BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಸುದ್ದಿ

ವಿದ್ಯಾರ್ಥಿಗಳು ಆದರ್ಶ ವ್ಯಕ್ತಿತ್ವ ಹೊಂದಲು ಬೇಕು ಶಿಸ್ತು, ನಾಯಕತ್ವ ಗುಣ, ಸೇವಾಮನೋಭಾವ: ಹರೀಶ್ ಶೇರಿಗಾರ್

ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಪಾತ್ರವು ಮುಖ್ಯ. ಉತ್ತಮ ಶಿಸ್ತು, ನಾಯಕತ್ವ ಗುಣ, ಸೇವಾಮನೋಭಾವ ಸಹಿತ ಆದರ್ಶ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಸಾಧ್ಯ ಎಂದು ಕೇಂದ್ರಸಂಘ ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಮಂಗಳೂರು ಇದರ ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರಾದ   ಶ್ರೀಯುತ ಹರೀಶ್ ಶೇರಿಗಾರ್ ಉದ್ಯಮಿ ದುಬೈ ಇವರು ಹೇಳಿದರು. ಹಿರಿಯಡ್ಕ ದೇವಾಡಿಗ ಉಪಸಂಘದಲ್ಲಿ ನಡೆದ ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ, ವಿದ್ಯಾರ್ಥಿ ವೇತನ, ಸನ್ಮಾನ ಹಾಗೂ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿವಿದ್ಯಾರ್ಥಿಗಳನ್ನು ಉದ್ದೇಶಿಸಿ ಈ ಮಾತನ್ನಾಡಿದರು.


ಕೇಂದ್ರಸಂಘದ ಅಧ್ಯಕ್ಷ ಶ್ರೀಯುತ ಅಶೋಕ್ ಮೊಯ್ಲಿ ಇವರು ಉದ್ಘಾಟಿಸಿದ ಈ ಕಾರ್ಯಕ್ರಮದ ಮಹಾಪೋಷಕರಾಗಿ ಶ್ರೀಯುತ ಶ್ರೀಧರ ದೇವಾಡಿಗ ಉಪಸ್ಥಿತರಿದ್ದರು, ಉಪ ಸಂಘದ ಅಧ್ಯಕ್ಷ ರಾಜೇಂದ್ರ ಕುಮಾರ್ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.
ಡಾ. ಮಾಧವಿ ಎಸ್ ಭಂಡಾರಿ ಡಾ. ಪ್ರವೀಣ್ ಕುಮಾರ್, ಶ್ರೀ ಆಲೂರು ರಘುರಾಮ್ ದೇವಾಡಿಗ, ಶ್ರೀ ಅಶೋಕ್ ಶೇರಿಗಾರ್ ಹಿರಿಯಡ್ಕ, ಶ್ರೀ ಪ್ರಭಾಕರ್ ದೇವಾಡಿಗ, ಶ್ರೀ ಮೋಹನ್ ದಾಸ್ ಇವರುಗಳಿಗೆ ವಿವಿದ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.


ಈ ಶಾಲಿನ ಅತಿಹೆಚ್ಚು ಅಂಕ ಗಳಿಸಿದ ಕೆ ಶ್ರೀನಿತ್ ಎಸ್ ಶೇರಿಗಾರ್ ಇವರಿಗೆ ಸನ್ಮಾನಿಸಿ ವಿದ್ಯಾರ್ಥಿ ವೇತನ ನೀಡಲಾಯಿತು. ಒಟ್ಟು 1 ಲಕ್ಷ 3 ಸಾವಿರ ಮೊತ್ತದ ಪುಸ್ತಕ ಹಾಗು ಸುಮಾರು 42000 ರೂ ವಿದ್ಯಾರ್ಥಿವೇತನ ವಿತರಿಸಲಾಯಿತು. ಕುಮಾರಿ ಯಶಸ್ವಿನಿ ಹಿರಿಯಡ್ಕ ಇವರಿಂದ ಭರತನಾಟ್ಯ ಕಾರ್ಯಕ್ರಮವು ನಡೆಯಿತು. ಕೇಂದ್ರಸಂಘದಿಂದ ಕಾರ್ಯಕ್ರಮದಲ್ಲಿ ಶ್ರೀಯುತ ಕರುಣಾಕರ್ M H, ಶ್ರೀಮತಿ ವೀಣಾ ಗಣೇಶ್, ಶ್ರೀಮತಿ ಗೀತಾ ಕಲ್ಯಾಣಪುರ, ಶ್ರೀಯುತ ಬಾಬು ದೇವಾಡಿಗ, ಶ್ರೀಯುತ ಸುಧಾಕರ್ ಕುಮಾರ್ ದೇವಾಡಿಗ, ಶ್ರೀಯುತ ಸದಾನಂದ ಶೇರಿಗಾರ್ ಉಪಸ್ಥಿತರಿದ್ದರು.  


ಕುಮಾರಿ ಶತಾ ದೇವಾಡಿಗ ಪ್ರಾರ್ಥಿಸಿ, H ಗಣೇಶ್ ಸೇರಿಗಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ರಮೇಶ್ ಸೇರಿಗಾರ್ ವಂದಿಸಿ, ಶ್ರೀಮತಿ ಪೂರ್ಣಿಮಾ ದಿನೇಶ್ ಹಾಗೂ ಶತಾ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ರತ್ನಾಕರ ದೇವಾಡಿಗ, ಮಂಜುನಾಥ್ ಸೇರಿಗಾರ್ ಪೆರ್ಡೂರು, ವಿಶ್ವನಾಥ್ ಸೇರಿಗಾರ್ ಸಹಕರಿಸಿದರು.

Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!