BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಕರಾವಳಿ

ಅಂಬುಲೆನ್ಸ್‌ ಕೊಠಡಿ, ಆಕ್ಸಿಜನ್ ಕಾನ್ಸೆoಟ್ರೇಟರ್ ಹಸ್ತಾಂತರ ಸಮಾರಂಭ

 

ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಮತ್ತು ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಇದರ ಆಶ್ರಯದಲ್ಲಿ ಜನೌಷಧಿ ಕೇಂದ್ರದ ಬಳಿ ನೂತನವಾಗಿ ನಿಮಿ೯ಸಿರುವ ಅಂಬುಲೆನ್ಸ್‌ ಕೊಠಡಿ ಮತ್ತು 4 ಆಕ್ಸಿಜನ್ ಕಾನ್ಸೆoಟ್ರೇಟರ್ ಹಸ್ತಾಂತರ ಸಮಾರಂಭ ಮೇ.31 ರಂದು ಶನಿವಾರ ಸಿಟಿ ಸೆಂಟರ್ ಬ್ರಹ್ಮಾವರದಲ್ಲಿ ನಡೆಯಿತು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ, ನಮ್ಮೊಳಗಿನ ನಮ್ಮತನ ಕಳೆದುಕೊಳ್ಳದೆ ಸದಾ ಕಾಲ ಜನಪಯೋಗಿಯಾಗಿ ಬದುಕು ಸಾಗಿಸಿದರೆ ನಮ್ಮ ಜೀವನ ಸಾಥ೯ಕವಾಗಲು ಸಾಧ್ಯ. ಶಾಲೆಯಲ್ಲಿ ಶಿಕ್ಷಣ ನೀಡಿದರೆ, ಮನೆಯಲ್ಲಿ ಸಂಸ್ಕಾರ ನೀಡುವ ಕಾಯ೯ ನಡೆಯಬೇಕು ನಮ್ಮ ವಾತಾವರಣ ತಿಳಿಮಾಡುವ ಕೆಲಸ ನಿತ್ಯ ನಿರಂತವಾಗಿರಬೇಕು ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ , ಜಯಂಟ್ಸ್ ಸಂಸ್ಥೆಯು ಪರಿಸರದ ಜನರಿಗೆ ಅನೇಕ ಜನೋಪಯೋಗಿ ಕಾಯ೯ಕ್ರಮವನ್ನು ನಡೆಸುತ್ತಿರುವುದು ಅಭಿನಂದನೀಯ ಎಂದರು.

ಜಯಂಟ್ಸ್ ಕೇಂದ್ರ ಸಮಿತಿ ಸದಸ್ಯ ದಿನಕರ ಅಮೀನ್, ಸ್ವಚ್ಚ ಭಾರತ ಮತ್ತು ವನಮಹೋತ್ಸವ ಕಾಯ೯ಕ್ರಮಗಳು ರಾಷ್ಟ್ರಮಟ್ಟದ ಕಾಯ೯ಕ್ರಮಗಳಾಗಿದ್ದು, ಅದನ್ನು ಮುಂದಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ಮಾಡಲಾಗುವುದು ಎಂದರು.

ಜಯಂಟ್ಸ್ ಫೆಡರೇಶನ್ ಅಧ್ಯಕ್ಷ ತೇಜೇಶ್ವರ್ ರಾವ್, ತಾ.ಪಂ ಇಒ ಹೆಚ್.ವಿ ಇಬ್ರಾಹಿಂಪುರ ಶುಭ ಹಾರೈಸಿದರು.

ಈ ಸಂದಭ೯ದಲ್ಲಿ ಅಮೇರಿಕ ಅನಿವಾಸಿ ಭಾರತೀಯ ಹಲವಾರು ಸಂಸ್ಥೆಗಳಿಗೆ ದಾನ ನೀಡಿದ ಡಾ.ಜೀವನ್ ಪ್ರಕಾಶಿನಿ ಮೂತಿ೯ ಮತ್ತು ಎನ್.ಸಿ ಮೂತಿ೯ ದಂಪತಿಗಳನ್ನು ಸನ್ಮಾನಿಸಲಾಯಿತು.ಈ ಸಂದಭ೯ದಲ್ಲಿ ಅವರು ಸಂಸ್ಥೆಯ ಕಾಯ೯ ವೈಖರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಯ೯ಕ್ರಮದ ಅಧ್ಯಕ್ಷತೆಯನ್ನು ಜಯಂಟ್ಸ್ ಗ್ರೂಪ್ ಅಧ್ಯಕ್ಷ ಅಣ್ಣಯ್ಯ ದಾಸ್ ವಹಿಸಿ ಅತಿಥಿಗಳನ್ನು ಸ್ವಾಗತಿಸಿದರು.

ವಾರಂಬಳ್ಳಿ ಗ್ರಾ.ಪಂ ಅಧ್ಯಕ್ಷ ನಿತ್ಯಾನಂದ ಬಿ.ಆರ್ ರವರನ್ನು ಗೌರವಿಸಲಾಯಿತು. ನಾಯ್ಕನಕಟ್ಟೆ ಶಾಲೆಗೆ ನೋಟ್ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು.

ವೇದಿಕೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿ ಮಹೇಶ್ ಐತಾಳ, ವಿವೇಕಾನಂದ ಕಾಮತ್ , ನಿಕಟಪೂವ೯ ಅಧ್ಯಕ್ಷ ಸುಂದರ ಪೂಜಾರಿ ಮೂಡುಕುಕ್ಕುಡೆ ಮುಂತಾದವರಿದ್ದರು.ಕಾಯ೯ದಶಿ೯ ಮಿಲ್ಟನ್ ಒಲಿವರ್ ವರದಿ ವಾಚಿಸಿದರು. ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು ಪ್ರಸ್ತಾವನೆಗೈದು, ಅತಿಥಿಗಳಿಗೆ ಸಿoದೂರ ವಿಶೇಷ ಗಿಡವನ್ನು ನೀಡಿ ಗೌರವಿಸಿದರು.ದಿವ್ಯಪೂಜಾರಿ, ಶ್ರೀನಾಥ ಕೋಟ, ಪ್ರಸನ್ನ ಕಾರಂತ, ರೊನಾಲ್ಡ್ ಡಯಾಸ್ ಪರಿಚಯಿಸಿದರು. ರಾಘವೇಂದ್ರ ಪ್ರಭು ಕವಾ೯ಲು ನಿರೂಪಿಸಿ, ವಂದಿಸಿದರು.ಈ ಸಂದಭ೯ದಲ್ಲಿ ಜನೌಷಧಿ ಸಿಬ್ಬಂದಿಗಳು ಮತ್ತು ಜಯಂಟ್ಸ್ ಹಿರಿಯ ಸದಸ್ಯರನ್ನು ಗೌರವಿಸಲಾಯಿತು.

ಜಯಂಟ್ಸ್ ನಿರ್ದೇಶಕರಾದ ಪ್ರದೀಪ್ ಶೆಟ್ಟಿ ಪ್ರತಿಮಾ ಡೋರಿಸ್ ಸಹಕರಿಸಿದರು.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!