ಹೆಜಮಾಡಿ ಟೋಲ್ ಗೇಟ್ ಮುಂದೆ ಬಳಿ ಹೆದ್ದಾರಿಯಲ್ಲೇ ನಿಂತಿದ್ದ ಲಾರಿಗೆ ಉಡುಪಿಯಿಂದ ಮಂಗಳೂರಿಗೆ ಹೋಗುತ್ತಿದ್ದ ಕಾರೊಂದು ಢಿಕ್ಕಿಯಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಿನ್ನೆ ನಡೆದಿದೆ. ಸುರತ್ಕಲ್ ಕೋಡಿಕೆರೆ ನಿವಾಸಿ ಲೋಕೇಶ್ ಮತ್ತು ವಿರಾಜ್ ಕುಳಾಯಿ ಗಂಭೀರವಾಗಿ ಗಾಯಗೊಂಡವರು.
ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯು ನಿಂತಿರುವುದು ಕಾಣದೇ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಕಾರಿನೊಳಗೆ ಸಿಲುಕಿಕೊಂಡಿದ್ದ ವಿರಾಜ್ ಅವರನ್ನು ಹೊರತೆಗೆಯಲು ಒಂದು ಗಂಟೆಯ ಕಾರ್ಯಾಚರಣೆ ನಡೆಸಲಾಯಿತು.
ನಿರಂತರವಾಗಿ ಅಪಘಾತ ಪ್ರಕರಣಗಳು ನಡೆಯುತ್ತಿದ್ದರೂ ಕೂಡಾ ವಾಹನಗಳನ್ನು ಬದಿಗೆ ಸಾಗುವಂತೆ ಸೂಚನೆ ನೀಡದೇ ಇರುವುದು ಟೋಲ್ ಸಿಬ್ಬಂದಿಗಳ ಬೇಜವಬ್ದಾರಿತನವನ್ನು ಪ್ರದರ್ಶಿಸುತ್ತದೆ ಎಂದು ವಾಹನ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

0 ಕಾಮೆಂಟ್‌ಗಳು