BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ರಾಷ್ಟ್ರೀಯ

ಬಹುಭಾಷಾ ನಟಿ ಬಿ. ಸರೋಜಾದೇವಿ ವಿಧಿವಶ!

ಬಹುಭಾಷಾ ನಟಿ ಬಿ. ಸರೋಜಾದೇವಿ(87) ಅವರು ವಯೋಸಹಜ ಅನಾರೋಗ್ಯದಿಂದಾಗಿ ಸೋಮವಾರ ಮಲ್ಲೇಶ್ವರದ‌ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಪಾರ್ಥಿವಶರೀರವನ್ನು ನಾಳೆ ಬೆಳಿಗ್ಗೆವರೆಗೆ ಮಲ್ಲೇಶ್ವರದಲ್ಲಿರುವ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ನಾಳೆ 11.30ಕ್ಕೆ ಹುಟ್ಟೂರು ಚನ್ನಪಟ್ಟಣ ತಾಲ್ಲೂಕಿನ ದಶಾವರದಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಪುತ್ರ ಗೌತಮ್ ತಿಳಿಸಿದ್ದಾರೆ.

ಜಗ್ಗೇಶ್, ಉಪೇಂದ್ರ, ಯೋಗರಾಜ ಭಟ್ ಸೇರಿದಂತೆ ಹಲವು ನಟ-ನಟಿಯರು, ವಿರೋಧಪಕ್ಷದ ನಾಯಕ ಆರ್. ಅಶೋಕ, ಸಂಸದ ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಲವು ರಾಜಕೀಯ ನಾಯಕರು ಸರೋಜಾದೇವಿ ಅವರ ಅಂತಿಮ ದರ್ಶನ ಪಡೆದರು.

ಸರೋಜಾ ದೇವಿ ಜನಿಸಿದ್ದು 1938ರ ಜನವರಿ 7ರಂದು, ಬೆಂಗಳೂರಿನಲ್ಲಿ. ತಂದೆ ಬೈರಪ್ಪ, ಪೊಲೀಸ್ ಅಧಿಕಾರಿಯಾಗಿದ್ದರು. ತಾಯಿ ರುದ್ರಮ್ಮ. 14ನೇ ವಯಸ್ಸಿಗೆ ಸಿನಿಮಾ ರಂಗ ಪ್ರವೇಶ. ಮಹಾಕವಿ ಕಾಳಿದಾಸ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು.

ಆರೂವರೆ ದಶಕಗಳು ಚಿತ್ರರಂಗದಲ್ಲಿ‌ ಕ್ರಿಯಾಶೀಲರಾಗಿದ್ದ ಸರೋಜಾದೇವಿ ಅವರು, ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.

1955ರಲ್ಲಿ ಮಹಾಕವಿ ಕಾಳಿದಾಸ ಮೊದಲ ಚಿತ್ರ, 2019ರಲ್ಲಿ ಬಿಡುಗಡೆಯಾದ ಪುನೀತ್ ರಾಜ್ಕುಮಾರ್ ನಟನೆಯ ‘ನಟಸಾರ್ವಭೌಮ’ ಅವರು ನಟಿಸಿದ ಕೊನೆಯ ಚಿತ್ರ.

'ಕಿತ್ತೂರು ಚೆನ್ನಮ್ಮ, 'ಅಣ್ಣಾ ತಮ್ಮ', 'ಭಕ್ತ ಕನಕದಾಸ', 'ಬಾಳೇ ಬಂಗಾರ', 'ನಾಗಕನ್ಯ', 'ಬೆಟ್ಟದ ಹೂವು', 'ಕಸ್ತೂರಿ ನಿವಾಸ', 'ಬಬ್ರುವಾಹನ, ಕಥಾಸಂಗಮ, 'ಅಮರ ಶಿಲ್ಪಿ ಜಕಣಾಚಾರಿ', 'ಮಲ್ಲಮ್ಮನ ಪವಾಡ' ಅಗ್ನಿ ಐ.ಪಿ.ಎಸ್ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು.

ಆರು ದಶಕಗಳಲ್ಲಿನ ಸಿನಿಮಾ ಪಯಣದಲ್ಲಿ ಬಿ.ಸರೋಜಾದೇವಿ ಅವರಿಗೆ ಹಲವು ಗೌರವಗಳು ಸಂದಿವೆ. 1965ರಲ್ಲಿ ಅಭಿನಯ ಸರಸ್ವತಿ ಗೌರವ, 1969ರಲ್ಲಿ ಪದ್ಮಶ್ರೀ, 1992ರಲ್ಲಿ ಪದ್ಮಭೂಷಣ, 1988ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2006ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಲಾಗಿದೆ.

ಕರ್ನಾಟಕ ಸರ್ಕಾರದಿಂದ ರಾಜ್‌ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ, ತಮಿಳುನಾಡು ಸರ್ಕಾರದಿಂದ ಕಲೈಮಾಮಣಿ ಜೀವಮಾನ ಸಾಧನೆ ಪ್ರಶಸ್ತಿಗೂ ಭಾಜನರಾಗಿದ್ದಾರೆ.



Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!