BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಶಿಕ್ಷಣ

​ಉಡುಪಿ ಪಿಪಿಸಿಯಲ್ಲಿ ಸಂಸ್ಥಾಪಕರ ದಿನಾಚರಣೆ

ಪೂಜ್ಯ ವಿಬುಧೇಶ ತೀರ್ಥರಿಗೆ ವಿಜ್ಞಾನ ಮತ್ತು ಇಂಗ್ಲಿಷಿನ ಬಗ್ಗೆ ಪ್ರೀತಿ ಇತ್ತು. ಬ್ರಿಟಿಷರ ವಿರುದ್ಧ ​ಸ್ವಾತಂತ್ರ್ಯಕ್ಕಾಗಿ  ಹೋರಾಟ ಮಾಡಿದ್ದ ಅವರ ಇಂಗ್ಲಿಷ್ ಮೇಲೆ ಪ್ರೀತಿ ಭಾಷೆಯ ತಿಳುವಳಿಕೆಯ ಅವಶ್ಯಕತೆ ಆಗಿತ್ತು. ಧಾರ್ಮಿಕತೆಯೊಂದಿಗೆ ಸಾಮಾಜಿಕ ಕಾರ್ಯಗಳಲ್ಲಿ ಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. 



ಸ್ವಾಮೀಜಿಯ ದೂರದೃಷ್ಟಿ, ಕರ್ತತ್ವ ಶಕ್ತಿ, ಅಧ್ಯಾಪಕರನ್ನು ಮೆರಿಟ್ ಆಧಾರದ ಮೇಲೆ ನೇಮಿಸುವುದರಿಂದ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಗಳು ಬೆಳೆದು ನಿಂತಿದೆ. ಜಾತಿ ಮತ ಧರ್ಮದ ಸಂಕುಚಿತ ದೃಷ್ಟಿ ಇಲ್ಲದೆ ಪರಮ ಯೋಗಿ ಆಗಿದ್ದರು’ ಎಂದು ಪೂರ್ಣಪ್ರಜ್ಞ ಕಾಲೇಜಿನ ವಿಶ್ರಾಂತ ಪ್ರಾಚಾರ್ಯರಾದ ಪ್ರೊ.ಕೆ.ಸದಾಶಿವ ರಾವ್ ಇವರು ಉಡುಪಿ ಪೂರ್ಣ ಪ್ರಜ್ಞ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಸಂಸ್ಥಾಪಕರ ದಿನಾಚರಣೆಯಲ್ಲಿ ಪೂಜ್ಯ ಶ್ರೀ ವಿಬುಧೇಶ ತೀರ್ಥರನ್ನು ಸ್ಮರಿಸಿ ಮಾತನಾಡಿದರು.


ಸೆಲ್ಫಿಪೇಜ್ ಡೆವಲರ‍್ಸ್ ​ಪ್ರೈವೆಟ್  ಲಿಮಿಟೆಡ್, ಬೆಂಗಳೂರು ಇದರ ವ್ಯವಸ್ಥಾಪಕ ನಿರ್ದೇಶಕ, ಪೂರ್ಣಪ್ರಜ್ಞ ಸಂಸ್ಥೆಯ ಹಳೆ ವಿದ್ಯಾರ್ಥಿ ನಂಜೇಶ್ ಬೆನ್ನೂರು ಮಾತನಾಡುತ್ತಾ, ‘ಎಐ ನಮ್ಮ ಜೀವನ ರೂಪಿಸಿಕೊಳ್ಳುವುದಕ್ಕೆ ಪೂರಕವಾಗಿ ಬಳಕೆಯಾಗಬೇಕು.  ಎಲ್ಲರೂ ತಾಳ್ಮೆ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಜೀವನದ ಗುರಿ ಏನು ಎಂಬುದರ ಬಗ್ಗೆ ಚಿಂತಿಸ ಬೇಕು. 


