BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಸಂಘ ಸಂಸ್ಥೆ

ವೈದ್ಯಕೀಯ ಪ್ರತಿನಿಧಿ ಸಂಘ, ಜಯಂಟ್ಸ್ ಗ್ರೂಪ್ : ವೈದ್ಯರ ದಿನಾಚರಣೆ ಅಭಿನಂದನಾ ಸಮಾರಂಭ

ಉಡುಪಿ :- ಕನಾ೯ಟಕ ಸ್ಟೇಟ್ ಮೆಡಿಕಲ್ & ಸೇಲ್ಸ್ ರೆಪ್ರೆನ್ಟೆಂಟೀವ್ ಎಸೋಸಿಯೇಶನ್ ಉಡುಪಿ (ವೈದ್ಯಕೀಯ ಪ್ರತಿನಿಧಿಗಳ ಸಂಘ) ಮತ್ತು ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಇದರ ವತಿಯಿಂದ 23 ನೇ ವಷ೯ದ ವೈದ್ಯರ ದಿನಾಚರಣೆ, ಅಭಿನಂದನಾ ಸಮಾರಂಭ ಉಡುಪಿ ಪುರಭವನ ದಲ್ಲಿ ಜುಲೈ 5 ರಂದು ಶನಿವಾರ ನಡೆಯಿತು.

ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಪು ಶಾಸಕ ಗುಮೆ೯ ಸುರೇಶ್ ಶೆಟ್ಟಿ, ಹುಟ್ಟುವಾಗ ಯಾರು ಕೂಡ ಅಜಿ೯ ಹಾಕಿ ಹುಟ್ಟಿರು ದಿಲ್ಲ ಆದರೆ ಈ ಅಪೂರ್ವವಾದ ಅವಕಾಶವನ್ನು ಬಳಸಿ ನಮ್ಮ ಜನ್ಮವನ್ನು ಸಾರ್ಥಕ ಗೊಳಿಸಬೇಕು ಪರೋಪಕಾರ ಮತ್ತು ಸಹಜೀವನ ನಮ್ಮ ತತ್ವವಾಗಬೇಕು ಎಂದರು.

ವೈದ್ಯರು ತಮ್ಮ ಅಪೂರ್ವವಾದ ಸೇವೆಯನ್ನು ಸಮಾಜಕ್ಕೆ ನಿರಂತರವಾಗಿ ನೀಡಿರುವ ಕಾರಣ ಇಂದು ಸಮಾಜದ ಆರೋಗ್ಯ ಸರಿಯಾದ ರೀತಿಯಲ್ಲಿ ಇದೆ ವೈದ್ಯರ ಈ ಸೇವೆಯನ್ನು ಗುರುತಿಸುವ ಕಾರ್ಯ ನಿರಂತರವಾಗಿರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷ್ತೆಯನ್ನು ಜಯoಟ್ಸ್ ಗ್ರೂಪ್ ಬ್ರಹ್ಮಾವರ ವರ ಅಧ್ಯಕ್ಷ ಅಣ್ಣಯ್ಯ ದಾಸ್ ವಸಿದ್ದರು.

ಮುಖ್ಯ ಅತಿಥಿ ಭಾರತೀಯ ವೈದ್ಯ ಸಂಘ ಉಡುಪಿ ಕರಾವಳಿ ಅಧ್ಯಕ್ಷ ಡಾ.ಸುರೇಶ್ ಶೆಣಿೈ ,ಮಾತನಾಡಿ ವೈದ್ಯಕೀಯ ಪ್ರತಿನಿಧಿಗಳು ಬಹಳಷ್ಟು ಜನರು ತಮ್ಮ ಉದ್ಯೋಗದೊಂದಿಗೆ ಸಮಾಜಕ್ಕೆ ಅನೇಕ ರೀತಿಯ ಕೊಡುಗೆಗಳನ್ನು ನೀಡುತ್ತಿದ್ದಾರೆ ಮುಖ್ಯವಾಗಿ ಅನೇಕ ಆರೋಗ್ಯ ಶಿಬಿರಗಳಿಗೆ ಔಷಧಗಳನ್ನು ನೀಡಿತ್ತಿರುವುದು ಶ್ಲಾಘನೀಯ ಎಂದರು.


