BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಸುದ್ದಿ

ಯುಪಿಎಂಸಿ- ಕಾಲೇಜು ವಾರ್ಷಿಕೋತ್ಸವ ಮತ್ತು ಸಂಸ್ಥಾಪಕರ ಸಂಸ್ಮರಣೆ

ಉಡುಪಿ ಜಿಲ್ಲೆ ಶಿಕ್ಷಣ ಕಾಶಿ, ಡಾ. ಟಿ ಎಂ ಎ ಪೈ ಯವರಿಂದ ಸ್ಥಾಪಿತವಾದ ಶಿಕ್ಷಣ, ಆರೋಗ್ಯ ಸಂಸ್ಥೆಗಳು ಎಷ್ಟೋ ಕುಟುಂಬಗಳಿಗೆ ಅನ್ನ ನೀಡಿದೆ, ಜಿಡಿಪಿ ಪ್ರಗತಿಗೆ ಉಡುಪಿಯ ಕೊಡುಗೆ ಅಪಾರ, ಕಲಿತ ವಿದ್ಯೆಯಿಂದ ಉದ್ಯೋಗ ಪಡೆದು ಅಥವಾ ಉದ್ಯೋಗ ನೀಡಿದರೆ ಮಾನವ ಸಂಪನ್ಮೂಲದ ಕ್ರೂಡಿಕರಣ ಆಗಲು ಸಾಧ್ಯ. ವಿದ್ಯೆಯ ಜೊತೆಗೆ ಕೌಶಲಗಳು ಅತೀ ಮುಖ್ಯ ಇವುಗಳು ಒಂದೇ ನಾಣ್ಯದ ಎರಡು ಮುಖಗಳು, ಜೀವನದಲ್ಲಿ ಸಾಧಿಸಿದ ನಂತರ ತಂದೆ ತಾಯಿ, ಗುರುಗಳು ಮತ್ತು ಕಲಿತ ಕಾಲೇಜನ್ನು ಮರೆಯದೆ ಕಾಲೇಜು ಜೀವನವನ್ನು ಸದಾ ಅವಿಸ್ಮರಣೀಯ ಗೊಳಿಸಿರಿ ಎಂದು ಎಂ ಜಿ ಎಂ ಕಾಲೇಜು ಉಡುಪಿ ಇದರ ಪ್ರಾಚಾರ್ಯರಾದ ಪ್ರೊ ಲಕ್ಷ್ಮೀನಾರಾಯಣ ಕಾರಂತ್ ಹೇಳಿದರು.

ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ 34 ನೇ ವಾರ್ಷಿಕೋತ್ಸವ ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ಕಾಲೇಜಿನ ಸಂಸ್ಥಾಪಕರಾದ ಶ್ರೀ ಉಪೇಂದ್ರ ಪೈ ಮತ್ತು ಡಾ.ಮಾಧವ ಪೈಗಳ ಭಾವಚಿತ್ರಕ್ಕೆ ಪುಷ್ಪಾಂಜಲಿಯನ್ನು ಸಮರ್ಪಿಸುವ ಮೂಲಕ ಸಂಸ್ಥಾಪಕರ ದಿನವನ್ನೂ ಆಚರಿಸಲಾಯಿತು.

ಸೇವಾ ನಿವೃತ್ತಿ ಹೊಂದಲಿರುವ ಪ್ರೊ. ಕಾರಂತರಿಗೆ ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.

ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾಕುಮಾರಿಯವರು ಪ್ರಸ್ತುತ ಶೈಕ್ಷಣಿಕ ವರ್ಷದ ಕಾರ್ಯಕಲಾಪಗಳ ವರದಿಯನ್ನು ಮಂಡಿಸಿದರು. 

ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ವಿಭಾಗಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾಲೇಜಿನ ವಾಣಿಜ್ಯ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ.ಜಿ ಈ ಸನ್ಮಾನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮೂರು ವರ್ಷಗಳ ಕಾಲೇಜಿನ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ತೃತೀಯ ಬಿಬಿಎ ತರಗತಿಯ ಶರಣ್ಯ ನಾಯಕ್ ಹಾಗೂ ಅತ್ಯುತ್ತಮ ಸ್ವಯಂ ಸೇವಕ ಪ್ರಶಸ್ತಿಯನ್ನು ತೃತೀಯ ಬಿಬಿಎ ನ ಗಿರೀಶ್ ಕಾಮತ್ ಪಡೆದುಕೊಂಡರು.

ಕಾಲೇಜಿನ ಶುಚಿತ್ವ ಕಾಪಾಡುವ ಕು. ನಿರ್ಮಲ ಇವರನ್ನು ವಿದ್ಯಾರ್ಥಿಗಳು ಸನ್ಮಾಸಿದರು.

ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಉಮೇಶ್ ಕಾಮತ್, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾದ ಶ್ರೀ ರವಿರಾಜ್ ಹೆಚ್. ಪಿ , ಅಧ್ಯಕ್ಷರಾದ ಶ್ರೀ ಮನೋಹರ ಶೆಟ್ಟಿ ತೋನ್ಸೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಸನೊಬರ್ ಸ್ವಾಗತಿಸಿದರು, ಸಿಂಚನ ಶೆಟ್ಟಿಗಾರ್ ವಂದಿಸಿದರು, ಶರಣ್ಯ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!