BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಸುದ್ದಿ

ಸರ್ವತೋಮುಖ ಆರೋಗ್ಯಕ್ಕೆ ಯೋಗ ಕೀಲಿಕೈ ಇದ್ದಂತೆ. ~ ರಾಘವೇಂದ್ರ ಪ್ರಭು ಕವಾ೯ಲು

ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನ, ಓಡಾಟ, ಸಾಂಕ್ರಾಮಿಕ ಕಾಯಿಲೆಗಳ ಭಯ ಹೀಗೆ ನಾನಾ ಕಾರಣಗಳಿಂದಾಗಿ ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯ ಎರಡೂ ಕೂಡ ಹದಗೆಡುತ್ತಿದೆ. ಈ ಸಮಸ್ಯೆಗೆ ಯಾವ ವೈದ್ಯರೂ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಆದರೆ ನೈಸರ್ಗಿಕ ವಿಧಾನಗಳಿಂದ ನಮ್ಮ ನ್ನು ನಾವು ಆರೋಗ್ಯವಾಗಿರಿಸಿಕೊಳ್ಳಬಹುದು.


ಹೌದು, ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯವಾಗಿರ ಬೇಕೆಂದರೆ ಇರುವ ನೈಸರ್ಗಿಕ ವಿಧಾನ ಯೋಗಾಭ್ಯಾಸ.


ಯೋಗ   ಆಸನಗಳಲ್ಲಿ. ಮುದ್ರಾ ಯೋಗ, ಧ್ಯಾನ, ಪ್ರಾಣಾಯಾಮ, ಹೀಗೆ ಅನೇಕ ಮಜಲುಗಳಿವೆ. ಯೋಗದ ಅಭ್ಯಾಸ ಇಡೀ ದೇಹದ ಕಾರ್ಯಚಟುವಟಿಕೆಯನ್ನು ಉತ್ತಮಗೊಳಿಸುತ್ತದೆ. ಅನಾದಿ ಕಾಲ ದಿಂದಲೂ ರೂಢಿಯಲ್ಲಿರುವ ಯೋಗಾಸನಗಳು ಹೆಚ್ಚು ಪ್ರಚಲಿತಕ್ಕೆ ಬಂದು ಅಂತಾರಾಷ್ಟ್ರೀಯ ಮಟ್ಟ ದಲ್ಲಿ ಮನ್ನಣೆ ಪಡೆದಿದ್ದು ಮಾತ್ರ ಇತ್ತೀಚಿನ ವರ್ಷಗಳಲ್ಲಿ.


​ದೈನಂದಿನ ಜೀವನದಲ್ಲಿ ಯೋಗದ ಮಹತ್ವ :-  ಶಾಂತಿಯುತ ದೇಹ ಮತ್ತು ಮನಸ್ಸನ್ನು ಸಾಧಿಸಲು, ದೈಹಿಕ ಮತ್ತು ಮಾನಸಿಕವನ್ನು ಸ್ಥಿರವಾಗಿರಲು ಯೋಗ ಸಹಾಯಕ. ಇದು ಒತ್ತಡ ಮತ್ತು ಆತಂಕ ವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಜೊತೆಗೆ ಒತ್ತಡದ ನಡುವೆಯೂ ವಿಶ್ರಾಂತಿ ನೀಡುತ್ತದೆ. ಇದು ನಮ್ಯತೆ, ಸ್ನಾಯುವಿನ ಶಕ್ತಿ ಮತ್ತು ದೇಹದ ರೋಗ ನಿರೋಧಕ ಶಕ್ತಿ  ಹೆಚ್ಚಿಸಲು ಸಹಾಯ ಮಾಡುತ್ತದೆ. ಉಸಿರಾಟವನ್ನು ಸರಾಗಗೊಳಿಸಿ, ಇಡೀ ದಿನ ದೇಹ ಚೈತನ್ಯದಿಂದ ಕೂಡಿರುವಂತೆ ಮಾಡುತ್ತದೆ.


​ಆರೋಗ್ಯ ವೃದ್ಧಿಸುವ ಯೋಗಾಸನಗಳು :- ಯೋಗದಲ್ಲಿ ಅನೇಕ ವಿಧಗಳಿವೆ, ಸೂರ್ಯ ನಮಸ್ಕಾರ, ಪ್ರಾಣಾಯಾಮ, ಮುದ್ರಾ ಯೋಗ ಹೀಗೆ ವಿವಿಧ ರೀತಿಯ ಭಂಗಿಗಳು, ಆಸನಗಳಿವೆ. ಪ್ರತಿಯೊಂದು ಬಗೆಯ ಯೋಗ, ಆಸನಗಳು ಕೂಡ ದೇಹದಲ್ಲಿ ಊಹಿಸಲಾರದಷ್ಟು ಬದಲಾವಣೆಗಳನ್ನು ತರುವು ದಂತೂ ಸುಳ್ಳಲ್ಲ.


ಹೀಗಾಗಿ ನಿಯಮಿತ ಯೋಗದ ಅಭ್ಯಾಸ ದೇಹವನ್ನು ಸದೃಢವಾಗಿರಿಸಿ, ಆರೋಗ್ಯಯುತವಾಗಿ ಇಡಲು ಸಹಾಯ ಮಾಡುತ್ತದೆ. ಯಾವುದೇ ಕಾಲವಿರಲಿ ದೇಹದ ಎಲ್ಲಾ ಭಾಗಗಳಿಗೆ ಚಲನೆಯನ್ನು ನೀಡಿ, ಚಟುವಟಿಕೆಯಿಂದ ಕೂಡಿರುವಂತೆ ಮಾಡುತ್ತದೆ.