ಜಯಂಟ್ಸ್ ವೆಲ್ಫೇರ್ ಫೌಂಡೇಶನ್ ಸೆಂಟ್ರಲ್ ಕಮಿಟಿ ಸದಸ್ಯ ದಿನಕರ ಅಮೀನ್ ಮಾತನಾಡಿ, ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿ ಬಿಸಿ ರಾಯ್ ಅವರ ಜೀವನವೇ ಎಲ್ಲರಿಗೂ ಆದರ್ಶ ಅವರು ಇಡೀ ತಮ್ಮ ಜೀವನವನ್ನು ವೈದ್ಯರಾಗಿ ಮತ್ತು ಉತ್ತಮ ಜನಪ್ರತಿನಿಧಿಯಾಗಿ ಸಮಾಜಕ್ಕೆ ವ್ಯಯಿಸಿರುವುದು ಎಲ್ಲರಿಗೂ ಆದರ್ಶವಾಗಿದೆ ಎಂದರು.

ವೇದಿಕೆಯಲ್ಲಿ

ಜಯಂಟ್ಸ್ ಫೆಡರೇಶನ್ ಅಧ್ಯಕ್ಷ ತೇಜಶ್ವರ್ ರಾವ್ ಮಾಜಿ ಅಧ್ಯಕ್ಷ ಮತ್ತು ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಗೌರವ ಸಲಹೆಗಾರ ಮಧುಸೂಧನ್ ಹೇರೂರು, ವೈದ್ಯಕೀಯ ಪ್ರತಿನಿಧಿ ಸಂಘದ ಅಧ್ಯಕ್ಷ ಸತೀಶ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಪ್ರಸನ್ನ ಕಾರಂತ್ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹಿರಿಯ ವೈದ್ಯರುಗಳಾದ ಮಣಿಪಾಲ ಕೆಎಂಸಿ ಸ್ತ್ರೀರೋಗ ತಜ್ಞ ಡಾ ಶ್ರೀಪಾದ ಹೆಬ್ಬಾರ್, ತೆಕ್ಕಟ್ಟೆಯ ವೈದ್ಯರಾದ ಡಾ. ಕೃಷ್ಣಯ್ಯ ಶೆಟ್ಟಿ, ಹಿರಿಯಡ್ಕ ಕಾಮತ್ ಕ್ಲಿನಿಕ್ ನ ಡಾ ಸುಧಾ ಕಾಮತ್, ಕುಂದಾಪುರ ಸರ್ಕಾರಿ ಆಸ್ಪತ್ರೆಯ ಡಾ. ನಾಗೇಶ್ ಅವರನ್ನು ಅಪೂರ್ವವಾದ ವೈದ್ಯಕೀಯ ಸೇವೆಗಾಗಿ ಸನ್ಮಾನಿಸಲಾಯಿತು. ರಾಜು ಪಿ ಕರಾವಳಿ, ವಿಜೇತ, ಅಂಬಿಕಾ, ಅನಂತಕೃಷ್ಣ ಹೊಳ್ಳ, ರಾಘವೇಂದ್ರ ಪ್ರಭು ಕವಾ೯ಲು, ವಿವೇಕಾನಂದ ಕಾಮತ್ ಪರಿಚಯಿಸಿದರು.

ಮಧುಸೂಧನ್ ಹೇರೂರು ಪ್ರಸ್ತಾವನೆ ಗೈದರು.

ಸುಬ್ರಹ್ಮಣ್ಯ ಆಚಾರ್ಯ ನಿರೂಪಿಸಿದರು ಪ್ರಸನ್ನ ಕಾರಂತ್ ವಂದಿಸಿದರು. ಈ ಸಂದರ್ಭದಲ್ಲಿ ಜಯಂಟ್ಸ್ ಸದಸ್ಯರನ್ನು ಮತ್ತು ವೈದ್ಯರುಗಳನ್ನು ಗೌರವಿಸಲಾಯಿತು.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!