BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಆಚಾರ ವಿಚಾರ

ಉಡುಪಿಯಲ್ಲಿ ಬನ್ನಂಜೆ 90 ಉಡುಪಿ ನಮನ

     

ವಿದ್ಯಾವಾಚಸ್ಪತಿ  ಪದ್ಮಶ್ರೀ  ಶ್ರೀ ಬನ್ನಂಜೆ ಗೋವಿಂದಾಚಾರ್ಯ ನೆನಪಿನ ಬನ್ನಂಜೆ 90 ಉಡುಪಿ ನಮನ ಕಾರ್ಯ ಕ್ರಮವು ಇದೇ ಬರುವ ಆಗಸ್ಟ್ ಮೂರರಂದು ಭಾನುವಾರ ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಉಡುಪಿಯ ಎಂಜಿಎಂ  ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬಹಳ --ಅರ್ಥಪೂರ್ಣವಾಗಿ  ನಡೆಯಲಿದೆ ಎಂದು ಸಮಿತಿಯ ಪ್ರಧಾನ ಸಂಚಾಲಕರಾದ ರವಿರಾಜ್ ಎಚ್ .ಪಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.



ಬನ್ನಂಜೆ ಗೋವಿಂದ ಆಚಾರ್ಯ ಪ್ರತಿಷ್ಠಾನ ರಿಜಿಸ್ಟರ್ ಬೆಂಗಳೂರು ಇದರ ಬೆಳಕಿನ ಅಡಿಯಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠ , ಹಾಗೂ ಎಂಜಿಎಂ ಕಾಲೇಜು ಉಡುಪಿ ಇವರ ಸಾಂಗತ್ಯದಲ್ಲಿ ನಡೆಯುವ ಒಂದು ದಿನದ ಕಾರ್ಯಕ್ರಮದಲ್ಲಿ ಬೆಳಗ್ಗೆ 8 ಗಂಟೆಗೆ ಬನ್ನಂಜೆ ಅವರ ಮೂಡುಬೆಟ್ಟಿನ ಮೂಲ ಮನೆಯ ಬ್ರಹ್ಮಸ್ಥಾನ ಮತ್ತು ನಾಗ ಸ್ಥಾನದ ಪ್ರಾರ್ಥನೆ ಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗುತ್ತದೆ . 8:30 ಕ್ಕೆ ಬನ್ನಂಜೆಯವರು ಕಲಿತ ಆದಿಉಡುಪಿ ಶಾಲೆಯಿಂದ ಬನ್ನಂಜೆ ಯವರ ಭಾವಚಿತ್ರದೊಂದಿಗೆ ಮೆರವಣಿಗೆ ಎಂಜಿಎಂ ಕಾಲೇಜಿನವರಿಗೆ ನಡೆಯಲಿದ್ದು, ಮೆರವಣಿಗೆಗೆ ಚಾಲನೆ ಯನ್ನು ನಾಡೋಜ ಪ್ರೊ ಕೆ. ಪಿ. ರಾವ್ ಅವರು ನೀಡಲಿದ್ದಾರೆ.

 

ಬೆಳಗ್ಗೆ 9:20ಕ್ಕೆ ಬನ್ನಂಜೆಯವರ ಕೃತಿ ಆಧಾರಿತ ಯಕ್ಷಗಾನ ಪ್ರಸ್ತುತಿ ಕಾರ್ಯಕ್ರಮವಿರುತ್ತದೆ. ಬೆಳಗ್ಗೆ 10 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಕರ್ನಾಟಕದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀ ವೇದವ್ಯಾಸಾಚಾರ್ಯ ಶ್ರೀಶಾನಂದರು ಉದ್ಘಾಟಿಸಲಿದ್ದು, ಛಾಯಾಚಿತ್ರ ಹಾಗೂ ಬನ್ನಂಜೆಯವರು ಬಳಸುತ್ತಿದ್ದ ವಸ್ತು ಪ್ರದರ್ಶನವನ್ನು ತರಂಗದ ವ್ಯವಸ್ಥಾಪಕ ಸಂಪಾದಕ ರಾದ ಶ್ರೀ ಸಂಧ್ಯಾ ಪೈಯವರು ಉದ್ಘಾಟಿಸುತ್ತಾರೆ. ಸಭಾಧ್ಯಕ್ಷತೆ ಯನ್ನು ನಾಡಿನ ಹಿರಿಯ ಸಾಹಿತಿ ವೈದೇಹಿ ಅವರು ವಹಿಸಿಕೊಳ್ಳಲಿದ್ದಾರೆ.

