BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಕರಾವಳಿ

ಕಾಪು: ಜುಲೈ 25, 26, 27 ರಂದು ಬೃಹತ್ ಹಲಸು ಮೇಳ

ಜುಲೈ 25, 26, 27 ರಂದು ಬೆಳಗ್ಗೆ 9:00 ರಿಂದ ರಾತ್ರಿ 8:00 ರವರೆಗೆ ಕಾಪು ಹಳೆ ಮಾರಿಗುಡಿ ಸಭಾಗೃಹದಲ್ಲಿ ಸಂಸ್ಕೃತಿ ಈವೆಂಟ್ಸ್ ಇವರು ಪ್ರಸ್ತುತ ಪಡಿಸುವ ಕಾಪು ಬೃಹತ್ ಹಲಸು ಮೇಳ ಆಯೋಜಿಸಲಾಗಿದೆ.

ಈ ಮೇಳದಲ್ಲಿ ನಾಗು ಹಲಸು, ನಂದು ಹಲಸು, ಶಂಕರ ಹಲಸು, ರುದ್ರಾಕ್ಷಿ ಹಲಸು, ಚಂದ್ರ ಹಲಸು ಮುಂತಾದ ರುಚಿ ರುಚಿಯಾದ ಹಲಸಿನ ಹಣ್ಣು ಗಳು ಗುಬ್ಬಿ, ತುಮಕೂರು, ದೊಡ್ಡಬಳ್ಳಾಪುರ, ಉಪ್ಪಿನಂಗಡಿ, ಕುಂದಾಪುರ ಮುಂತಾದ ಪ್ರದೇಶಗಳಿಂದ ಬರಲಿವೆ. ವಿವಿಧ ತಳಿಯ ಮಾವಿನ ಹಣ್ಣುಗಳು, ಹಲಸಿನ ಹಣ್ಣಿನ ಖಾದ್ಯ ಗಳಾದ ಹೋಳಿಗೆ - ಜಿಲೇಬಿ - ಸಾಟ್ - ಕಡುಬು - ಮುಳ್ಕ - ಕೇಸರಿ ಬಾತ್ - ಹಲ್ವಾ - ಪಾಯಸ - ಹಪ್ಪಳ - ಮಾಂಬುಳ - ಸೆಂಡಿಗೆ - ಚಿಪ್ಸ್ - ಜಾಮ್ - ಗುಜ್ಜೆ ಉಪ್ಪಿನಕಾಯಿ, ಗುಜ್ಜೆ ಪೋಡಿ, ಗುಜ್ಜೆ ಕಬಾಬ್, ಪತ್ರೊಡೆ, 

ಹಲಸಿನ ಐಸ್ ಕ್ರೀಮ್ - ಮಿಲ್ಕ್ ಶೇಕ್, ಉಪ್ಪಡ್ ಪಚ್ಚಿರ್, ಒಣಗಿಸಿದ ಹಲಸು, ಒಣಗಿಸಿದ ಬಾಳೆ ಹಣ್ಣು, ಮಿಡಿ ಉಪ್ಪಿನಕಾಯಿ, ಮ್ಯಾಂಗೋ ಸಾಟ್, ಮ್ಯಾಂಗೋ ಜ್ಯೂಸ್, ಕಲ್ಪರಸ, ಗೋಳಿ ಸೋಡಾ, ಆಭರಣ ಗಳು, ಉಡುಪಿ ಕೈಮಗ್ಗ - ಖಾದಿ ಬಟ್ಟೆಗಳು, ಕೋಲ್ಕತ್ತಾ ಸೀರೆಗಳು, ಗಿಡಗಳ ಭಾರಿ ಸಂಗ್ರಹ ಇರುವ ನರ್ಸರಿ, ತರಕಾರಿ ಗೆಡ್ಡೆ ಮತ್ತು ಬೀಜಗಳು, ಆಯುರ್ವೇದಿಕ್ ಮತ್ತು ಗೋ ಉತ್ಪನ್ನಗಳು, ಮತ್ತಿತರ ಗ್ರಹ ಉತ್ಪನ್ನಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಜರುಗಲಿದೆ.

ಉದ್ಘಾಟನಾ ಅವಧಿಯು ದಿನಾಂಕ 25.7.2025 ಅಪರಾಹ್ನ 3 ರಿಂದ 4 ಗಂಟೆವರೆಗೆ ಜರುಗಲಿದೆ. 

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಮಾನ್ಯ ಸಂಸದರು ಸನ್ಮಾನ್ಯ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕಾಪುವಿನ ಮಾನ್ಯ ಶಾಸಕರು ಶ್ರೀ ಗುರ್ಮೆ ಸುರೇಶ್ ಶೆಟ್ಟಿ ಇವರು ಮೇಳವನ್ನು ಉದ್ಘಾಟಿಸಲಿರುವರು.

ಸಾರ್ವಜನಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು, ಸ್ವಾದಿಷ್ಟ ತಿಂಡಿ ತಿನಿಸುಗಳನ್ನು ಆಸ್ವಾದಿಸಿ, ಖರೀದಿಸಿ, ಮೇಳವನ್ನು ಯಶಸ್ವಿಗೊಳಿಸಬೇಕಾಗಿ ಆಯೋಜಕರು ವಿನಂತಿಸಿಕೊಂಡಿದ್ದಾರೆ.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!