BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಸಾಧನೆ

​ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವ ಕೆಲಸ ಆಗಬೇಕು- ಕೆ.ಅನಂತಪದ್ಮನಾಭ ಕಿಣಿ

                                      

ಉಡುಪಿ: ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವಂಥ ಕೆಲಸವನ್ನು ಎಲ್ಲರೂ ಮಾಡಬೇಕು ಎಂದು ಕಲ್ಯಾಣಪುರ ಶ್ರೀವೆಂಕಟರಮಣ ದೇವಸ್ಥಾನದ ಆಡಳಿತ ಮುಕ್ತೇಸರ ಕೆ.ಅನಂತಪದ್ಮನಾಭ ಕಿಣಿ ಹೇಳಿದರು. ಕಲ್ಯಾಣಪುರದ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಸ್ಪಂದನಾ ಸೇವಾ ಸಂಸ್ಥೆ ವತಿಯಿಂದ ನೀಡಿದ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಿ,  ಸಂಯುಕ್ತ ಕರ್ನಾಟಕ ಪತ್ರಿಕೆಯ ಉಡುಪಿ ಜಿಲ್ಲಾ​ ವರದಿಗಾರರಾದ ಕಿರಣ್ ಮಂಜನಬೈಲು ರವರಿಗೆ "ಯಶೋ ಮಾಧ್ಯಮ-2025" ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು. 


ಡಾ.ಟಿ.ಎಂ.ಎ ಪೈ ಹಾಗೂ ಡಾ. ಬಿ.ವಿ.ಬಾಳಿಗ ರಂತಹ ಮಹಾನ್ ವ್ಯಕ್ತಿಗಳು ಓದಿದಂತಹ ಈ ಶಾಲೆ ಯಲ್ಲಿ ವಿದ್ಯಾರ್ಥಿಗಳು ಕಡಿಮೆಯಾಗಿದ್ದಾರೆ ಅಂತ ಮುಚ್ಚಬಾರದು. ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಿ ಮಕ್ಕಳು ಈ ಶಾಲೆಗೆ ಹೆಚ್ಚು ಬರುವಂತೆ ಮಾಡಬೇಕು. ಉತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ಕ್ರೀಡಾ ಚಟುವಟಿಕೆಗಳನ್ನು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉತ್ತೇಜಿಸಿ ಹೆಚ್ಚು ಮಕ್ಕಳು ಶಾಲೆಗೆ ಬರುವಂತೆ ಮಾಡಬೇಕು ಎಂದು ಹೇಳಿದರು.  


​ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಉಡುಪಿ​ ಜಿಲ್ಲಾ ಸಂಸ್ಥೆಯ ಸ್ಕೌಟ್ ಆಯುಕ್ತರಾದ ಜನಾರ್ದನ್ ಕೊಡವೂರು  ಮಾತನಾಡಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಸ್ವಂತ ನೆಲೆಯನ್ನು ​ಕಟ್ಟಿದ  ಹಾಗೂ ಸಮಾಜಸೇವೆ, ಸಾಂಸ್ಕೃತಿಕ ಸೇವೆಗಳನ್ನು ಸಲ್ಲಿಸುತ್ತಾ ಅನೇಕ ಸಾಧನೆ ಮಾಡಿದ ​ಪತ್ರಕರ್ತ ಕಿರಣ್ ಮಂಜನಬೈಲು ರವರಿಗೆ ಸ್ಪಂದನ ಸೇವಾ ಸಂಸ್ಥೆಯು​ ಯಶೋ​ ಮಾಧ್ಯಮ​  -2025" ಪ್ರಶಸ್ತಿ ನೀಡಿ​ ಗೌರವಿಸಿರುವುದು ಶ್ಲಾಘನೀಯ​.  ಮಕ್ಕಳು ಉತ್ತಮವಾಗಿ ಓದಿ ಇಂತಹ ಕನ್ನಡ ಮಾಧ್ಯಮ ದಲ್ಲಿ ಸಾಧನೆ ಮಾಡಿ ಸಾಧಕರಾಗಬೇಕು ಎಂದು ಹೇಳಿ, ಸ್ಪಂದನಾ ಸೇವಾ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.


ಉಡುಪಿ​ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ನ ನಿಕಟಪೂರ್ವ  ​ಅಧ್ಯಕ್ಷೆ  ಡಾ.ರಾಜಲಕ್ಷ್ಮೀ ರವರು ಮಾತನಾಡಿ ನಿಮಗೆ ಕೊಟ್ಟಿರುವ ಪುಸ್ತಕ ಮತ್ತು ಸ್ಟೇಟ್ ಗಳಲ್ಲಿ ಉತ್ತಮವಾಗಿ ಬರೆದು ವಿದ್ಯಾ ಭ್ಯಾಸ ಮಾಡಿ ಯಶಸ್ವಿ ವಿದ್ಯಾರ್ಥಿಗಳಾಗಿರಿ ಎಂದು ಮಕ್ಕಳಿಗೆ ಶುಭ ಕೋರಿ, ಸ್ಪಂದನಾ ಸೇವಾ ಸಂಸ್ಥೆಯ ಸಾಮಾಜಿಕ ಕಾರ್ಯ ಸಾಧನೆಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಮುಂದುವರೆಯಲಿ ಎಂದು ಹೇಳಿದರು. 