 

ಸಭಾ ಕಾರ್ಯ ಕ್ರಮದಲ್ಲಿ ಬನ್ನಂಜೆಯವರ ಕವಿತೆಗಳ ಹಾಡನ್ನು ಕವಿತಾ ಉಡುಪ ಹಾಗೂ ಸುಮಾ ಶಾಸ್ತ್ರಿಯವರು ನಡೆಸಿಕೊಡಲಿದ್ದಾರೆ. ನಂತರ ಬೆಳಗ್ಗೆ ಹಾಗೂ ಮಧ್ಯಾಹ್ನ ನಾಡಿನ ಹಿರಿಯ ವಿದ್ವಾಂಸರಿಂದ ಬನ್ನಂಜೆಯವರ ಕುರಿತಾದ 2 ಗೋಷ್ಠಿಗಳು ನಡೆಯಲಿದ್ದು, ಗೋಷ್ಟಿಯಲ್ಲಿ ಶ್ರೀ ಬ್ರಹ್ಮಣ್ಯಾಚಾರ್ಯ, ಶ್ರೀಕಾಂತ್ ಶೆಟ್ಟಿ ಕಾರ್ಕಳ, ಪಾದೇಕಲ್ಲು ವಿಷ್ಣುಭಟ್, ನಿತ್ಯಾನಂದ ಪಡ್ರೆ, ಎಂ.ಎಲ್ಸಾಮಗ , ಗಣನಾಥ್ ಎಕ್ಕಾರ್ ಭಾಗವಹಿಸಲಿದ್ದಾರೆ.


ಸಮಾರೋಪ ಸಮಾರಂಭ ಶ್ರೀ ವಿದ್ಯಾಭೂಷಣರ ಸಭಾಧ್ಯಕ್ಷತೆಯಲ್ಲಿ ಸಮಾರೋಪನುಡಿಯನ್ನು ಗಂಗಾವತಿ ಪ್ರಾಣೇಶ್ ಅವರು ನೆರವೇರಿಸಿ ಕೊಡಲಿದ್ದಾರೆ.


ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಮಲ್ಲೇಪುರಂ ಜಿ ವೆಂಕಟೇಶ್ ನಿರ್ವಹಿಸುತ್ತಾರೆ.


ಸಭಾ ಕಾರ್ಯ ಕ್ರಮದ ನಂತರ ಸಂಜೆ 5:30ಕ್ಕೆ ಶ್ರೀ ವಿದ್ಯಾಭೂಷಣರಿಂದ ಆಚಾರ್ಯರ ಹಾಡುಗಳ ಹಾಡು, ನಾದ ಲಹರಿ ಕಾರ್ಯಕ್ರಮ ನಡೆಯಲಿದೆ.

 


*
ಬನ್ನಂಜೆ 90 ಉಡುಪಿ ನಮನದ ಶುಭ ಯಾತ್ರೆಯು ಆಗಸ್ಟ್ 2ನೇ ತಾರೀಖು ಸಂಜೆ 4.30ಕ್ಕೆ ರಾಜಾಂಗಣದಲ್ಲಿ ಶ್ರೀ ಶ್ರೀ ಸುಗುಣೇಂದ್ರ ತೀರ್ಥರ ಆಶೀರ್ವಾದದೊಂದಿಗೆ ಆರಂಭ ಆಗುತ್ತದೆ. ಪರಂಪರೆಯಿಂದ ಆಚಾರ್ಯರ ಕುಟುಂಬ ಕ್ಕೆ ಅವಿನಾಭಾವ ಸಂಬಂಧ ಇರುವ ಅದಮಾರು ಮಠದ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥರ ಆಶೀರ್ವಚನ ಮತ್ತು ಆಚಾರ್ಯರನ್ನು ಬಲ್ಲ ಹಿರಿಯರ ಹಿತನುಡಿಗಳಿವೆ. ಅಂದು ಶ್ರೀ ಸುಚೇಂದ್ರ ಪ್ರಸಾದ್ ನಿರ್ದೇಶನ ಮತ್ತು ಅಭಿ ನಯದ ಪಿತಾಮಹ ಎಂಬ ಆಚಾರ್ಯರ ತಂದೆಯವರ ಜೀವನ ಚರಿತ್ರೆಯ ನಾಟಕ ಪ್ರದರ್ಶನವೂ ಇದೆ.

ಪತ್ರಿಕಾಗೋಷ್ಠಿಯಲ್ಲಿ ಆಯೋಜನಾ ಸಮಿತಿಯ ಅಧ್ಯಕ್ಷ ಉಡುಪಿ ವಿಶ್ವನಾಥ್ ಶೆಣೈ, ಸಮಿತಿಯ ಉಪಾಧ್ಯಕ್ಷರಾದ  ರಂಗ  ಪೈ,  ಕೋಶಾಧಿಕಾರಿ ಪ್ರೊ. ಸದಾಶಿವ ರಾವ್,  ಸಂಚಾಲಕ ಜನಾರ್ದನ ಕೊಡ ವೂರು ಉಪಸ್ಥಿತರಿದ್ದರು. 



Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!