BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಭಕ್ತಿ ಪಥ

ಶ್ರೀಶಿರೂರುಮಠದ ಕೀರ್ತಿಶೇಷ ಶ್ರೀಶ್ರೀಲಕ್ಷ್ಮೀವರತೀರ್ಥಶ್ರೀಪಾದರ ಆರಾಧನೆ

ಉಡುಪಿಯ ಶ್ರೀಮಧ್ವಾಚಾರ್ಯ ಕರಾರ್ಚಿತ ಶ್ರೀಕೃಷ್ಣ ದೇವರಿಗೆ, ಶ್ರೀವಾದಿರಾಜ ಗುರುಸಾರ್ವಭೌಮ ಪ್ರತಿಷ್ಠಾಪಿತ ಶ್ರೀಮುಖ್ಯ ಪ್ರಾಣದೇವರಿಗೆ 47 ವರ್ಷಗಳ ಕಾಲ ವಿಧಿವತ್ತಾಗಿ ಪೂಜೆಗಳನ್ನು ಸಲ್ಲಿಸಿ ಪೊಡವಿಗೊಡೆಯನಿಗೆ ನಿರಂತರ ಮುನ್ನೂರು ವೈವಿದ್ಯಮಯ ಅಲಂಕಾರ ಸೇವೆಯ ಮುಖಾಂತರ ಮೂರು ವೈಭವದ ಪರ್ಯಾಯ ಮಹೋತ್ಸವವನ್ನು ಭಗವಂತನ ಪಾದಕಮಲಗಳಿಗೆ ಸಮರ್ಪಿಸಿದ ಶ್ರೀಶಿರೂರು ಮಠದ ಕೀರ್ತಿಶೇಷ ಪರಮಪೂಜ್ಯ ಶ್ರೀಲಕ್ಷ್ಮೀವರತೀರ್ಥಶ್ರೀಪಾದರ ಏಳನೇವರ್ಷದ ಆರಾಧನೆಯು ವಿಶ್ವಾವಸು ಸಂ!ರದ ಕರ್ಕಾಟಕಮಾಸ ದಿನ15 ಸಲುವ ಶ್ರಾವಣಶುದ್ಧ ಸಪ್ತಮೀ ಗುರುವಾರ ಜುಲೈ 31ರಂದು ಉಡುಪಿ ರಥಬೀದಿಯಲ್ಲಿರುವ ಶ್ರೀರಾಘವೇಂದ್ರಸ್ವಾಮಿಗಳವರ ಮಠದಲ್ಲಿ ವಿಧಿವತ್ತಾಗಿ ವೈಭವದಿಂದ ನೆರವೇರಿತು.

ಪ್ರಾತಃಕಾಲ 6.30ಕ್ಕೆ ಶ್ರೀರಾಘವೇಂದ್ರಮಠದಲ್ಲಿ ಶ್ರೀರಾಯರ ವೃಂದಾವನದ ಸಮ್ಮುಖದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಪವಮಾನ ಕಲಶಾಭಿಷೇಕ ಹೋಮ ಹಾಗೂ ವಿರಜಾ ಹೋಮ ಜರಗಿತು.ತದನಂತರ ಶ್ರೀಶಿರೂರುಮಠದ ಕೀರ್ತಿಶೇಷ ಶ್ರೀಲಕ್ಷ್ಮೀವರತೀರ್ಥರ ಮೃತ್ತಿಕಾ ವೃಂದಾವನಕ್ಕೆ ಪಿ.ಲಾತವ್ಯ ಆಚಾರ್ಯರು ಕಲಶಾಭಿಷೇಕ ಸಲ್ಲಿಸಿದರು.ವೇದಮೂರ್ತಿ ಶ್ರೀಕೆಮುಂಡೆಲ್ ಸುಬ್ರಮಣ್ಯ ಭಟ್ ಹಾಗೂ ವೇದಮೂರ್ತಿ ಶ್ರೀಗಣೇಶಣ್ಣನವರು ಧಾರ್ಮಿಕ ಪ್ರಕ್ರಿಯೆಗಳನ್ನು ಶಾಸ್ತ್ರೋಕ್ತವಾಗಿ ನಡೆಸಿಕೊಟ್ಟರು.

