BREAKING
ಭಕ್ತಿಪಥ

​ಉಡುಪಿಯಿಂದ ಪ್ರಾರಂಭಗೊಂಡ ಆದಿಯೋಗಿ ರಥದ 70 ದಿನಗಳ ಶಿವ ಯಾತ್ರೆ

ಉಡುಪಿ:ಈಶ ಯೋಗ ಮಹಾಶಿವರಾತ್ರಿ ಶಿವಾಂಗ ಸಾಧನದ ಭಾಗವಾಗಿ, ಆದಿಯೋಗಿ ರಥವು ಉಡುಪಿಯಿಂದ 70 ದಿನಗಳ ಶಿವ ಯಾತ್ರೆಯನ್ನು ಆರಂಭಿಸುವ ಮೂಲಕ 1000+ ಕಿ.ಮೀ ತೀರ್ಥ ಯಾತ್ರೆ ಯನ್ನು ಪೂರೈಸಲಿದೆ. ಫೆಬ್ರವರಿ 13,   2026 ರಂದು, ವೈಭವಯುತ ಮಹಾಶಿವರಾತ್ರಿ  ಹಬ್ಬಕ್ಕೂ ಮುನ್ನ, ಕೊಯಂಬತ್ತೂರಿನ ಈಶ ಯೋಗ ಕೇಂದ್ರದ ಬಳಿ ಇರುವ ಭವ್ಯ ಆದಿಯೋಗಿಯ ಬಳಿ ಯಾತ್ರೆಯು ಪೂರ್ಣಗೊಳ್ಳಲಿದೆ.


ಉಡುಪಿಯ ಪುತ್ತಿಗೆ ಶ್ರೀ ಕೃಷ್ಣ ಮಠದ ಪರ್ಯಾಯ ಶ್ರೀಗಳಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಶಿವ ಯಾತ್ರೆಯನ್ನು ಉದ್ಘಾಟಿಸಿದರು.


ಸದ್ಗುರುಗಳು ವಿನ್ಯಾಸಗೊಳಿಸಿರುವ ಶಕ್ತಿಯುತ ಆಧ್ಯಾತ್ಮಿಕ ಸಾಧನವಾದ ಶಿವಾಂಗ ಸಾಧನವು ಆಂತರ್ಯದಲ್ಲಿರುವ ಭಕ್ತಿಯನ್ನು ವ್ಯಕ್ತಪಡಿಸಲು ಮತ್ತು ಆದಿಯೋಗಿಯಾದ ಶಿವನತ್ತ ಗ್ರಹಣಶೀಲತೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ. ದೇವಾಲಯಗಳ ನಗರವಾದ ಉಡುಪಿಯಿಂದ ಆರಂಭಗೊಂಡು, ಆದಿಯೋಗಿ ರಥವು ಡಿಸೆಂಬರ್ 12ರಂದು ಮಂಗಳೂರಿಗೆ ತಲುಪಲಿದ್ದು, ಅಲ್ಲಿಂದ ಪುತ್ತೂರು, ಸುಳ್ಯ, ಮಡಿಕೇರಿ, ಬೆಟ್ಟದಪುರ, ಕೆ.ಆರ್. ನಗರ, ಮೈಸೂರು, ಸದ್ಗುರು ಸನ್ನಿಧಿ (ಚಿಕ್ಕಬಳ್ಳಾಪುರ), ಹೊಸಕೋಟೆ, ಮಾಲೂರು, ರಾಯಕೋಟೆ ಮತ್ತು ಅವಿನಾಶಿ ಸೇರಿದಂತೆ ಪ್ರಮುಖ ಪಟ್ಟಣಗಳ ಮೂಲಕ ಪ್ರಯಾಣಿಸಿ, ಈಶ ಯೋಗ ಕೇಂದ್ರವು ನೆಲೆಸಿರುವ ವೆಳ್ಳಿಯಂಗಿರಿ ಪರ್ವತದ ತಪ್ಪಲನ್ನು ತಲುಪಲಿದೆ.


