Header Ads Widget

ಕುಂದಾಪುರ : ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ!

ದಿನಾಂಕ 04/06/2025 ಕುಂದಾಪುರ ಕಸಬಾ ಗ್ರಾಮದ ಕೋಡಿ ಚಕ್ರೇಶ್ವರಿ ದೇವಸ್ಥಾನದ ಸಮೀಪ ಆರೋಪಿಗಳಾದ ಮುದಾಸ್ಸಿರ್‌ ಹಾಗೂ ಅಡೆನ್‌ ಲೋಬೋ ಎಂಬವರು MDMA ಎಂಬ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿರುವವರನ್ನು, ದಸ್ತಗಿರಿ ಮಾಡಿ, ಅವರ ವಶದಲ್ಲಿದ್ದ ಒಟ್ಟು 124.72 ಗ್ರಾಂ MDMA (ಅಂದಾಜು ಮೌಲ್ಯ-2.49.440/-) ಎಂಬ ಮಾದಕ ವಸ್ತು, P Oracle ಎಂಬ ಪ್ಲಾಸ್ಟೀಕ್‌ ಬಾಕ್ಸ್‌-1, ಇನ್ಸುಲಿನ್‌ ಸಿರಿಂಜ್‌-9, ENER-MECH ಎಂಬ ಕಪ್ಪು ಬ್ಯಾಗ್‌-1, Fresh ಎಂಬ ಪ್ಲಾಸ್ಟೀಕ್‌ ಬಾಕ್ಸ್‌-1, ವೇಯಿಂಗ್‌ ಮೇಶಿನ್‌-2, 20 ಸಣ್ಣ ಸಣ್ಣ ಸ್ಟೀಲ್‌ ಡಬ್ಬ ಮತ್ತು 2 ಸ್ಟೀಲ್‌ ಚಮಚ ಇರುವ ಪ್ಲಾಸ್ಟೀಕ್‌ ಬಾಕ್ಸ್‌-1, 36-ಪ್ಲಾಸ್ಟೀಕ್‌ ಜಿಪ್‌ ಲಾಕ್‌ ಕವರ್‌, Allen Solly Exclusive ಮೆಟಲ್‌ ಬಾಕ್ಸ್‌-1, ನಗದು 4540/ ರೂ, ಡ್ರಾಗನ್‌ ಚೂರಿ-1, OPPO ಮೊಬೈಲ್‌-1, Samsung ಮೊಬೈಲ್‌-2 ಸ್ವತ್ತುಗಳನ್ನು ವಷಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 

69/2025 u/s 8 C, 21 C, 22 C, r/w 29 NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ. 

ಈ ಪ್ರಕರಣದಲ್ಲಿ ಆರೋಪಿಗಳಾದ 1)ಮುದಾಸ್ಸಿರ್ (23), ತಂದೆ:ಮೊಹಮ್ಮದ್ ವಾಸ: ಎಂ. ಎಸ್ ಮಂಜಿಲ್ ಸರ್ಕಾರಿಗುಡ್ಡೆ, ಸುಭಾಷ್ ನಗರ, ಕಾಪು ತಾಲೂಕು, ಉಡುಪಿ.

2) ಅಡೆನ್ ಲೋಬೋ(18), ತಂದೆ: ಅನಿಲ್ ಲೋಬೋ, ಉದ್ಯಾವರ, ಉಡುಪಿ ತಾಲೂಕು ರವರನ್ನು ದಸ್ತಗಿರಿ ಮಾಡಲಾಗಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.