ಮಧ್ಯಾಹ್ನ ಆಗಮಿಸಿದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜರಗಿತು.

ಕೀರ್ತಿಶೇಷ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಪೂರ್ವಾಶ್ರಮದ ಬಂಧುಗಳು ನೆರವೇರಿಸಿದ ಈ ಆರಾಧನಾ ಮಹೋತ್ಸವದಲ್ಲಿ ಉಡುಪಿ ಶ್ರೀರಾಘವೇಂದ್ರ ಮಠದ ಮುಖ್ಯಸ್ಥರಾದ ಶ್ರೀಜಯತೀರ್ಥ ಆಚಾರ್ಯ, ಶ್ರೀಅಪ್ಪಣ್ಣ ಆಚಾರ್ಯ, ಶ್ರೀವಾಸುದೇವಣ್ಣ ಪೂರ್ವಾಶ್ರಮದ ಕುಟುಂಬಿಕರಾದ ವೇದಮೂರ್ತಿ ಶ್ರೀಅನಂತ ತಂತ್ರಿ,ಶ್ರೀಲಕ್ಷ್ಮೀನಾರಾಯಣ ತಂತ್ರಿ,ಶ್ರೀಪ್ರಹ್ಲಾದ ಆಚಾರ್ಯ ಸೊಂಡೂರು,ಶ್ರೀರಾಜಗೋಪಾಲ್,ಡಾ!!ವ್ಯಾಸರಾಜ ತಂತ್ರೀ, ಶ್ರೀಪಿ.ವಾದಿರಾಜ ಆಚಾರ್ಯ, ಶ್ರೀಪಿ.ಶ್ರೀನಿವಾಸ ಆಚಾರ್ಯ, ಶ್ರೀಪಿ.ವೃಜನಾಥ ಆಚಾರ್ಯ, ಶ್ರೀವಿ.ನಾಗೇಶ ಆಚಾರ್ಯ, ಶ್ರೀವಿ.ಮಹೇಶ ಆಚಾರ್ಯ, ಶ್ರೀರಾಜೇಂದ್ರ ಕಾರ್ಪ್ ಬ್ಯಾಂಕ್,

ಶ್ರೀಮೋಹನದಾಸ ಭಟ್, ಶ್ರೀಜಯರಾಂ ರಾವ್, ಶ್ರೀಅನಂತಉಪಾಧ್ಯ ಸಾಂತ್ಯಾರ್,ಶ್ರೀರಾಜೇಂದ್ರ ಆಚಾರ್ಯ ಬಡಗುಬೆಟ್ಟು, ಶ್ರೀಶಂಕರನಾರಾಯಣ ಹೊಳ್ಳಮಿನರ್ವ ಕುಂದಾಪುರ, ಶ್ರೀಅರ್ಜುನ್ ಆಚಾರ್ಯ, ಶ್ರೀಅಕ್ಷೋಭ್ಯ ಆಚಾರ್ಯ, ಶ್ರೀವಿಶಾಲ್ ಆಚಾರ್ಯ ಸೇರಿದಂತೆ ಇನ್ನೂ ಅನೇಕ ಗಣ್ಯರು ಅತಿಥಿಗಳು ಉಪಸ್ಥಿತರಿದ್ದರು.

ಕೇಮಾರು ಸಾಂದೀಪನಿ ಮಠದ ಶ್ರೀಈಶವಿಠಲದಾಸ ಸ್ವಾಮೀಜಿಯವರು ಶ್ರೀಕೇಮಾರುಮಠದಲ್ಲಿ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಆರಾಧನಾ ಉತ್ಸವದ ನಿಮಿತ್ತ ವಿಶೇಷ ಪೂಜೆ ನೆರವೇರಿಸಿ ಶ್ರೀಪಾದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!