ಶಿವನ ಮೇಲಿನ ತೀವ್ರತರ ಭಕ್ತಿಯ ಅಭಿವ್ಯಕ್ತಿಯಾಗಿ ರೂಪಿಸಲಾಗಿರುವ ಈ ಯಾತ್ರೆಯು ಎಲ್ಲರನ್ನು ಸ್ವಾಗತಿಸುತ್ತದೆ ಮತ್ತು ಕರ್ನಾಟಕದಾದ್ಯಂತ ಸಾವಿರಾರು ಜನರಿಗೆ ರೂಪಾಂತರಣೀಯ ಪ್ರಯಾಣದಲ್ಲಿ ಭಾಗಿಯಾಗಲು, ಸ್ವಯಂಸೇವೆ ಮಾಡಲು ಮತ್ತು ತನ್ಮಯರಾಗಲು ಅವಕಾಶವನ್ನು ಒದಗಿಸುತ್ತದೆ.



ಅರ್ಪಣೆಯ ಮನೋಭಾವಕ್ಕೆ ಅನುಗುಣವಾಗಿ, ಆದಿಯೋಗಿ ರಥವನ್ನು ಶಿವಾಂಗ ಸಾಧಕರು ಮತ್ತು ಭಕ್ತರು ತಾವಾಗಿಯೇ ಎಳೆಯುತ್ತಾರೆ, ಇಡೀ ಪ್ರಯಾಣವನ್ನು ಶಿಸ್ತುಬದ್ಧ, ಭಕ್ತಿಪೂರ್ವಕ ಭಾಗವಹಿಸುವಿಕೆಯ ಕ್ರಿಯೆಯಾಗಿ ರೂಪಾಂತರಿಸುತ್ತದೆ. ಆದಿಯೋಗಿಯ ಸಾನ್ನಿಧ್ಯವನ್ನು ಹೊತ್ತ ರಥವು ಪ್ರತಿ ಸ್ಥಳದಲ್ಲಿ ಮೆರವಣಿಗೆಗಳು, ಅರ್ಪಣೆಗಳು, ಸ್ತೋತ್ರಪಠಣಗಳು ಮತ್ತು ಸಮುದಾಯ ಸಭೆಗಳಿಗೆ ಕೇಂದ್ರಬಿಂದುವಾಗಿರಲಿದೆ. ನಿವಾಸಿಗಳು, ಭಕ್ತರು ಮತ್ತು ಅನ್ವೇಷಕರು ಯಾತ್ರೆಯ ಭಾಗವಾಗಿ ಸರಳ ಯೋಗ ಅಭ್ಯಾಸಗಳು ಅಥವಾ ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ. ಈ ಪ್ರಯಾಣ ಎಲ್ಲರಿಗೂ ಮುಕ್ತವಾಗಿರಲಿದ್ದು, ಭಾಗವಹಿಸಲು ಇಚ್ಚಿಸುವವರು ಒಂದು ದಿನ, ಹಲವು ದಿನಗಳು ಅಥವಾ ಸಂಪೂರ್ಣ ಅವಧಿಗೆ ಸೇರಬಹುದು.

​


ಯಾವುದೇ ಹಂತದಲ್ಲಿ ಯಾತ್ರೆಯ ಭಾಗವಾಗುವ ಆಸಕ್ತಿ ಹೊಂದಿರುವವರು ಅಥವಾ ಸ್ವಯಂಸೇವೆಯ ಮೂಲಕ ಮತ್ತು ಸ್ಥಳೀಯ ಸೌಲಭ್ಯ ಒದಗಿಸುವ ಮೂಲಕ ಯಾತ್ರೆಗೆ ನೆರವಾಗಲು ಇಚ್ಚಿಸುವವರು ಶಿವ ಯಾತ್ರೆ ತಂಡವನ್ನು 98456 67758 ಅಥವಾ 95385 29407 ಸಂಖ್ಯೆಗಳಲ್ಲಿ ಸಂಪರ್ಕಿಸಬಹುದು.




Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!