲ್ಯ, ತೋನ್ಸೆ ಡಾ. ವಿಜಯಕುಮಾರ್ ಶೆಟ್ಟಿ, ಶ್ಯಾಮ್ ಎನ್. ಶೆಟ್ಟಿ, ಗಿರೀಶ್ ಬಿ. ಸಾಲ್ಯಾನ್, ಗೌರವ ಕಾರ್ಯದರ್ಶಿಗಳಾದ ದೇವದಾಸ್ ಕುಲಾಲ್, ಸಿಎಸ್ ಗಣೇಶ್ ಶೆಟ್ಟಿ, ಗೌರವ ಜೊತೆ ಕಾರ್ಯದರ್ಶಿ ರಾಕೇಶ್ ಭಂಡಾರಿ ಮತ್ತು ಮಹೇಶ್ ಕಾರ್ಕಳ, ಮಾಜಿ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ, ಸದಸ್ಯರುಗಳಾದ ರವಿ ದೇವಾಡಿಗ, ವಾಸು ದೇವಾಡಿಗ, ತೋನ್ಸೆ ಅಶೋಕ್ ಎಸ್. ಶೆಟ್ಟಿ, ತುಳಸಿದಾಸ್ ಎಲ್. ಅಮೀನ್, ನ್ಯಾ. ದಯಾನಂದ ಶೆಟ್ಟಿ, ಕರುಣಾಕರ ಹೆಜ್ಮಾಡಿ, ಚಿತ್ರಾಪು ಕೆ.ಎಂ. ಕೋಟ್ಯಾನ್, ರಾಮಣ್ಣ ದೇವಾಡಿಗ, ಜಿಲ್ಲಾ ಗೌರವ ಕಾರ್ಯದರ್ಶಿ ಸುರೇಂದ್ರ ಮೆಂಡನ್, ದಿವಾಕರ್ ಪೊಸ್ರಾಲ್, ರವಿ ಮೆಂಡನ್, ಶೇಖರ ಗುಜ್ಜರಬೆಟ್ಟು, ಪ್ರತಾಪ್ ಕೋಟ್ಯಾನ್, ರವಿರಾಜ್ ಕಲ್ಯಾಣ್ಪುರ್, ಅರ್. ಎಚ್. ಶೆಟ್ಟಿಗಾರ್, ನಿರಂಜನ್ ಕರ್ಕೇರ, ನಾಗೇಶ್ ಶೆಟ್ಟಿ, ಜಯಪ್ರಕಾಶ್ ಹೆಗ್ಡೆ, ನ್ಯಾ. ಗುಣಾಕರ್ ಶೆಟ್ಟಿ


ಜಿಲ್ಲಾ ಕೋಶಾಧಿಕಾರಿ ಪ್ರಭಾಕರ ಬಂಗೇರ ಕಾರ್ಕಳ, ಭಾರತ್ ಬ್ಯಾಂಕಿನ ನಿರ್ದೇಶಕ ಭಾಸ್ಕರ ಸಾಲ್ಯಾನ್, ನಿರಂಜನ್ ಎಲ್ ಪೂಜಾರಿ, ಪೆಲಿಕ್ಸ್ ಡಿ’ಸೋಜಾ ಹಾಗೂ ಸಮಿತಿಯ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.​ ಭಾರತ್ ಬ್ಯಾಂಕಿನ ನಿರ್ದೇಶಕ ಭಾಸ್ಕರ ಸಾಲ್ಯಾನ್ ನಿರಂಜನ್ ಎಲ್ ಪೂಜಾರಿ ಪೆಲಿಕ್ಸ್ ಡಿ’ಸೋಜಾ​ ಜಿಲ್ಲಾ ಗೌರವ ಕಾರ್ಯದರ್ಶಿ ಜಿ. ಟಿ. ಆಚಾರ್ಯ ವಂದನಾರ್ಪಣೆ ಮಾಡಿದರು.


ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರು ಮಾತನಾಡುತ್ತಾ ಇಂದು ಪ್ರಶಸ್ತಿ ಸ್ವೀಕರಿಸುತ್ತಿರುವ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆಯವರು ಪದ್ಮವಿಭೂಷಣ ಜಾರ್ಜ್ ಫರ್ನಾಂಡಿಸ್ ರವರಂತೆ ನೇರ ನೇರನುಡಿಯ ವ್ಯಕ್ತಿತ್ವವನ್ನು ಹೊಂದಿದವರು ಎನ್. ಸಂತೋಷ್ ಹೆಗ್ಡೆಯ ವರಿಗೆ ಈ ಪ್ರಶಸ್ತಿ ನೀಡಿದ್ದರಿಂದ ದಿ. ಜಾರ್ಜ್ ಫರ್ನಾಂಡಿಸ್ ರವರ ಆತ್ಮಕ್ಕೆ ತೃಪ್ತಿ ಸಿಕ್ಕಿ ದಂತಾಗುವುದು. 


