BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಕರಾವಳಿ

ದೊಡ್ಡಣಗುಡ್ಡೆ: ಜುಲೈ 4, 5 ಮತ್ತು 6 ರಂದು ಹಲಸು - ಮಾವು - ಕೃಷಿ - ಕೌಶಲ ಬೃಹತ್ ಮೇಳ


ಸಾಂಪ್ರದಾಯಿಕ ಉತ್ಪನ್ನ ಉತ್ತೇಜನ ಸಮಿತಿ, ಉಡುಪಿ ಇವರ ಆಶ್ರಯದಲ್ಲಿ ಹಲಸು - ಮಾವು - ಕೃಷಿ - ಕೌಶಲ ಬೃಹತ್ ಮೇಳವನ್ನು ರೈತ ಸೇವಾ ಕೇಂದ್ರದ ವಠಾರ, ತೋಟಗಾರಿಕಾ ಇಲಾಖೆ, ದೊಡ್ಡಣಗುಡ್ಡೆ, ಉಡುಪಿ ಇಲ್ಲಿ ಜುಲೈ 4, 5 ಮತ್ತು 6 ರಂದು ಬೆಳಗ್ಗೆ 9:00 ರಿಂದ ರಾತ್ರಿ 8:00 ರವರೆಗೆ ಆಯೋಜಿಸಲಾಗಿದೆ.

ಈ ಮೇಳದಲ್ಲಿ ಕೆಂಪು ಹಲಸು, ಚಂದ್ರ ಹಲಸು, ಉಡುಪಿ ಹಲಸು, ವಿವಿಧ ತಳಿಯ ಮಾವಿನ ಹಣ್ಣುಗಳು, ಹಲಸಿನ ಹಣ್ಣಿನ ಖಾದ್ಯ ಗಳಾದ ಹೋಳಿಗೆ - ಜಿಲೇಬಿ - ಸಾಟ್ - ಕಡುಬು - ಮುಳ್ಕ - ಕೇಸರಿ ಬಾತ್ - ಪಾಯಸ - ಹಪ್ಪಳ - ಮಾಂಬುಳ - ಸೆಂಡಿಗೆ - ಚಿಪ್ಸ್ - ಜಾಮ್ - ಗುಜ್ಜೆ ಉಪ್ಪಿನಕಾಯಿ, ಗುಜ್ಜೆ ಪೋಡಿ, ಗುಜ್ಜೆ ಕಬಾಬ್, ಹಲಸಿನ ಐಸ್ ಕ್ರೀಮ್ - ಮಿಲ್ಕ್ ಶೇಕ್, ಉಪ್ಪಡ್ ಪಚ್ಚಿರ್, ಒಣಗಿಸಿದ ಹಲಸು, ಒಣಗಿಸಿದ ಬಾಳೆ ಹಣ್ಣು, ಪತ್ರೊಡೆ, ಮಿಡಿ ಉಪ್ಪಿನಕಾಯಿ, ಮ್ಯಾಂಗೋ ಸಾಟ್, ಮ್ಯಾಂಗೋ ಜ್ಯೂಸ್, ಕಲ್ಪರಸ, ಗೋಳಿ ಸೋಡಾ, ಕೈಮಗ್ಗ - ಖಾದಿ ಬಟ್ಟೆಗಳು, ಕೋಲ್ಕತ್ತಾ ಸೀರೆಗಳು, ಗಿಡಗಳ ಭಾರಿ ಸಂಗ್ರಹ ಇರುವ ನರ್ಸರಿ, ತರಕಾರಿ ಗೆಡ್ಡೆ ಮತ್ತು ಬೀಜಗಳು, ಆಯುರ್ವೇದಿಕ್ ಮತ್ತು ಗೋ ಉತ್ಪನ್ನಗಳು, ಮತ್ತಿತರ ಗ್ರಹ ಉತ್ಪನ್ನಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ ಜರುಗಲಿದೆ.


ಉದ್ಘಾಟನಾ ಅವಧಿಯು ದಿನಾಂಕ 4.7.2025 ಅಪರಾಹ್ನ 3 ರಿಂದ 4 ಗಂಟೆವರೆಗೆ ಜರುಗಲಿದೆ.  ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಮಾನ್ಯ ಸಂಸದರು ಸನ್ಮಾನ್ಯ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಮೇಳವನ್ನು ಉದ್ಘಾಟಿಸಲಿರುವರು.


ಮುಖ್ಯ ಅತಿಥಿಗಳಾಗಿ ಉಡುಪಿಯ ಮಾನ್ಯ ಶಾಸಕರು ಶ್ರೀ ಯಶಪಾಲ್ ಎ ಸುವರ್ಣ, ಉಡುಪಿ ನಗರಸಭೆಯ ಮಾನ್ಯ ಅಧ್ಯಕ್ಷರು ಶ್ರೀ ಪ್ರಭಾಕರ ಪೂಜಾರಿ, ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದ ದಿವಾನರು ಶ್ರೀ ನಾಗರಾಜ ಆಚಾರ್ಯ, ಪ್ರಗತಿಪರ ಕೃಷಿಕರು-ಸಾಮಾಜಿಕ ಕಾರ್ಯಕರ್ತರು ಶ್ರೀ ನವೀನ್ ಶೆಟ್ಟಿ ಕುತ್ತ್ಯಾರು, ಲಯನ್ಸ್ ಜಿಲ್ಲೆ 317ಸಿಯ ಜಿಲ್ಲಾ ಗವರ್ನರ್ ಲ| ಸಪ್ನಾ ಸುರೇಶ್, ಪಡುಬಿದ್ರಿ ಯ ಉದ್ಯಮಿ ಶ್ರೀ ಉದಯ್ ಕುಮಾರ್ ಶೆಟ್ಟಿ ಇನ್ನಾ, ಶ್ರೀ ಕೃಷ್ಣ ಪೆಟ್ರೋಲಿಯಂ ಇಂದ್ರಾಳಿ ಯ ಮಾಲಕರು ಶ್ರೀ ಲಕ್ಷ್ಮಿಕಾಂತ್ ಬೆಸ್ಕೂರ್, ಸಹಕಾರ ಭಾರತಿ ಉಡುಪಿ ಜಿಲ್ಲೆಯ ಅಧ್ಯಕ್ಷರು ಶ್ರೀ ದಿನೇಶ್ ಹೆಗ್ಡೆ ಆತ್ರಾಡಿ, ಉಡುಪಿ ಜಿಲ್ಲೆ ಯ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರು ಶ್ರೀ ರಾಜು ಎಂ ಎಸ್, ತೋಟಗಾರಿಕಾ ಇಲಾಖೆ ಉಡುಪಿಯ ಸಹಾಯಕ ನಿರ್ದೇಶಕರು ಶ್ರೀ ಸುನಿಲ್ ಕುಮಾರ್ ವೈ ಹೆಚ್ ಭಾಗವಹಿಸಲಿರುವರು. 


ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತಿ: ರತ್ನಾಕರ್ ಇಂದ್ರಾಳಿ ಸಂಚಾಲಕರು , ಮಹಾವೀರ್ ಜೈನ್, ದಿವಾಕರ್ ಶೆಟ್ಟಿ , ಅಶೋಕ್ ಶೆಟ್ಟಿಗಾರ್, ನಿತ್ಯಾನಂದ ನಾಯಕ್


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!