ಸರ್ಕಾರದಿಂದ ಸಿಗಬಹುದಾದ ಸವಲತ್ತುಗಳನ್ನು ಬಳಸುತ್ತಾ ನಮ್ಮ ಗುರಿಯನ್ನು ಹೇಗೆ ತಲುಪಬಹುದು ಅನ್ನುವುದು ಕಲಿಯುತ್ತಾ ಹೋದಂತೆ ಹೊಸ ಯೋಚನೆ-ಯೋಜನೆಗಳು ರೂಪುಗೊಳ್ಳುತ್ತದೆ. ನಾವು ಕಂಡ ಕನಸು ನನಸಾಗುತ್ತದೆ. ಸಂವಹನದಲ್ಲಿ ಆಂಗ್ಲ ಭಾಷೆಯ ಪ್ರಯೋಗ ವಿಬುಧೇಶ ತೀರ್ಥರ ಆಣತಿಯಂತೆ ಪೂರ್ಣಪ್ರಜ್ಞ ಶಾಲೆಯಲ್ಲಿ ಕಲಿತ ನಾನು ಅಳವಡಿಸಿಕೊಂಡಿದ್ದರಿ​೦ದ ಇಂದು ​ರಾಷ್ಟ್ರೀಯ  ಜಾಗತಿಕ ಮಟ್ಟದಲ್ಲಿ ನನ್ನ ಸಂಸ್ಥೆಯನ್ನು ಬೆಳೆಸಲು ಸಾಧ್ಯವಾಯಿತು’ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಸಂಸ್ಥೆಗಳ ಗೌರವ ಪ್ರಧಾನ ಕಾರ್ಯದರ್ಶಿ ಡಾ|ಎ.ಪಿ.ಭಟ್ ಮಾತನಾಡುತ್ತಾ, ‘ಪೂಜ್ಯರಿಗೆ ವಿಜ್ಞಾನದ ಬಗ್ಗೆ ವಿಶೇಷ ಆಸಕ್ತಿ ಇತ್ತು. ಪ್ರತಿಭಾ ಪಲಾಯನ ಆಗಬಾರದೆಂದು ಪೂರ್ಣಪ್ರಜ್ಞ ಸೈಂಟಿ​ಫಿಕ್ರೀಸರ್ಚ್ ಸೆಂಟರನ್ನು ಸ್ಥಾಪಿಸಿದರು. 


ದೇಶದ ಶ್ರೇಷ್ಠ ವಿಜ್ಞಾನಿಗಳ ಸಂಪರ್ಕ ಸ್ವಾಮೀಜಿಯವರಿಗಿತ್ತು. ನಾಡಿನ ಶ್ರೇಷ್ಠ ವಿಜ್ಞಾನಿ ಗಳನ್ನು ಉಡುಪಿಗೆ ಕರೆಯಿಸಿ ಕಾರ್ಯಕ್ರಮ ಹಮ್ಮಿಕೊಂಡಿದ್ದ ಅವರಿಗೆ ವಿಜ್ಞಾನದ ಬಗೆಗೆ, ವಿಜ್ಞಾನಿಗಳ ಬಗೆಗೆ ಇರುವ ಒಲವು ಗೊತ್ತಾಗುತ್ತದೆ’ ಎಂದು ಹೇಳಿದರು.


ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ|ಪಿ.ಎಸ್.ಐತಾಳ್,  ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಗೌರವ ಕಾರ್ಯದರ್ಶಿ ಸಿ.ಎ. ಟಿ.ಪ್ರಶಾಂತ ಹೊಳ್ಳ, ಪೂರ್ಣಪ್ರಜ್ಞ ಕಾಲೇಜಿನ ಪ್ರಾಚಾರ್ಯ ಡಾ|ರಾಮು ಎಲ್, ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಚಾರ್ಯ ಡಾ|ಚಂದ್ರಕಾ​೦ತ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಸಂತೋಷ್ ಕುಮಾರ್ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ರಮಾನಂದ ರಾವ್ ನಿರೂಪಿಸಿದ ಕಾರ್ಯಕ್ರಮದಲ್ಲಿ ವಾಣಿಜ್ಯ​ಶಾಸ್ರ ಪ್ರಾಧ್ಯಾಪಿಕೆ ಶ್ರೀದೇವಿ ಬಾಳಿಗ ವಂದಿಸಿದರು.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!