ನಮ್ಮ ಸಮಿತಿಯು ಪರಿಸರವನ್ನು ರಕ್ಷಿಸುದರೊಂದಿಗೆ ಅಭಿವೃದ್ಧಿಗೆ ಬೆಂಬಲಿಸುತ್ತಿದೆ. ವಿದ್ಯುತ್ ಸರಬರಾಜು ಸೇರಿ ನಮ್ಮ ಕರಾವಳಿ ಜಿಲ್ಲೆಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಜಿಲ್ಲೆಗಳ ಅಭಿವೃದ್ಧಿಗೆ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೈಗಾರಿ ಕೊದ್ಯಮಗಳ ಸ್ತಾಪನೆಯ ಅಗತ್ಯವಿದೆ. ಅದಕ್ಕೆ ಜಿಲ್ಲೆಗಳಲ್ಲಿ ಶಾಂತಿ ಹಾಗೂ ನೆಮ್ಮದಿಯ ವಾತಾವರಣದ ಅಗತ್ಯವೂ ಇದೆ


ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೈಗಾರಿಕೋದ್ಯಮಗಳು ಸ್ಥಾಪನೆಯಾಗಲು, ಎಲ್ಲರೂ ಪ್ತೋತ್ಸಾಹಿಸಿದಲ್ಲಿ ಅದಕ್ಕೆ ಸಮಿತಿಯ ಬೆಂಬಲವು ಸದಾ ಇದೆ. ಕರಾವಳಿ ಜಿಲ್ಲೆಗಳ ಸಮಸ್ಯೆಗಳನ್ನು ಬಗೆಹರಿಸಲು ನಾವು ರಾಜ್ಯ ಹಾಗೂ ಕೇಂದ್ರದ ಅನೇಕ ರಾಜಕೀಯ ಗಣ್ಯ ರನ್ನು ಈಗಾಗಲೇ ಸಂಪರ್ಕಿಸಿದ್ದು ಅದಕ್ಕೆ ಉತ್ತಮ ಪ್ರತಿಕ್ರಿಯೆಯು ದೊರಕಿದೆ ಎನ್ನುತ್ತಾ ಸಮಿತಿಯು ಸ್ಥಾಪನೆಯಾದ ಉದ್ದೇಶ, ಸಮಿತಿಯ ಸಾಧನೆ ಹಾಗೂ ಮುಂದಿನ ಯೋಜನೆ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು.


ಸಮಿತಿಯ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ನಂತರ ಇಂದು ಪ್ರಥಮವಾಗಿ ಬಹಳ ಮಹತ್ವದ ಕಾರ್ಯಕ್ರಮವು ಬೆಳ್ಳಿ ಹಬ್ಬವನ್ನು ಆಚರಿಸುವ ನಮ್ಮ ಸಮಿತಿಯಿಂದ ನಡೆಯುತ್ತಿರುವುದು ನನ್ನ ಸೌಭಾಗ್ಯ. ರಾಜಕೀಯದಲ್ಲಿ ಸಮಾಜ ಸೇವೆಯಲ್ಲಿ ಅತ್ಯಂತ ಉನ್ನತ ಮಟ್ಟಕ್ಕೇರಿದ ಜಾರ್ಜ್ ಫರ್ನಾಂಡಿಸ್ ಅವರ ಹೆಸರಲ್ಲಿ ಪ್ರಾಮಾಣಿಕತೆ, ಸಮಾನತೆ ಮತ್ತು ಸೇವಾ ಸಮರ್ಪಣೆಗೆ ಹೆಸರಾದಂತಹ ಶಿಸ್ತಿನ ಸಿಪಾಯಿ, ಖ್ಯಾತ ನ್ಯಾಯಾಧೀಶ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆಯವರು ಪ್ರಶಸ್ತ್ಗಿಯನ್ನು ಸ್ವೀಕರಿಸಿದ್ದು ನಮಗೂ ಗೌರವದ ಸಂಗತಿಯಾಗಿದೆ. 


ಎಲ್ಲಾ ಸಮುದಾಯವನ್ನು ಒಂದುಗೂಡಿಸಿ ಪ್ರಾಮಾಣಿಕವಾಗಿ ಜಿಲ್ಲೆಗಳ ಅಭಿವೃದ್ಧಿಗೆ ದುಡಿಯುತ್ತಿರುವ ನಮ್ಮ ಸಂಸ್ಥೆಯನ್ನು ಸ್ಥಾಪಿಸಿದ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವ ನೇತೃತ್ವದಲ್ಲಿ ಜಾರ್ಜ್ ಫರ್ನಾಂಡಿಸ್ ನಿಧನ ನಂತರ ಅವರ ಸ್ಮಾರಕ ರಾಷ್ಟೀಯ ಪ್ರಶಸ್ತ್ಗಿಯನ್ನು ನಾವು ನೀಡುತ್ತಾ ಬಂದಿದ್ದೇವೆ. ಜಿಲ್ಲೆಗಳ ಅಭಿವೃದ್ಧಿಗಾಗಿ ಹೋರಾಟ ನಡೆಸುತ್ತಾ ಬಂದಿರುವ 25ನೇ ವರ್ಷದಲ್ಲಿರುವ ನಮ್ಮ ಸಮಿತಿಗೆ ಹಿಂದಿನಂತೆ ಮುಂದೆಯೂ ನೀವೆಲ್ಲರೂ ಸಹಕರಿಸಿ ಸಮಿತಿಯ ಬೆಳ್ಳಿ ಹಬ್ಬ ಸಮಾರಂಭವನ್ನು ಅದ್ದೂರಿಯಾಗಿ ನಡೆಸಲು ಹಾಗೂ ಮುಂದಿನ ನಮ್ಮ ಎಲ್ಲಾ ಯೊಜನೆಗಳಿಗೆ ನಮ್ಮೊಂದಿಗೆ ಜಿಲ್ಲಾ ಸಮಿತಿಯ ಎಲ್ಲರೂ ಹಿಂದಿನಂತೆ ಪ್ರೋತ್ಸಾಹಿ ಸ ಬೇಕಾಗಿ ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರು ವಿನಂತಿಸಿದ್ದಾರೆ.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!