ಮಣಿಪಾಲ  ಕಾಲೇಜ್ ಆಫ್ ನರ್ಸಿಂಗ್ ನ ಡಾ. ಮರಿಯಾ ಪಾಯಸ್ ರವರು ಮಾತನಾಡಿ ವಿದ್ಯಾರ್ಥಿಗಳು ಕಲಿತು ಮುಂದಿನ ದಿನಗಳಲ್ಲಿ  ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ, ಕಾರ್ಯ ಚಟುವಟಿಕೆಗಳಲ್ಲಿ ತೊಡ ಗಿಸಿ ಕೊಂಡು ಸಮಾಜದ ಬಡವರು, ದಲಿತರು ಹಾಗೂ ಹಿಂದುಳಿದ ವರ್ಗದವರ ಕಣ್ಣೀರು ಒರೆ ಸುವ ಕೆಲಸ ಮಾಡಲಿ ಎಂದು ಹೇಳಿದರು. 


ಉಡುಪಿಯ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ನ ​ಹಫೀಜ್​ ರೆಹಮಾನ್ ರವರು ಮಾತನಾಡಿ ಸ್ಪಂದನಾ ಸೇವಾ ಸಂಸ್ಥೆಯ ಅಧ್ಯಕ್ಷರು ಮತ್ತು ಹೆಚ್ಚಿನ ಪದಾಧಿಕಾರಿಗಳು ಇದೇ​ ಶಾಲೆಯಲ್ಲಿ ಓದಿದ ಋಣ ತೀರಿಸಲು ಇಲ್ಲಿನ ಮಕ್ಕಳಿಗೆ ಪ್ರತಿವರ್ಷ ಉಚಿತ ನೋಟ್ ಪುಸ್ತಕಗಳನ್ನು ನೀಡಿ ಪುರಸ್ಕರಿಸುತ್ತಿ ರುವುದು ಶ್ಲಾಘನೀಯ.​ 


ಪ್ರಶಸ್ತಿ ಪುರಸ್ಕೃತರಾದ  ಕಿರಣ್ ಮಂಜನಬೈಲು ರವರು ಮಾತನಾಡಿ ಸಮಾಜಕ್ಕೆ ನಾನು ಉತ್ತಮ ವರದಿಗಳನ್ನು, ಸುದ್ದಿಗಳನ್ನು ನೀಡುವ ಮೂಲಕ ಸಣ್ಣ ಸೇವೆ ಮಾಡಿದ್ದೇನೆ. ಸ್ಪಂದನಾ ಸೇವಾ ಸಂಸ್ಥೆ ಯು ಈ ನನ್ನ ಸಣ್ಣ ಸೇವೆಯನ್ನು ಗುರುತಿಸಿ "ಯಶೋಮಾಧ್ಯಮ-2015" ಪ್ರಶಸ್ತಿ ನೀಡಿರುವುದಕ್ಕೆ ಚಿರಋಣಿಯಾಗಿರುತ್ತೇನೆ. ಸ್ಪಂದನ ಸೇವಾ ಸಂಸ್ಥೆಯ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿ ಯಲ್ಲಿ ಸಮಾಜ ಸೇವೆ ಮಾಡಲಿ ಎಂದು ಶುಭ ಹಾರೈಸಿದರು. ಹಾಗೆಯೇ ಮುಂದಿನ ದಿನಗಳಲ್ಲಿ ಮಕ್ಕಳು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಶಾಲೆಗೆ ಉತ್ತಮ ಹೆಸರು ತರಲಿ ಎಂದು ಶುಭ ಹಾರೈಸಿದರು. 


ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಸಂಯೋಜಕರಾದ ಸುಬ್ರಹ್ಮಣ್ಯ ಕಾರಂತ್, ಶ್ರೀಮತಿ ಸುಮನ ಎಸ್ ಪೈ  ಮಾತನಾಡಿದರು. ಸ್ಪಂದನಾ ಸೇವಾ ಸಂಸ್ಥೆಯ ಅಧ್ಯಕ್ಷ ವೆಂಕಟೇಶ್ ಪೈ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತ ಕೋರಿದರು. ಸಂಸ್ಥೆಯ ಕಾರ್ಯದರ್ಶಿಗಳಾದ ಸಂತೋಷ್ ಕಾಮತ್ ರವರು ವಂದನಾರ್ಪಣೆ ಸಲ್ಲಿಸಿದರು. ಖಜಾಂಚಿಗಳಾದ ​ ರಜನಿ.ವಿ.ಪೈ,​ ಸ್ಪಂದನಾ,  ಶಾಲೆಯ ಮುಖ್ಯೋಪಾಧ್ಯಾ ಯರಾದ ಸಂತೋಷ್, ​ಶಾಲೆಯ ಅಧ್ಯಾಪಕ ವೃಂದ, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.



Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!