BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಕರಾವಳಿ

“ಮನೆ ಮನೆಗೆ ಪೊಲೀಸ್” ಎಂಬ ಪರಿಕಲ್ಪನೆಯ ವಿನೂತನವಾದ ಕಾರ್ಯಕ್ರಮ ಉದ್ಘಾಟನೆ

ಸರ್ಕಾರದ ಸುತ್ತೋಲೆ ಸಂಖ್ಯೆ ಅಪರಾಧ: 3/73/2025 ದಿನಾಂಕ 04/07/2025 ರಂತೆ “ಮನೆ ಮನೆಗೆ ಪೊಲೀಸ್” ಎಂಬ ಪರಿಕಲ್ಪನೆಯ ವಿನೂತನವಾದ ಕಾರ್ಯಕ್ರಮವನ್ನು ಇಂದು ದಿನಾಂಕ: 11/07/2025 ರಂದು ಬೆಳಿಗ್ಗೆ 07:15 ಗಂಟೆಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಕಿರಣ್ ಎಸ್. ಗಂಗಣ್ಣನವರ್ ರವರಿಂದ ಹಸಿರು ಬಾವುಟ ತೋರಿಸುವುದರ ಮುಖಾಂತರ ಅಧೀಕೃತವಾಗಿ ಉದ್ಘಾಟಿಸಿ, ಪೊಲೀಸ್ ಸೇವೆ ಪ್ರತಿ ಮನೆಗೆ ತಲುಪಲಿ, ನಿಮ್ಮ ತಂಡಗಳ ಕಾರ್ಯಕ್ಕೆ ಯಶಸ್ವಿಯಾಗಲಿ ಎಂದುಶುಭ ಹಾರೈಸಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಹರಿರಾಮ್ ಶಂಕರ್ ಐಪಿಎಸ್, ಶ್ರೀ ಸುಧಾಕರ ಎಸ್ ನಾಯ್ಕ ಕೆ.ಎಸ್.ಪಿ.ಎಸ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆ, ಶ್ರೀ ಪರಮೇಶ್ವರ ಹೆಗಡೆ ಕೆ.ಎಸ್. ಪಿ.ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆ, ಪ್ರಭು ಡಿ.ಟಿ ಕೆ.ಎಸ್.ಪಿ.ಎಸ್ ಪೊಲೀಸ್ ಉಪಾಧೀಕ್ಷಕರು ಉಡುಪಿ ಉಪ ವಿಭಾಗ, ಉಡುಪಿ ನಗರ ಠಾಣೆಯ ಮತ್ತು ಉಡುಪಿ ಸಂಚಾರ ಠಾಣೆಯ ಪಿಎಸ್ಐ ರವರಾದ, ಶ್ರೀ ಭರತೇಶ್, ಶ್ರೀ ನಾರಾಯಣ, ಶ್ರೀ ಪ್ರಕಾಶ್ ಸಾಲಿಯಾನ್, ಶ್ರೀ ಹುಸೇನ್ ಸಾಬ್ ಮತ್ತು ಸಿಬ್ಬಂದಿಯವರು ಹಾಜರಿದ್ದರು. 

 ಸರ್ಕಾರ ಹೊರಡಿಸಿರುವ 27 ಅಂಶಗಳ ಸುತ್ತೋಲೆಯನ್ನು ಮನವರಿಕೆ ಮಾಡಿಕೊಂಡು ಇಂದು ಉಡುಪಿ ಉಪ ವಿಭಾಗದ ಉಡುಪಿ ನಗರ ಠಾಣೆ, ಮಣಿಪಾಲ, ಬ್ರಹ್ಮಾವರ ಮತ್ತು ಕೋಟ ಠಾಣೆಗಳಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ “ಮನೆಮನೆ ಪೊಲೀಸ್” ಅಭಿಯಾನ ಕೈಗೊಂಡಿರುತ್ತಾರೆ, ಸಾರ್ವಜನಿಕರಿಗೆ “ಮನೆ ಮನೆ ಪೊಲೀಸ್” ಅಭಿಯಾನ ಸಂದರ್ಭದಲ್ಲಿ ಸೈಬರ್ ಅಪರಾಧ ಮಾದಕ ವಸ್ತು ಡ್ರಗ್ಸ್‌ , ಬಾಲಾಪರಾಧ, ಪೋಕ್ಸೋ ಕಾಯ್ದೆ, ಮನೆ ಕಳ್ಳತನ, ಸರ ಕಳ್ಳತನ, ರಸ್ತೆ ಸಂಚಾರ ನಿಯಮ ಮುಂತಾದ ವಿಷಯಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮನೆಯಲ್ಲಿರುವವರ ಹೆಸರು, ಮೊಬೈಲ್ ನಂಬ್ರ ಪಡೆದುಕೊಳ್ಳಲಾಯಿತು. ಸಾರ್ವಜನಿಕರರಿಂದ ಅವರ ದೂರು - ದುಮ್ಮಾನಗಳನ್ನು ಮತ್ತು ಕೋರಿಕೆಗಳನ್ನು ಸ್ವೀಕರಿಸಲಾಗಿರುತ್ತದೆ  

ಈ ಅರಿವು ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಠಾಣೆಯಿಂದ ರಚಿಸಲಾಗಿರುವ ತಂಡದಲ್ಲಿ ಪಿಐ/ಪಿಎಸ್ಐ, ಎಎಸ್ಐ, ಮಹಿಳಾ ಮತ್ತು ಪುರುಷ ಸಿಬ್ಬಂದಿಗಳು ಒಳಗೊಂಡಿರುತ್ತಾರೆ. ಇಂದು ಉಡುಪಿ ನಗರ ಠಾಣೆಯ 28, ಮಣಿಪಾಲ 45, ಬ್ರಹ್ಮಾವರ 30 ಮತ್ತು ಕೋಟ 25 ಮನೆಗಳಿಗೆ ಭೇಟಿ ನೀಡಿ ಕಾರ್ಯಕ್ರಮದ ಮೂಲ ಉದ್ದೇಶವನ್ನು ತಿಳಿಸಲಾಯಿತು. ತಂಡದ ನೇತೃತ್ವವನ್ನು ಪಿಎಸ್ಐ/ಎಎಸ್ಐ ರವರು ವಹಿಸಿಕೊಂಡು ಪ್ರತಿ ಮನೆಗೆ ಭೇಟಿ ನೀಡುವ ಯೋಜನೆ ಹಾಕಿಕೊಂಡಿರುತ್ತೇವೆ. ಸಾರ್ವಜನಿಕರು ಭೇಟಿಯ ವೇಳೆ ಪೊಲೀಸರೊಂದಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿರುತ್ತಾರೆ. ಈ ಕಾರ್ಯಕ್ರಮ ಪ್ರತಿ ಮನೆಗೆ ತಲುಪ ಬೇಕಾಗಿರುವುದರಿಂದ ಕನಿಷ್ಟ 3 ರಿಂದ 3½ ತಿಂಗಳವರೆಗೆ ಪ್ರತಿ ದಿನ ಚಾಲಿಯಲ್ಲಿರುತ್ತದೆ.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!