ಪ್ರಧಾನ ಮಂತ್ರಿ  ಮೋದಿಯವರ ನೇತೃತ್ವದಲ್ಲಿ 2015ರಲ್ಲಿ ಜೂನ್‌ 21ನ್ನು ಅಂತರಾಷ್ಟ್ರೀಯ ಯೋಗ ದಿನವೆಂದು ಆಚರಣೆಗೆ ತರಲಾಗಿದೆ. ಅಂದಿನಿಂದ ಇಂದಿನವರೆಗೆ ಪ್ರತೀ ವರ್ಷ ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಜೂನ್‌ 21ರಂದು ಯೋಗದಿನವನ್ನು ಆಚರಣೆ ಮಾಡಲಾಗುತ್ತಿದೆ.


ವಿಶ್ವ ಯೋಗ ದಿನ 2025ರ ಧ್ಯೇಯ ವಾಕ್ಯ:  11ನೇ ಅಂತಾರಾಷ್ಟ್ರೀಯ ಯೋಗ ದಿನದ 2025ರ ಅಧಿಕೃತ ಧ್ಯೇಯ ವಾಕ್ಯ "ಒಂದು ಭೂಮಿ, ಒಂದು ಆರೋಗ್ಯಕ್ಕೆ ಯೋಗ" ಎಂಬುದನ್ನು ಪ್ರಧಾನಿ  ಘೋಷಿಸಿದ್ದಾರೆ. ಇದು ವೈಯಕ್ತಿಕ ಯೋಗಕ್ಷೇಮ ಮತ್ತು ಯೋಜನೆಯ ಆರೋಗ್ಯದ ನಡುವಿನ ಸಂಬಂಧ ಒತ್ತಿ ಹೇಳುತ್ತದೆ. ಜೀವನ ಶಾಂತಿಗಾಗಿ ಯೋಗವು ಪ್ರಬಲ ಸಾಧನವಾಗಿ ಮುಂದುವರೆದಿದೆ. ಯೋಗವು ದೇಹವನ್ನು ಬಲಪಡಿಸುತ್ತದೆ, ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ದೈನಂದಿನ ಜೀವನದಲ್ಲಿ ಅರಿವು ಮತ್ತು ಜವಾಬ್ದಾರಿಯ ಉನ್ನತ ಪ್ರಜ್ಞೆಯನ್ನು ಬೆಳೆಸುತ್ತದೆ.


ಯೋಗಾಯೋಗ:-  ಈ ಯೋಗವು ಆರೋಗ್ಯಕರ ಮತ್ತು ಹೆಚ್ಚು ಸುಸ್ಥಿರ ಜೀವನಶೈಲಿಯನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ. ನಮ್ಮನ್ನು ನಾವು ನೋಡಿಕೊಳ್ಳುವಲ್ಲಿ, ನಾವು ಭೂಮಿಯ ಬಗ್ಗೆ ಕಾಳಜಿ ವಹಿಸಲು ಪ್ರಾರಂಭಿಸುತ್ತೇವೆ. ವಸುಧೈವ ಕುಟುಂಬಕಂ ಜಗತ್ತು ಒಂದು ಕುಟುಂಬ ಎಂಬ ಶಾಶ್ವತ ಭಾರತೀಯ ನೀತಿಯನ್ನು ಪ್ರತಿಬಿಂಬಿಸುತ್ತದೆ. 


ಈ ವಿಶೇಷವಾದ ಯೋಗವನ್ನು ಯಾವುದೇ ಧಾರ್ಮಿಕವಾಗಿ ನೋಡದೇ, ಅದನ್ನು ನಿಮ್ಮ ಭೌತಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಚಿಂತನೆ ಮಾಡಿಕೊಂಡು ನೋಡಬೇಕು ಈ ಅಪೂವ೯ವಾದ ಭಾರತೀಯ ಆಸ್ತಿಯನ್ನು ಇಂದು ಪ್ರಪಂಚದ ಹೆಚ್ಚಿನ ದೇಶಗಳಲ್ಲಿ ಜನರು ಒಪ್ಪಿಕೊಂಡಿದ್ದಾರೆ ಇದು ನಮ್ಮ ಹಿರಿಮೆ. ಕೇವಲ ಯೋಗ ದಿನದಂದು ಯೋಗ  ಮಾಡಿದರೆ ಕಾಲದು ಪ್ರತಿದಿನವೂ ಕೂಡ ನಮ್ಮ ದಿನ ಯೋಗದಿಂದ ಪ್ರಾರಂಭವಾಗಬೇಕು ಈ ನಿಟ್ಟಿನಲ್ಲಿ ಯೋಗವನ್ನು ಶಾಲಾ ಹಂತದಲ್ಲಿ ಪಠ್ಯಕ್ರಮವನ್ನಾಗಿ ಮಾಡಿದ್ದಲ್ಲಿ ಉತ್ತಮ.


ಯೋಗಸಾಧಕ ಯತಿ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಶನಿವಾರದಂದು ಬಾಗಲಕೋಟೆಯಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಯೋಗೋತ್ಸ ವದಲ್ಲಿ ಪಾಲ್ಗೊಂಡು ಯೋಗಾಸನ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು .


ಏನೇ ಆಗಲಿ ಯೋಗ ಪ್ರತಿದಿನ ಆಗಲಿ ಯೋಗಾಯೋಗ


✍🏼ರಾಘವೇಂದ್ರ ಪ್ರಭು ಕವಾ೯ಲು, ಲೇಖಕ



Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!